ದೋಹಾ : ಕರ್ನಾಟಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ಐವತ್ತನೇ ವಾರ್ಷಿಕೋತ್ಸವದ ಅಂಗವಾಗಿ ಸಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗೋಲ್ಡನ್ ಫಿಫ್ಟಿ ಸಮಾವೇಶದ ಪ್ರಚಾರಾರ್ಥವಾಗಿ, ಕೆ.ಸಿ.ಎಫ್. ಖತ್ತರ್ ವತಿಯಿಂದ ದಿನಾಂಕ 01-09-2023 ರಂದು ಜೀ-ಮೀಟ್ ಸಮ್ಮಿಲನ ಕಾರ್ಯಕ್ರಮವು ದೋಹಾದ ಶಾಲಿಮಾರ್ ಇಸ್ತಾಂಬುಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಅಂತಾರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಕಾರ್ಯದರ್ಶಿ ಹಾಫಿಳ್ ಉಮರುಲ್ ಫಾರೂಖ್ ಸಖಾಫಿಯವರು ದುಆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ಅಧ್ಯಕ್ಷರಾದ ಹನೀಫ್ ಪಾತೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವು ಐಸಿಎಫ್ ನಾಯಕರಾದ ಬಶೀರ್ ಪುತ್ತುಪಾಡುರವರಿಂದ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಸ್. ಎಸ್.ಎಫ್ ಸಂಘಟನೆಯ ತ್ಯಾಗಪೂರ್ಣವಾದ ಇತಿಹಾಸವನ್ನು ಮತ್ತು ಸಂಘಟನೆಯ ಅವಶ್ಯಕತೆಯನ್ನು ಮತ್ತು ಅವುಗಳ ಕಾರ್ಯವೈಖರಿಗಳನ್ನು ಕುರಿತಾಗಿ ಸಭಿಕರಲ್ಲಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ,ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಸಮಿತಿ ಫೈನಾನ್ಸ್ ಸೆಕ್ರೆಟರಿ ಮುಸ್ತಫಾ ನ’ಈಮಿ ಹಾವೇರಿ ರವರಿಂದ , ಸೆಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಹಿಂದಿರುವ ಉದ್ದೇಶ, ಅದರ ರೂಪುರೇಷೆ ಕುರಿತಾದ ಸುದೀರ್ಘವಾದ ಹಾಗೂ ಸವಿಸ್ತಾರವಾದ ಭಾಷಣ ಮೂಡಿಬಂತು. ಐಸಿಎಫ್ ನಾಯಕರಾದ ಕೆಬಿ ಅಬ್ದುಲ್ಲ ಹಾಜಿ ಮೀಲಾದ್ ಕ್ಯಾಂಪೇನ್ ಪೋಸ್ಟರ್ ಬಿಡುಗೊಡೆಗೊಳಿಸಿದರು.
ವೇದಿಕೆಯಲ್ಲಿ ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿ ಆಡಳಿತ ವಿಭಾಗದ ಅಧ್ಯಕ್ಷರಾದ ಕಬೀರ್ ಹಾಜಿ ದೇರಳಕಟ್ಟೆ, ಅಂತಾರಾಷ್ಟ್ರೀಯ ಸಮಿತಿ ಸದಸ್ಯರಾದ ಯೂಸುಫ್ ಸಖಾಫಿ ಅಯ್ಯಂಗೇರಿ, ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಹಾಜಿ ಮಾಗುಂಡಿ, ಕೆಸಿಎಫ್ ಹಿರಿಯ ನಾಯಕರೂ ಹಾಗೂ ಅಲ್’ಮದೀನ ಮಂಜನಾಡಿ ಖತ್ತರ್ ಸಮಿತಿ ಅಧ್ಯಕ್ಷರಾದ ಹಾಜಿ ಅರಬಿ ಕುಂಞ, ಜಿ-ಮೀಟ್ ಸ್ವಾಗತ ಸಮಿತಿ ಚೇರ್ಮಾನ್ ಮಿರ್ಶಾದ್ ಕನ್ಯಾನ ಉಪಸ್ಥಿತರಿದ್ದರು.
ಸ್ವಲಾತ್ ಮಜ್ಲಿಸ್ ನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಕೆಸಿಎಫ್ ನಾಯಕರಾದ ಆಸಿಫ್ ಅಹ್ಸನಿ, ಇಸ್ಹಾಕ್ ನಿಝಾಮಿ, ಝಾಕಿರ್ ಚಿಕ್ಕಮಗಳೂರು ಹಾಗೂ ಮುಹಮ್ಮದ್ ಬಿನ್ ಉಮರುಲ್ ಫಾರೂಖ್ ಸಖಾಫಿ ರವರ ಸುಮಧುರವಾದ ಕ್ರಾಂತಿ ಗೀತೆ ಸಭಿಕರಲ್ಲಿ ಇನ್ನಷ್ಟು ಹುಮ್ಮಸ್ಸು ಮೂಡಿಸಿತು. ಜೀ-ಮೀಟ್ ಸ್ವಾಗತ ಸಮಿತಿ ಕನ್ವೀನರ್ ಸಂಜಾದ್ ಝಕರಿಯ್ಯಾ ಮಜಿರ್’ಪಳ್ಳ ಸ್ವಾಗತ ಹಾಗೂ ಕಾರ್ಯಕ್ರಮ ನಿರೂಪಿಸಿದರೆ, ಸ್ವಾಗತ ಸಮಿತಿ ಪಬ್ಲಿಸಿಟಿ ವಿಭಾಗ ಕನ್ವೀನರ್ ಸತ್ತಾರ್ ಅಶ್ರಫಿ ಮಠ ಧನ್ಯವಾದಗೈದರು.