ದುಬೈ: ಒಮಾನ್ನ ಬಜೆಟ್ ಏರ್ಲೈನ್ ‘ಸಲಾಮ್ ಏರ್’ ದುಬೈ ಮತ್ತು ಫುಜೈರಾದಿಂದ ಕೋಝಿಕೋಡ್ಗೆ ಸೇವೆಯನ್ನು ಪ್ರಾರಂಭಿಸಲಿದೆ.
ಮುಂದಿನ ತಿಂಗಳಿನಿಂದ ಮಸ್ಕತ್ ಮೂಲಕ ಕೋಝಿಕ್ಕೋಡ್ಗೆ ಸೇವೆ ಆರಂಭವಾಗಲಿದೆ. ದುಬೈನಿಂದ ದೈನಂದಿನ ಮತ್ತು ಫುಜೈರಾದಿಂದ ವಾರಕ್ಕೆ ಎರಡು ಬಾರಿ ಕೋಝಿಕ್ಕೋಡ್ಗೆ ವಿಮಾನವಿರಲಿದೆ.
ಸಲಾಮ್ ಏರ್ ಅಕ್ಟೋಬರ್ ಮೊದಲ ವಾರದಿಂದ ಹೊಸ ಸೇವೆಗಳನ್ನು ಪ್ರಾರಂಭಿಸಲಿದೆ. ಅಕ್ಟೋಬರ್ 1 ರಿಂದ, ದುಬೈನಿಂದ ಮಸ್ಕತ್ ಮೂಲಕ ವಾರದ ಪ್ರತಿ ದಿನ ಕೋಝಿಕ್ಕೋಡ್ಗೆ ವಿಮಾನ ಇರಲಿದೆ. ಅಕ್ಟೋಬರ್ 2 ರಿಂದ ಸೋಮವಾರ ಮತ್ತು ಬುಧವಾರದಂದು ಫುಜೈರಾದಿಂದ ಮಸ್ಕತ್ ಮೂಲಕ ಕೋಝಿಕ್ಕೋಡ್ಗೆ ಸೇವೆ ಇರುತ್ತದೆ.
ಈ ದಿನಗಳಲ್ಲಿ ವಿಮಾನವು ಫುಜೈರಾದಿಂದ ಬೆಳಿಗ್ಗೆ 10:20 ಮತ್ತು ರಾತ್ರಿ 7:50 ಕ್ಕೆ ಹೊರಡಲಿದೆ. ಮಸ್ಕತ್ ನಲ್ಲಿ ಟ್ರಾನ್ಸಿಟ್ ನಂತರ ವಿಮಾನವು ಬೆಳಗಿನ ಜಾವ 3.20ಕ್ಕೆ ಕೋಝಿಕ್ಕೋಡ್ನಲ್ಲಿ ಇಳಿಯಲಿದೆ. ಆನ್ಲೈನ್ನಲ್ಲಿ ಫುಜೈರಾ ಕೋಝಿಕ್ಕೋಡ್ ಸೇವೆಯ ಪ್ರಸ್ತುತ ದರವು 361 ದಿರ್ಹಮ್ಗಳು. ಬೆಳಗ್ಗೆ 4.20ಕ್ಕೆ ಕೋಝಿಕ್ಕೋಡ್ನಿಂದ ವಿಮಾನ ಹಿಂತಿರುಗಲಿದೆ. ಮಸ್ಕತ್ನಲ್ಲಿನ ಟ್ರಾನ್ಸಿಟ್ ನಂತರ, ಬೆಳಿಗ್ಗೆ 9.50 ಮತ್ತು ಸಂಜೆ 7.20 ಕ್ಕೆ ಫುಜೈರಾಕ್ಕೆ ತಲುಪಲಿದೆ.
ದುಬೈನಿಂದ ಕೋಝಿಕ್ಕೋಡ್ ವಿಮಾನಗಳು ರಾತ್ರಿ 7.55 ಕ್ಕೆ ಹೊರಡಲಿವೆ. ಮಸ್ಕತ್ನಲ್ಲಿನ ಟ್ರಾನ್ಸಿಟ್ ನಂತರ ಬೆಳಗಿನ ಜಾವ 3.20 ಕ್ಕೆ ಕರಿಪುರದಲ್ಲಿ ಇಳಿಯಲಿದೆ. ಪ್ರಸ್ತುತ ಆನ್ಲೈನ್ನಲ್ಲಿ ಟಿಕೆಟ್ ದರ 390 ದಿರ್ಹಮ್ಗಳನ್ನು ತೋರಿಸಲಾಗುತ್ತಿದೆ. ಕೋಝಿಕ್ಕೋಡ್ ಹೊರತುಪಡಿಸಿ, ಸಲಾಮ್ ಏರ್ ಹೈದರಾಬಾದ್ ಮತ್ತು ಗೋವಾಗೆ ಅಕ್ಟೋಬರ್ನಲ್ಲಿ ಸೇವೆಯನ್ನು ಪ್ರಾರಂಭಿಸಲಿದೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ