ಉಳ್ಳಾಲ : ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ರಂದು ಜರುಗಲಿರುವ ಸುನ್ನಿ ಸ್ಟೂಡೆಂಟ್ ಫೆಡರೇಶನ್ ವಿದ್ಯಾರ್ಥಿ ಸಂಘಟನೆಯ ಮಹಾ ಸಮ್ಮೇಳನ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಪ್ರಚಾರಾರ್ಥದ ಭಾಗವಾಗಿ ಇಂದು ಉಳ್ಳಾಲ ನಗರದಲ್ಲಿ ಎಸ್.ಎಸ್. ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಎಳೆ ವಿಧ್ಯಾರ್ಥಿಗಳ ಸೈಕಲ್ ರ‌್ಯಾಲಿ ಜಾಥಾ ನಡೆಯಿತು.
ಉಳ್ಳಾಲ ಸೆಕ್ಟರ್ ಎಸ್.ಎಸ್. ಎಫ್ ಪ್ರಮುಖರ ನೇತೃತ್ವದಲ್ಲಿ ನಡೆದ ಈ ರ‌್ಯಾಲಿಯಲ್ಲಿ ಸುಮಾರು 150 ಕ್ಕೋ ಅಧಿಕ ಎಳೆ ವಿಧ್ಯಾರ್ಥಿಗಳು ಪಾಲ್ಗೊಂಡರು. ನಗರದ ಮಾಸ್ತಿ ಕಟ್ಟೆ, ಅಬ್ಬಕ್ಕವೃತ್ತ, ಪೇಂಟೆ, ಮೇಲಂಗಡಿ, ಮಾರ್ಗದಲ್ಲಿ ಸೈಕಲ್ ಜಾಥಾ ಸಾಗಿತು. ಪ್ರಮುಖ ನಿಲುಗಡೆಗಳಲ್ಲಿ ಬೆಂಗಳೂರಿನ ಸಮ್ಮೇಳನದ ಬಗ್ಗೆ ಮಾಹಿತಿ ನೀಡಲಾಯಿತು.