ರಿಯಾದ್: ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಉಮ್ರಾಗೆ ಆನ್ಲೈನ್ ವೀಸಾಗಳನ್ನು ನೀಡಲು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಉಮ್ರಾ ಯಾತ್ರೆಗೆ ವಿಶ್ವದಾದ್ಯಂತ ಹೆಚ್ಚಿನ ಜನರನ್ನು ದೇಶಕ್ಕೆ ಕರೆತರುವ ಕ್ರಮಗಳ ಭಾಗವಾಗಿದೆ ಇದು. ಆನ್ಲೈನ್ ವೀಸಾದೊಂದಿಗೆ ಪ್ರವೇಶ ಪ್ರಕ್ರಿಯೆಗಳು ಸುಲಭವಾಗಲಿದೆ.
ಉಮ್ರಾ ವೀಸಾ ಅರ್ಜಿಯನ್ನು ‘ನುಸುಕ್’ ಮೊಬೈಲ್ ಅಪ್ಲಿಕೇಶನ್ ಮೂಲಕ ಸಲ್ಲಿಸಬೇಕು. ಮುಹರ್ರಂ 1 ರಿಂದ (ಜುಲೈ 19) ಉಮ್ರಾ ಯಾತ್ರಿಕರ ಆಗಮನವು ಆನ್ಲೈನ್ ವೀಸಾದೊಂದಿಗೆ ಪ್ರಾರಂಭವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ನುಸುಕ್ ಅಪ್ಲಿಕೇಶನ್ನೊಂದಿಗೆ ವಿಶ್ವದ ವಿವಿಧ ಭಾಗಗಳಿಂದ ಮಕ್ಕಾ ಮತ್ತು ಮದೀನಾಕ್ಕೆ ಯಾತ್ರಾರ್ಥಿಗಳ ಆಗಮನವು ಸುಲಭವಾಗಲಿದೆ. ಯಾತ್ರಿಕರು ವಸತಿ ಮತ್ತು ಪ್ರಯಾಣದಂತಹ ಸೇವೆಗಳನ್ನು ‘ನುಸುಕ್’ ನಲ್ಲಿ ಆಯ್ಕೆ ಮಾಡಬಹುದಾಗಿದೆ.
ಗಲ್ಫ್ ದೇಶಗಳಿಂದ ಪ್ರವಾಸಿ ವೀಸಾದಲ್ಲಿ ಬರುವ ವಲಸಿಗರು, ಷೆಂಗೆನ್ ದೇಶಗಳು, USA ಮತ್ತು UK ವೀಸಾ ಹೊಂದಿರುವವರು ಸೌದಿ ಅರೇಬಿಯಾಕ್ಕೆ ಆಗಮಿಸುವ ಮೊದಲು ಉಮ್ರಾ ಮತ್ತು ರೌಳಾ ಸಂದರ್ಶನಕ್ಕೆ ಅನುಮತಿಗಳನ್ನು ನುಸುಕ್ ಅಪ್ಲಿಕೇಶನ್ ಮೂಲಕ ಪಡೆಯಬಹುದು.
ಅಲ್ಲದೆ, ಪ್ರಸ್ತುತ ಸೌದಿ ಅರೇಬಿಯಾದಲ್ಲಿರುವ ವಲಸಿಗರು ಕೂಡ ಉಮ್ರಾ ಮತ್ತು ರೌಳಾ ಸಂದರ್ಶನಕ್ಕೆ ನುಸುಕ್ ಅಪ್ಲಿಕೇಶನ್ ಮೂಲಕ ಪರವಾನಗಿಯನ್ನು ಪಡೆಯಬೇಕಾಗಿದೆ.
ಯಾವುದೇ ರೀತಿಯ ವೀಸಾದಲ್ಲಿ ಆಗಮಿಸುವ ಎಲ್ಲಾ ವಿದೇಶಿಯರಿಗೆ ನುಸುಕ್ ಮೂಲಕ ಪರವಾನಿಗೆಯನ್ನು ಪಡೆದು ಉಮ್ರಾ ನಿರ್ವಹಿಸಲು ಅನುಮತಿಸಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯವು ತಿಳಿಸಿದೆ.
ಕಳೆದ ವರ್ಷದಿಂದ ಉಮ್ರಾ ವೀಸಾಗಳ ಕಾಲಾವಧಿಯನ್ನು 90 ದಿನಗಳವರೆಗೆ ವಿಸ್ತರಿಸಲಾಗಿದೆ. ಉಮ್ರಾ ವೀಸಾ ಹೊಂದಿರುವವರು ದೇಶದ ಯಾವುದೇ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಯಾವುದೇ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸಲು ಅನುಮತಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್