janadhvani

Kannada Online News Paper

‘ಹಜ್ 2023’ ಪವಿತ್ರ ಸ್ಥಳಗಳ ನಡೆದಾರಿಗಳನ್ನು ತಂಪಾಗಿಸುವ ಯೋಜನೆ- ಈ ವರ್ಷದಿಂದ ಜಾರಿ

ಹಜ್‌ನ ಪವಿತ್ರ ಸ್ಥಳಗಳಾದ ಅರಫಾ, ಮಿನಾ ಮತ್ತು ಮುಝ್ದಲಿಫಾವನ್ನು ಸಂಪರ್ಕಿಸುವ ನಡೆದಾರಿಗಳನ್ನು ತಂಪಾಗಿಸಲಾಗುತ್ತದೆ

ಮಕ್ಕತುಲ್ ಮುಕರ್ರಮ: ಮಕ್ಕಾದ ಮಿನಾ, ಮುಝ್ದಲಿಫಾ ಮತ್ತು ಅರಫಾದಲ್ಲಿ ಹಜ್ಜಾಜ್‌ಗಳು ನಡೆಯುವ ದಾರಿಗಳನ್ನು ತಂಪಾಗಿಸುವ ಯೋಜನೆಯು ಈ ವರ್ಷ ಜಾರಿಗೆ ಬರಲಿದೆ.

ಹಜ್ ಕರ್ಮಗಳನ್ನು ನಿರ್ವಹಿಸುವ ಪ್ರದೇಶಗಳಲ್ಲಿ ನೆಲವನ್ನು ತಂಪಾಗಿಸುವುದು ಮತ್ತು ಗಾಳಿಯ ಉಷ್ಣತೆಯನ್ನು ಕಡಿತಗೊಳಿಸುವುದು ಇದರ ಗುರಿಯಾಗಿದೆ. ಈ ಯೋಜನೆಯನ್ನು ಈ ಬಾರಿ “ಕಲ್ಲೆಸತ” ಕರ್ಮ ನಡೆಯುವ ಮಿನಾದ ಜಮ್ರಾದಲ್ಲಿ ಪರೀಕ್ಷಿಸಲಾಗುತ್ತಿದೆ.

ಹಜ್‌ನ ಪವಿತ್ರ ಸ್ಥಳಗಳಾದ ಅರಫಾ, ಮಿನಾ ಮತ್ತು ಮುಝ್ದಲಿಫಾವನ್ನು ಸಂಪರ್ಕಿಸುವ ನಡೆದಾರಿಗಳನ್ನು ತಂಪಾಗಿಸಲಾಗುತ್ತದೆ. ಹಜ್ ಸಮಯದಲ್ಲಿ ಯಾತ್ರಿಕರು ಈ ಮಾರ್ಗದಲ್ಲಿ ಚಲಿಸುತ್ತಾರೆ. ಹಜ್ ದಿನದಂದು ಈ ಮೂರು ಸ್ಥಳಗಳನ್ನು ಸಂಪರ್ಕಿಸುವ ರೈಲು ಮತ್ತು ಬಸ್ ಸೇವೆಗಳು ಲಭ್ಯವಿದೆ. ಆದಾಗ್ಯೂ, ಅನೇಕ ಯಾತ್ರಿಕರು ಅರಫಾತ್ ನಂತರ ಮತ್ತು ಮಿನಾದಲ್ಲಿ ತಂಗುವ ಸಮಯದಲ್ಲಿ ಈ ಮಾರ್ಗಗಳನ್ನು ಬಳಸುತ್ತಾರೆ.

ತಂಪಾಗಿಸುವ ಮೊದಲ ಪರೀಕ್ಷೆಯನ್ನು ಮಿನಾದಿಂದ ಜಮ್ರಾ ಅಥವಾ ಕಲ್ಲೆಸೆಯುವ ಸ್ಥಳದಲ್ಲಿ ನಡೆಸಲಾಗುತ್ತದೆ. ಇಲ್ಲಿ ಟಾರ್ ಮಾಡಿದ ಪ್ರದೇಶದಲ್ಲಿನ ನೆಲವನ್ನು ವಿಶೇಷ ಮಿಶ್ರಣದಿಂದ ಶಾಖ ನಿರೋಧಕವಾಗಿ ಮಾಡಲಾಗುತ್ತದೆ. ಇದರಿಂದ ಯಾತ್ರಾರ್ಥಿಗಳಿಗೆ ಹೆಚ್ಚು ಬಿಸಿ ತಟ್ಟುವುದಿಲ್ಲ. ವಾತಾವರಣವನ್ನು ತಂಪಾಗಿಸಲು ವಾಟರ್ ಸ್ಪ್ರೇ ಕೆಲಸ ಮಾಡುವುದರಿಂದ, ಶಾಖ ನಿಯಂತ್ರಣಕ್ಕೆ ಬರಲಿದೆ.

ಈ ಬಾರಿ ಹಜ್ ದಿನಗಳಲ್ಲಿ, ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ. ಆದರೆ,ಬಿಸಿ ತಗಲುವ ನಡೆದಾರಿಗಳ ತಾಪಮಾನವು 70 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದೆಂದು ಹಜ್ ಉಮ್ರಾ ಸಚಿವಾಲಯವು ಸೂಚಿಸುತ್ತದೆ. ಇದಕ್ಕೆ ಪರಿಹಾರವೆಂಬಂತೆ ಹೊಸ ಯೋಜನೆಯನ್ನು ನಡೆಸಲಾಗುತ್ತಿದೆ.

error: Content is protected !! Not allowed copy content from janadhvani.com