ಉಡುಪಿ, ಮಾರ್ಚ್ 12; ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಢರೇಶನ್ (ಎಸ್ಸೆಸ್ಸೆಫ್) ಉಡುಪಿ ಜಿಲ್ಲಾ ಸಮಿತಿ ಕೌನ್ಸಿಲ್ ಸಭೆ ಬ್ರಹ್ಮಾವರ ಸಾಗರ್ ಫ್ಲಾಝಾ ಅಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು.
ಮುಂದಿನ ಎರಡು ವರ್ಷಗಳ ಸಾಂಘಿಕ ಅವಧಿಗೆ ಅಧ್ಯಕ್ಷರಾಗಿ ಮುಹಮ್ಮದ್ ಮುಸ್ತಫ ಸಖಾಫಿ ಕಾಪು, ಪ್ರಧಾನ ಕಾರ್ಯದರ್ಶಿಯಾಗಿ ತ್ವಾಹಿರ್ ಮೂಡುಗೋಪಾಡಿ, ಫೈನಾನ್ಸಿಯಲ್ ಸೆಕ್ರೇಟರಿ ಶಾಹುಲ್ ಹಮೀದ್ ನಈಮಿ ಕನ್ನಂಗಾರ್ ಆಯ್ಕೆಯಾದರು.
ಕಾರ್ಯದರ್ಶಿಗಳು ಸಿದ್ದೀಕ್ ಸಖಾಫಿ ಹಂಗಳೂರು (ದಅವಾ) ನಿಝಾಂ ಪಡುಕರೆ (ಕ್ಯೂಡಿ) ನಾಸಿರ್ ಬಿ.ಕೆ. ಭದ್ರಗಿರಿ (ವಿಸ್ಡಂ) ಹಾರಿಸ್ ಮಾಸ್ಟರ್ ಹೊಸ್ಮಾರ್ (ಕ್ಯಾಂಪಸ್) ಅನೀಸ್ ಸರ್ ಹಿಂದ್ (ರೈನ್’ಬೋ), ಎಂ.ಕೆ. ಇಬ್ರಾಹಿಂ ಮಜೂರು (ಮೀಡಿಯಾ) ಮುಸ್ತಫ ಕೋಯನಗರ (ಐ.ಟಿ. ಸೆಲ್) ಆಸಿಫ್ ಬೆಳಪು (ರೀಡ್ ಪ್ಲಸ್) ಅಬ್ದುರ್ರಹ್ಮಾನ್ ಅಂಜದಿ (ಕಲ್ಚರಲ್) ಮುನೀಬ್ ಬೊಲ್ಲೊಟ್ಟು (ಯುಡಿ) ಮುತ್ತಲಿಬ್ ಆರ್.ಕೆ (ಹೆಲ್ಪ್ ಡೆಸ್ಕ್ ಕನ್ವೀನರ್) ಆಗಿ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರುಗಳು ಮುಹಮ್ಮದ್ ರಖೀಬ್ ಕನ್ನಂಗಾರ್, ಶಿಹಾಬ್ ಬಾರ್ಕೂರು, ನವಾಝ್ ಕಾರ್ಕಳ, ಇಬ್ರಾಹಿಂ ಫಾಳಿಲಿ ಮಣಿಪುರ, ಅಮೀರ್ ಖಾನ್ ಅಹ್ಸನಿ ಗೋಪಾಡಿ, ಅಲ್ಫಾಝ್ ಕೋಡಿ, ಅಬ್ದುಲ್ಲತೀಫ್ ಶಿರ್ವ, ತೌಸೀರ್ ಪಡುಬಿದ್ರಿ, ಪರ್ವೇಝ್ ಕಿರಿಮಂಜೇಶ್ವರ, ರಝಾಕ್ ನೇರಳಕಟ್ಟೆ, ಆಸಿಫ್ ಮೂಳೂರು, ಹಸನ್ ಸಅದಿ ಗುಲ್ವಾಡಿ, ಸಲ್ಮಾನ್ ಮಣಿಪುರ ಆಯ್ಕೆಯಾದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸುನ್ನೀ ಸಂಘಟನೆಗಳ ಹಿರಿಯ ನಾಯಕ ಎಸ್.ವೈ.ಎಸ್ ಉಡುಪಿ ಜಿಲ್ಲಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉದ್ಘಾಟಿಸಿದರು. ವೀಕ್ಷಕರಾಗಿ ರಾಜ್ಯ ನಾಯಕ ಮುಜೀಬ್ ಕೊಂಡಂಗೇರಿ ಕೌನ್ಸಿಲ್ ಸಭೆಯನ್ನು ನಿಯಂತ್ರಿಸಿದರು.
ಕರ್ನಾಟಕ ರಾಜ್ಯ ಎಸ್.ವೈ.ಎಸ್ ಉಪಾಧ್ಯಕ್ಷ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್, ಉಡುಪಿ ಜಿಲ್ಲಾ ಉಸ್ತುವಾರಿ ಮುನೀರ್ ಕಾಮಿಲ್ ಸಖಾಫಿ ಉಳ್ಳಾಲ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಸುಬ್ಹಾನ್ ಹೊನ್ನಾಳ, ರಾಜ್ಯ ಯು.ಡಿ ಕಾರ್ಯದರ್ಶಿ ರವೂಫ್ ಖಾನ್ ಮೂಡುಗೋಪಾಡಿ, ರಾಜ್ಯ ವಿಸ್ಡಂ ಕಾರ್ಯದರ್ಶಿ ಎನ್.ಸಿ. ರಹೀಂ ಹೊಸ್ಮಾರ್, ರಾಜ್ಯ ಕ್ಯಾಂಪಸ್ ಕನ್ವೀನರ್ ರಖೀಬ್ ಕನ್ನಂಗಾರ್, ಕರ್ನಾಟಕ ಮುಸ್ಲಿಂ ಜಮಾಅತ್ ಬ್ರಹ್ಮಾವರ ತಾಲೂಕು ನಾಯಕ ಮುಸ್ತಾಕ್ ಸಾಹೇಬ್ ಉಪಸ್ಥಿತರಿದ್ದರು.
ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಮಜೂರು ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ತ್ವಾಹಿರ್ ಮೂಡುಗೋಪಾಡಿ ವಂದಿಸಿದರು.
ಮೀಡಿಯಾ ಕಾರ್ಯದರ್ಶಿ
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ