janadhvani

Kannada Online News Paper

ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ – ನೂತನ ಸಾರಥಿಗಳು

ದಮ್ಮಾಮ್ :ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ದಮ್ಮಾಮ್ ವಲಯ ಅಧೀನದ ಜುಬೈಲ್ ಯೂತ್ ವಿಂಗ್ ಘಟಕದ ವಾರ್ಷಿಕ ಮಹಾಸಭೆ 2, ಮಾರ್ಚ್ 2023 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 10 ಘಂಟೆಗೆ ಸರಿಯಾಗಿ ಜುಬೈಲ್ ಡಿಕೆಯಸ್ಸಿ ಹಾಲ್ ಜರಗಿತು. ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ದಾಯಿ ಉಸ್ತಾದ್ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ದುಆ ಗೈದರು.

ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಘಟಕದ ಅಧ್ಯಕ್ಷ ಸಫ್ವಾನ್ ಕಣ್ಣಂಗಾರ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮುಸ್ತಫ ಇಬ್ನ್ ಸುಲೈಮಾನ್ ಖಿರಾ ಅತ್ ಪಠಿಸಿದರು. ಕರ್ನಾಟಕ ಕಲ್ಚರಲ್ ಫೌಂಡೇಶನ್ ಜುಬೈಲ್ ಝೋನ್ ದಾಯಿ ಉಸ್ತಾದ್ ಜುನೈದ್ ಸಅದಿ ಅಲ್ ಅಫ್ಳಲಿ ಸಭೆಯನ್ನು ಉದ್ಘಾಟಿಸಿದರು. ಜುಬೈಲ್ ಯೂತ್ ವಿಂಗ್ ಉಪಾಧ್ಯಕ್ಷ ಸಫೀರ್ ಗೂಡಿನಬಳಿ ಸ್ವಾಗತಿಸಿದರು. ವಾರ್ಷಿಕ ವರದಿ ಮತ್ತು ಪ್ರವರ್ತನಾ ವರದಿ ಗಳನ್ನು ಪ್ರಧಾನ ಕಾರ್ಯದರ್ಶಿ ನಿಶಾಯಿಲ್ ರವರು ಡಾಕ್ಯುಮೆಂಟರಿ ಮೂಲಕ ವಿವರಿಸಿದರು ಹಾಗೂ ಸಭೆಯ ಅನುಮೋದನೆಯನ್ನು ಪಡೆದರು.

ಅಧ್ಯಕ್ಷರಾದ ಸಫ್ವಾನ್ ಕಣ್ಣಂಗಾರ್ ರವರು ಮಾತನಾಡಿ ಮುಂದಿನ ದಿನ ಗಳಲ್ಲಿ ಯುವ ಜನತೆ ಯನ್ನು ಡಿಕೆಯಸ್ಸಿ ಗೆ ಸದಸ್ಯರನ್ನಾಗಿ ಮಾಡಿ ಡಿಕೆಯಸ್ಸಿ ಯ ಅಭಿವೃದ್ಧಿ ಕಾರ್ಯಗಳನ್ನು ಅವರಿಗೆ ಮನವರಿಕೆ ಮಾಡಿ ಕೊಡುವ ತರಬೇತಿ ಶಿಬಿರ ಗಳನ್ನು ಏರ್ಪಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಮುತುವರ್ಜಿ ವಹಿಸಬೇಕೆಂದು ತಿಳಿಸಿದರು. ಈ ಬಗ್ಗೆ ವಲಯ ಸಮಿತಿಗೆ ತಿಳಿಯಪಡಿಸಿ ಅವರಿಂದ ಸಲಹೆ ಸೂಚನೆ ಗಳನ್ನು ಪಡೆದು ಅದರ೦ತೆ ಕಾರ್ಯ ಪ್ರವರ್ತಕ ರಾಗುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
ವಿಶೇಷ ಅತಿಥಿಗಳಾಗಿ ಡಿಕೆಯಸ್ಸಿ ಒಮಾನ್ ರಾಷ್ಟ್ರೀಯ ಸಮಿತಿಯ ಹಿರಿಯ ನೇತಾರ ಮುಹಮ್ಮದ್ ರಫೀಖ್ ಪಡುಬಿದ್ರಿ ರವರು ಆಗಮಿಸಿ ಡಿಕೆಯಸ್ಸಿಯ ಪ್ರವರ್ತನೆಗಳನ್ನು ಪ್ರಶಂಶಿಸಿ ತಾವುಗಳೆಲ್ಲರೂ ಅದರ ಅಭಿವೃದ್ಧಿಗೆ ಶಕ್ತಿಮೀರಿ ದುಡಿದು ಡಿಕೆಯಸ್ಸಿ ಯ ಪತಾಕೆಯನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವಲ್ಲಿ ಸಹಕರಿಸಿರಿ ಎಂದು ಕಿವಿ ಮಾತನಾಡಿದರು.
ಡಿಕೆಯಸ್ಸಿ ದಮ್ಮಾಮ್ ವಲಯದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ರವರ ಉಸ್ತುವಾರಿಯಲ್ಲಿ 2023-24 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಅಹ್ಮದ್ ಸಫ್ವಾನ್ ಪುನರಾಯ್ಕೆಗೊಂಡರು , ಗೌರವ ಅಧ್ಯಕ್ಷರಾಗಿ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ಪ್ರಧಾನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಸಫೀರ್ ಗೂಡಿನಬಳಿ ಹಾಗೂ ಕೋಶಾಧಿಕಾರಿ ಯಾಗಿ ಮುಹಮ್ಮದ್ ಶಾಮಿತ್ ಪಡುಬಿದ್ರಿ ರವರನ್ನು ಆರಿಸಲಾಯಿತು.

ಉಪಾಧ್ಯಕ್ಷರಾಗಿ ಅಝರ್ ಪಡುಬಿದ್ರಿ ಮತ್ತು ಉಮರ್ ಕಂತಡ್ಕ, ಜೊತೆ ಕಾರ್ಯದರ್ಶಿಗಳಾಗಿ ಅಜ್ಹ್ ವಿಲ್ ಅಬೂಬಕ್ಕರ್ ಮತ್ತು ರಿಯಾಝ್ ಪಡುಬಿದ್ರಿ , ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ನಿಶಾಯಿಲ್ ರವರನ್ನು ನೇಮಕ ಗೊಳಿಸಲಾಯಿತು.

ಉಳಿದ 17 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಜೊತೆ ಕಾರ್ಯದರ್ಶಿ ಅಬ್ದುಲ್ ಗಫೂರ್ ಸಜಿಪ, ಹಿರಿಯ ನಾಯಕ ರಾದ ಹಾತಿಂ ಕೂಳೂರು, ಅಬ್ದುಲ್ ಹಮೀದ್ ಉಳ್ಳಾಲ ಹಾಗೂ ಜುಬೈಲ್ ಘಟಕದ ಅಧ್ಯಕ್ಷ ಅಶ್ರಫ್ ನಾಳ ಆಗಮಿಸಿ ನೂತನ ಸಮಿತಿಗೆ ಶುಭಾಶಂಸೆ ಗೈದು ಹಾರೈಸಿದರು.

ಗೌರವ ಅಧ್ಯಕ್ಷರಾದ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ಮಾತನಾಡಿ ಡಿಕೆಯಸ್ಸಿಯು ಹಮ್ಮಿಕೊಂಡ ಯೋಜನೆಗಳನ್ನು ಸಂಪೂರ್ಣ ಗೊಳಿಸುವಲ್ಲಿ ತಾವುಗಳೆಲ್ಲರ ಸಹಾಯ ಸಹಕಾರ ಅಗತ್ಯವಿದ್ದು ಯಶಸ್ವಿಗೊಳಿಸುವಲ್ಲಿ ಸಹಕರಿಸಿರಿ ಎಂದು ನುಡಿದರು.
ಸಭೆಯ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫೀರ್ ಗೂಡಿನಬಳಿ ಧನ್ಯವಾದಗೈದರು.

ವರದಿ: ಇಸ್ಮಾಯೀಲ್ ಕಾಟಿಪಳ್ಳ ದಮ್ಮಾಂ

error: Content is protected !! Not allowed copy content from janadhvani.com