ಮಕ್ಕಾ | ಈ ವರ್ಷದ ರಂಜಾನ್‌ನಲ್ಲಿ ಎರಡೂ ಹರಮ್‌ಗಳಲ್ಲಿ ಇಅ್ ತಿಕಾಫ್ ಗಾಗಿ ನೋಂದಣಿ ಪ್ರಕ್ರಿಯೆಯನ್ನು ಘೋಷಿಸಲಾಗಿದೆ.
ಶಅಬಾನ್ 25 ರಂದು ನೋಂದಣಿ ಪ್ರಾರಂಭಗೊಂಡು. ರಂಮಳಾನ್ 10ರಂದು ಅಂತ್ಯಗೊಳ್ಳಲಿದೆ ಎಂದು ಹರಮ್ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ಉಮ್ರಾ ಯಾತ್ರಿಕರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ, ಎರಡೂ ಹರಮ್‌ಗಳು ಯಾತ್ರಾರ್ಥಿಗಳ ಭಾರೀ ಜನದಟ್ಟಣೆಯನ್ನು ಅನುಭವಿಸುತ್ತಿವೆ.
ಸಚಿವಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ನಿಯಮಾನುಸಾರ ಅನುಮತಿ ನೀಡಲಾಗುವುದು. ಕಳೆದ ವರ್ಷ, ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಎರಡೂ ಹರಮ್‌ಗಳಲ್ಲಿ ಇಅ್ ತಿಕಾಫ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.