ಮಂಗಳೂರು : ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಇದರ ವಾರ್ಷಿಕ ಮಹಾಸಭೆಯು ಸ್ಥಳೀಯ ಖತೀಬರಾದ K.H.U ಶಾಫಿ ಮದನಿ ಕರಾಯ ಉಸ್ತಾದ್ ರವರ ಪ್ರಾರ್ಥನೆಯೊಂದಿಗೆ ನಿಕಟ ಪೂರ್ವ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಬದ್ರಿಯಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
2023-2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಕಜೆ, ಉಪಾಧ್ಯಕ್ಷರಾಗಿ N.A ಅಬ್ದುಲ್ ಲತೀಫ್ ಆಚಾರಿಜೋರಾ, ಪ್ರಧಾನ ಕಾರ್ಯದರ್ಶಿಯಾಗಿ ಕೆ ರಫೀಕ್ ಆಚಾರಿಜೋರ, ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಕಾಡಕ್ಕೇರಿ,
ಕೋಶಾಧಿಕಾರಿಯಾಗಿ ಇಬ್ರಾಹಿಂ ಹಾಜಿ ಆಯ್ಕೆಯಾದರು.
ಸದ್ರಿ ಸಮಿತಿಯ ಕಾರ್ಯಕಾರಿಣಿ ಸದಸ್ಯರಾಗಿ L.ಉಮರಬ್ಬ , ಅಬ್ದುಲ್ ರಹ್ಮಾನ್ ಬದ್ರಿಯಾ,
ಇಸ್ಮಾಯಿಲ್ ಶರೀಫ್, ಅಬ್ದುರ್ರಝಾಕ್ ಹಾಜಿ ಬ್ಲೂಸ್ಟಾರ್, ಶರೀಫ್ ಪದವಿನಂಗಡಿ, ಝಕರಿಯ ಪದರಂಗಿ, ಆಯ್ಕೆಯಾದರು.
ಸಭೆಯ ಪ್ರಾರಂಭದಲ್ಲಿ ನಿಕಟ ಪೂರ್ವ ಕಾರ್ಯದರ್ಶಿ ಇಸ್ಮಾಯಿಲ್ ಶರೀಫ್ ಸ್ವಾಗತಿಸಿ ,ನೂತನ ಪ್ರಧಾನ ಕಾರ್ಯದರ್ಶಿ
ಕೆ ರಫೀಕ್ ಆಚಾರಿಜೋರಾ ಧನ್ಯವಾದಗೈದರು.