janadhvani

Kannada Online News Paper

ವಿಮಾನ ನಿಲ್ದಾಣಗಳಲ್ಲಿ ‘ಡ್ಯೂಟಿ ಫ್ರೀ’ ಮಾರುಕಟ್ಟೆ ವಿಸ್ತರಣೆ – ಸೌದಿ ಕ್ಯಾಬಿನೆಟ್ ಅನುಮೋದನೆ

ವಿಮಾನ ನಿಲ್ದಾಣದ ಆಗಮನ ವಲಯ, ಬಂದರು ಮತ್ತು ಭೂ ಗಡಿ ಗೇಟ್‌ಗಳಲ್ಲೂ Duty Free ಸ್ಥಾಪನೆ

ರಿಯಾದ್: ಕಿಂಗ್‌ಡಮ್ ಆಫ್ ಸೌದಿ ಅರೇಬಿಯಾ(KSA) ದೇಶದ ವಿಮಾನ ನಿಲ್ದಾಣಗಳ ಆಗಮನ ವಲಯ( Arrival) ಸೇರಿದಂತೆ ಬಂದರು ಮತ್ತು ಭೂ ಗಡಿ ಗೇಟ್‌ಗಳಲ್ಲೂ ಸುಂಕ ರಹಿತ ಮಾರುಕಟ್ಟೆ (Duty Free) ಸ್ಥಾಪನೆಗೆ ಸೌದಿ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಎರಡು ಪವಿತ್ರ ಮಸೀದಿಗಳ ಉಸ್ತುವಾರಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಆಲ್ ಸಊದ್ ಅವರ ಅಧ್ಯಕ್ಷತೆಯಲ್ಲಿ ಜಿದ್ದಾದ ಅಲ್ ಸಲಾಮ್ ಅರಮನೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇಶಕ್ಕೆ ಆಗಮಿಸುವ ಮತ್ತು ದೇಶದಿಂದ ನಿರ್ಗಮಿಸುವ ಪ್ರಯಾಣಿಕರಿಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡುವುದಾಗಿದೆ ವಿಮಾನ ನಿಲ್ದಾಣದ ಆಗಮನ ವಲಯ, ಬಂದರು ಮತ್ತು ಭೂ ಗಡಿ ಗೇಟ್‌ಗಳಲ್ಲೂ Duty Free ಸ್ಥಾಪನೆಯ ಉದ್ದೇಶ.

ರಿಯಾದ್ ಏರ್‌ಪೋರ್ಟ್ಸ್ ಕಂಪನಿ (RAC) ಕಿಂಗ್ ಖಾಲಿದ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ (KKIA) ಡ್ಯೂಟಿ ಫ್ರೀ ಮಾರಾಟವು 2019 ರ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ 68% ರಷ್ಟು ಏರಿಕೆಯಾಗಿದೆ ಎಂದು ವರದಿ ಮಾಡಿದೆ.ಪ್ರಸ್ತುತ ನವೀಕರಿಸಲಾಗುತ್ತಿರುವ KKIA 3 ಮತ್ತು 4 ಟರ್ಮಿನಲ್‌ಗಳಲ್ಲಿ ‘ಅತ್ಯುತ್ತಮ ದರ್ಜೆಯ’ ವಾಣಿಜ್ಯ ಅನುಭವವನ್ನು ಏರ್‌ಪೋರ್ಟ್ ನಿರ್ವಾಹಕರು ಭರವಸೆ ನೀಡಿದ್ದಾರೆ.

error: Content is protected !! Not allowed copy content from janadhvani.com