ಜಿದ್ದಾ : ಗಲ್ಫ್ ರಾಷ್ಟ್ರಗಳಲ್ಲಿ ಮೂರು ವಿಧದ ವೃತ್ತಿಗಳಲ್ಲಿ ಕೆಲಸ ಮಾಡುವವರಿಗೆ ಸೌದಿ ಅರೇಬಿಯಾಕ್ಕೆ(Online Tourist Visa) ಆನ್‌ಲೈನ್ ಪ್ರವಾಸಿ ವೀಸಾವನ್ನು ನೀಡಲಾಗುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವಾಲಯ ಘೋಷಿಸಿದೆ. ಗೃಹ ಕಾರ್ಮಿಕರಿಗೆ ಪ್ರಾಯೋಜಕರೊಂದಿಗೆ ಪ್ರವಾಸಿ ವೀಸಾದಲ್ಲಿ ಆಗಮಿಸಲು ಅವಕಾಶವಿದೆ. ಆನ್‌ಲೈನ್ ಪ್ರವಾಸಿ ವೀಸಾ ಪಡೆಯಲು ಸಾಧ್ಯವಾಗದ ವೃತ್ತಿಯಲ್ಲಿರುವವರು ಭೇಟಿ ವೀಸಾ ಅಥವಾ ಉಮ್ರಾ ವೀಸಾದಲ್ಲಿ ಆಗಮಿಸಬಹುದಾಗಿದೆ.
ಕೆಲವು ದಿನಗಳ ಹಿಂದೆ, ಪ್ರವಾಸೋದ್ಯಮ ಸಚಿವಾಲಯವು ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುವ ವಿದೇಶಿಯರಿಗೆ ಸೌದಿ ಅರೇಬಿಯಾಕ್ಕೆ ಬರಲು ಆನ್‌ಲೈನ್ ಪ್ರವಾಸಿ ವೀಸಾವನ್ನು ಅನುಮತಿಸಲಾಗುವುದು ಎಂದು ಘೋಷಿಸಿತು. ಆದರೆ ಚಾಲಕ, ಕಾರ್ಮಿಕ ಮತ್ತು ನರ್ಸ್ ಎಂಬ ಮೂರು ವೃತ್ತಿಗಳಲ್ಲಿ ಕೆಲಸ ಮಾಡುವವರು ಆನ್‌ಲೈನ್ ಪ್ರವಾಸಿ ವೀಸಾದಲ್ಲಿ ಬರುವುದನ್ನು ನಿರ್ಬಂಧಿಸಲಾಗಿದೆ.ಇತರ ಎಲ್ಲಾ ವೃತ್ತಿಗಳಲ್ಲಿರುವವರು ಪ್ರವಾಸಿ ವೀಸಾವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು.
ಗೃಹ ಕಾರ್ಮಿಕರಿಗೆ ಅವರ ಪ್ರಾಯೋಜಕರೊಂದಿಗೆ ಟೂರಿಸ್ಟ್ ವೀಸಾದಲ್ಲಿ ಆಗಮಿಸಲು ಅನುಮತಿಸಲಾಗಿದೆ. ಪ್ರಾಯೋಜಕರು ವಿದೇಶಿಯರಾಗಿದ್ದರೂ ಈ ಪ್ರಯೋಜ ಲಭ್ಯ.
ಆದರೆ ಇ-ಟೂರಿಸ್ಟ್ ವೀಸಾದಲ್ಲಿ ಬರುವುದನ್ನು ನಿಷೇಧಿಸಿರುವ ವೃತ್ತಿಯಲ್ಲಿರುವವರಿಗೆ ವಿಸಿಟ್ ವೀಸಾ ಅಥವಾ ಉಮ್ರಾ ವೀಸಾದಲ್ಲಿ ಬರಲು ಯಾವುದೇ ಅಡೆತಡೆಗಳಿಲ್ಲ. ಹೀಗೆ ಬಂದು ಸೌದಿಯಲ್ಲಿ ಮೂರು ತಿಂಗಳು ತಂಗಬಹುದಾಗಿದೆ. ಆನ್‌ಲೈನ್ ಪ್ರವಾಸಿ ವೀಸಾಕ್ಕೆ ಆರೋಗ್ಯ ವಿಮೆ ಸೇರಿದಂತೆ 435 ರಿಯಾಲ್‌ಗಳು ವೆಚ್ಚವಾಗುತ್ತವೆ.