janadhvani

Kannada Online News Paper

ಸುರತ್ಕಲ್ ಫಾಝಿಲ್ ಹತ್ಯೆ,ಪೊಲೀಸ್ ಗುಪ್ತಚರ ವೈಫಲ್ಯ ಖಂಡನೆ: ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸುಳ್ಯದ ಅಹಿತಕರ ಘಟನೆಗಳ ಬೆನ್ನಿಗೆ,ಇಂದು ಸುರತ್ಕಲ್ ನಲ್ಲಿ ಪೂರ್ವಯೋಜಿತ ವಾಗಿ ಮಂಗಳಪೇಟೆಯ ಫಾಝಿಲ್ ಎಂಬ ಯುವಕನನ್ನು ಅಂಗಡಿ ಮುಂಗಟ್ಟು ವಿನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ನಡೆಸಿದ್ದು ಖಂಡನೀಯ.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋಮು ಪ್ರಚೋದಿತ ಘಟನೆಗಳು ನಿರಂತರ ಸಂಭವಿಸುತ್ತಿದ್ದು ಪೊಲೀಸು ಇಲಾಖೆಯ ಗುಪ್ತಚರ ವ್ಯವಸ್ಥೆ ಸಂಪೂರ್ಣ ವಿಫಲವಾಗಿ, ಸಂಭಾವ್ಯ ಅಹಿತಕರ ಘಟನೆಗಳನ್ನು ನಿರೀಕ್ಷಿಸುವ ಮಟ್ಟ ಸಂಪೂರ್ಣ ಕುಸಿದಿರುತ್ತದೆ. ಸುರತ್ಕಲ್ ನಲ್ಲಿ ನಡೆದ ಘಟನೆ ಅಮಾಯಕ ಯುವಕನ ಹತ್ಯೆ ಖಂಡನೀಯ. ಕ್ರಿಯೆಗೆ ಪ್ರತಿಕ್ರಿಯೆ ಖ್ಯಾತಿಯ ಮುಖ್ಯ ಮಂತ್ರಿ ಬೊಮ್ಮಾಯಿಯವರು ಜಿಲ್ಲೆಗೆ ಆಗಮಿಸಿದ ನಂತರ ನಡೆದ ಸುರತ್ಕಲ್ ಘಟನೆಗೂ ಅವರ ಹೇಳಿಕೆಗೂ ಸಾಮ್ಯತೆ ಕಾಣುತ್ತಿದೆ. ಈ ಘಟನೆಗೆ ಸರಕಾರ ಹೊಣೆ.ಪೊಲೀಸ್ ಉನ್ನತ ಅಧಿಕಾರಿಗಳು ಮದ್ಯ ಪ್ರವೇಶಿಸಿ ಸಾಮಾನ್ಯ ಜನರ ಪ್ರಾಣ ಆಸ್ತಿಗಳನ್ನು ರಕ್ಷಿಸಬೇಕಿದೆ.

ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.