ಮಂಜನಾಡಿ:ಅಲ್-ಮದೀನಾ ದಅ್ ವಾ ಕಾಲೇಜ್ ವಿಧ್ಯಾರ್ಥಿ ಸಂಘಟನೆ ಬಿಶಾರತುಲ್ ಮದೀನಾ ವಿಧ್ಯಾರ್ಥಿ ಒಕ್ಕೂಟ ಹಾಗು ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಅಲ್-ಮದೀನಾ ಕ್ಯಾಂಪಸ್ ವತಿಯಿಂದ ಕಾಶ್ಮೀರದ ಗುಜ್ಜಾರ್ ಸಮುದಾಯದ 8 ವಯಸ್ಸಿನ ಕಂದಮ್ಮ ಆಸಿಫಾ ಬಾನುವಿನ ದಾರುಣ ಕೊಲೆಯ ವಿರುದ್ಧ ಪ್ರತಿಭಟನಾ ಸಭೆ ಏಪ್ರಿಲ್ 18 ರಂದು ಅಲ್-ಮದೀನಾ ಮಂಜನಾಡಿ ಕ್ಯಾಂಪಸ್ ಮುಂಭಾಗದಲ್ಲಿ ನಡೆಯಿತು.
ಆಸಿಫಾ ಬಾನು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ರಾಷ್ಟ್ರದ ಕಾವಲಾಳುಗಳಾದ ಪೊಲೀಸ್ ಅಧಿಕಾರಿಗಳೇ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗುವುದು ಖೇದಕರ, 7 ದಿನಗಳ ಕಾಲ ಗಾಂಜಾ ಮಾದಕಗಳನ್ನು ನೀಡಿ ಅತ್ಯಾಚಾರ ಮಾಡಿ ದಾರುಣವಾಗಿ ನಡೆಸಿದ ಕೊಲೆ ಖಂಡನಾರ್ಹ, ಆಸಿಫಾಳನ್ನು ಕೊಂದ ಕ್ರೂರಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿ ಎಂದು ಪ್ರತಿಭಟನಾ ಸಭೆ ಅಭಿಪ್ರಾಯ ವ್ಯಕ್ತಪಡಿಸಿತು.BMSA ಅಧ್ಯಕ್ಷ ಇಫಾಝ್ ತಮೀಮ್ ದೇರಳಕಟ್ಟೆ ಯವರ ಅಧ್ಯಕ್ಷತೆಯಲ್ಲಿ SSF ಅಲ್-ಮದೀನಾ ಕ್ಯಾಂಪಸ್ ಅಧ್ಯಕ್ಷ ಅಮಾನ್ ವಳಾಲ್ ಉದ್ಘಾಟಿಸಿದರು.
BMSA ಸದಸ್ಯ ಅಲ್-ಮದೀನಾ ವಿಧ್ಯಾರ್ಥಿ ಸಅದ್ ಮೊಂಟುಗೋಳಿ ದಿಕ್ಸೂಚಿ ಭಾಷಣ ಮಾಡಿದರು.
BMSA ಉಪಾಧ್ಯಕ್ಷ ಸಯ್ಯದ್ ಸಾಹಿಲ್ ಅಲ್-ಹಾದಿ ಬಿಸಿರೋಡ್,ಕೋಶಾಧಿಕಾರಿ ಸಿದ್ದೀಕ್ ಎಮ್ಮೆಮಾಡ್ ಉಪಸ್ಥಿತಿ ಇದ್ದರು.
BMSA ಪ್ರ.ಕಾರ್ಯದರ್ಶಿ ಜುನೈದ್.ಟಿ ಇರಾ ಸ್ವಾಗತಿಸಿ ನೌಫಲ್ ಮಲಾರ್ ವಂಧಿಸಿದರು.