ಮಂಗಳೂರು :ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್(ಸ) ರ ನಿಂದನೆ ಅಕ್ಷಮ್ಯ, ದೇಶದ ಘನತೆಗೆ ಕಳಂಕವನ್ನುಂಟು ಮಾಡಿದ ನುಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ರನ್ನು ಬಂಧಿಸಿ, ಬಿಜೆಪಿ ಸರಕಾರ ರಾಜೀನಾಮೆ ನೀಡಲಿ ಅನ್ನುವ ಘೋಷಣೆಯೊಂದಿಗೆ ಮುಡಿಪು ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಝಾಕಿರ್ ಉಳ್ಳಾಲ್ ಮತ್ತು ನಾಸೀರ್ ಸಜೀಪ ರವರು ಸಾಂಧರ್ಭೀಕವಾಗಿ ಮಾತನಾಡಿದರು.
ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಾಹಿದ್ ಮಲಾರ್ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಖಜಾಂಚಿ ಲತೀಫ್ ಕೊಡಿಜಾಲ್ ಸದಸ್ಯರಾದ ಅಬ್ಬಾಸ್ ಕಿನ್ಯಾ,ನೌಷಾದ್ ಕಿನ್ಯಾ,ಅಶ್ರಫ್ ಮೋನು ಸಜೀಪ ಬ್ಲಾಕ್ ಅಧ್ಯಕ್ಷರಾದ ನವಾಝ್ ಸಜೀಪ ಕಾರ್ಯದರ್ಶಿ ಅಬ್ದುಲ್ಲಾ ಪರಪ್ಪು ಕೊಣಾಜೆ ಬ್ಲಾಕ್ ಅಧ್ಯಕ್ಷರಾದ ಕಮರ್ ಮಲಾರ್ ಉಪಾಧ್ಯಕ್ಷ ಶರೀಫ್ ಬೋಳಿಯಾರ್ ಕಾರ್ಯದರ್ಶಿ ಜಾಫರ್ ಪಾನೇಲ ಮುನ್ನೂರು ಬ್ಲಾಕ್ ಅಧ್ಯಕ್ಷರಾದ ಎಸ್.ಎಮ್.ಬಶೀರ್ ಕಾರ್ಯದರ್ಶಿ ನವಾಝ್ ಕುತ್ತಾರ್ ಉಳ್ಳಾಲ ನಗರ ಸಮಿತಿ ಉಪಾಧ್ಯಕ್ಷ ಇಂತಿಯಾಝ್ ಕೋಟೆಪುರ ಕೋಟೆಕಾರ್ ಪಟ್ಟಣ ಸಮಿತಿ ಅಧ್ಯಕ್ಷರಾದ ಮೊಹಿದಿನ್ ಅಜ್ಜಿನಡ್ಕ ಪಕ್ಷದ ವಿವಿಧ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.