ಮಡಿಕೇರಿ: ಕೊಡಗು ಜಿಲ್ಲೆಯ ಸುನ್ನೀ ಸಂಘಟನೆಗಳ ಒಕ್ಕೂಟವಾದ “ಸುನ್ನೀ ಸಮನ್ವಯ ಸಮಿತಿ”ವತಿಯಿಂದ ನೆನ್ನೆ (21-05-2022) ಮಡಿಕೇರಿಯ ಅಲ್ ವೆಸಲ್ ಹಾಲ್‌ನಲ್ಲಿ ಜಿಲ್ಲೆಯ ಹಲವು ಮೊಹಲ್ಲಾಗಳ ಪ್ರತಿನಿಧಿಗಳು ಹಾಗೂ ಖತೀಬರನ್ನು ಒಳಗೊಂಡ ಮೊಹಲ್ಲಾ ಸಂಗಮ ನಡೆಸಲಾಯಿತು.
ಮೈಕ್‌ಗಳಲ್ಲಿ ಅಝಾನ್ ಕೊಡುವುದರ ಕುರಿತು ನಡೆದ ಕಾರ್ಯಾಗಾರದಲ್ಲಿ ಸಹಾಯಕ ಖಾಝಿಗಳಾದ ಎಂ ಎಂ ಅಬ್ದುಲ್ಲ ಫೈಝಿ ಅಧ್ಯಕ್ಷತೆ ವಹಿಸಿದ್ದರು ಮತ್ತು ಮತ್ತೊಂದು ಸಹಾಯಕ ಖಾಝಿಗಳಾದ ಕೆ ಎಸ್ ಶಾದುಲಿ ಫೈಝಿ ಉದ್ಘಾಟನೆ ನೆರವೇರಿಸಿದರು.
ಜಿಲ್ಲಾಧಿಕಾರಿಗಳಾದ ಸತೀಶ್ ಮಾತನಾಡಿ ಮೇ 25ರ ಒಳಗಾಗಿ ಪ್ರತೀ ಮಸೀದಿಗಳಲ್ಲೂ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯಲು ನಿರ್ದೇಶಿಸಿದರಲ್ಲದೆ ಪ್ರಸ್ತುತ ಸುತ್ತೋಲೆಯು ಕೇವಲ ಅಝಾನ್‌ಗೆ ಮಾತ್ರವಲ್ಲ ಮೈಕ್ ಬಳಸಿ ನಡೆಸುವ ಎಲ್ಲಾ ಕಾರ್ಯಗಳಿಗೂ ಅನ್ವಯವಾಗಲಿದೆ ಸದ್ಯಕ್ಕೆ ಕಠಿಣ ಕ್ರಮ ಕೈಗೊಳ್ಳುವ ತೀರ್ಮಾನವಿಲ್ಲ ಎಂದರು.
ಪರಿಸರ ಇಲಾಖೆಯ ಅಧಿಕಾರಿಗಳು,ಮಡಿಕೇರಿ ಡಿವೈಎಸ್ಪಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಸರ್ಕಾರ ಹೊರಡಿಸಿರುವ ಸುತ್ತೋಲೆಯ ಕುರಿತು ವಿಷಯ ಮಂಡಿಸಿ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿ ಹಲವು ಸಂಶಯಗಳಿಗೆ ಪರಿಹಾರ ನೀಡಿದರು.
ಜಿಲ್ಲೆಯ ಎರಡೂ ವಿಭಾಗಗಳ ಜಂಇಯ್ಯತುಲ್ ಉಲಮಾ ಹಾಗೂ ಮುಸ್ಲಿಂ ಜಮಾಅತ್ ,ಎಸ್‌ವೈಎಸ್, ಎಸ್‌ಜೆಎಂ, ಎಸ್‌ಎಸ್‌ಎಫ್,ಎಸ್‌ಕೆಎಸ್ಎಸ್‌ಎಫ್, ಇನ್ನಿತರ ಸುನ್ನೀ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.