janadhvani

Kannada Online News Paper

ಶೈಖ್ ಖಲೀಫಾ ನಿಧನ- ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲ್ ತೀವ್ರ ಸಂತಾಪ

ದುಬೈ: ಯುಎಇ ಅಧ್ಯಕ್ಷ ಹಾಗೂ ಅಬುಧಾಬಿಯ ಆಡಳಿತಗಾರ ಹಿಸ್ ಹೈನೆಸ್ ಶೈಖ್ ಖಲೀಫಾ ಬಿನ್ ಝಾಯೆದ್ ಆಲ್ ನಹ್ಯಾನ್ ಅವರ ವಿಯೋಗ ವಾರ್ತೆಯು ಅತೀವ ದುಃಖ ತಂದಿದೆ.

ತನ್ನ ತಂದೆ ಶೈಖ್ ‌ಝಾಯೆದ್ ಆಲ್ ನಹ್ಯಾನ್ ಅವರ ಮರಣದ ನಂತರ ದೇಶವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದ ದೂರದೃಷ್ಟಿಯ ನಾಯಕನನ್ನು ಯುಎಇ ಕಳೆದುಕೊಂಡಂತಾಗಿದೆ.

ಅಲ್ಲಾಹನು ಅವರಿಗೆ ಮಗ್ಫಿರತ್ ನೀಡಲಿ, ಖಬರ್ ಜೀವನದಲ್ಲಿ ಸಾಂತ್ವನ ನೀಡಲಿ ಮತ್ತು ಜನ್ನಾತುಲ್ ಫಿರ್ದೌಸಿನಲ್ಲಿ ಒಟ್ಟುಗೂಡಿಸಲಿ. ಈ ದುಃಖದ ಸಮಯದಲ್ಲಿ KCF ಇಂಟರ್ನ್ಯಾಷನಲ್ ಕೌನ್ಸಿಲ್ ಇಡೀ ರಾಷ್ಟ್ರದೊಂದಿಗೆ ಸಂತಾಪವನ್ನು ಹಂಚಿಕೊಳ್ಳುತ್ತಿದೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್
ಅಂತರಾಷ್ಟ್ರೀಯ ಮಂಡಳಿ(KCF, INC) ಅಧ್ಯಕ್ಷರಾದ ಡಾ: ಶೈಖ್ ಬಾವಾ ಮಂಗಳೂರು, ಪ್ರ. ಕಾರ್ಯದರ್ಶಿ ಖಮರುದ್ದೀನ್ ಗೂಡಿನ ಬಳಿ ಹಾಗೂ ಕೆಸಿಎಫ್ ಸೌದಿ ಅರೇಬಿಯಾ ಅಧ್ಯಕ್ಷರಾದ ಯೂಸುಫ್ ಸಖಾಫಿ ಬೈತಾರ್ ಸಂತಾಪ ಸೂಚನೆಯಲ್ಲಿ ತಿಳಿಸಿದ್ದಾರೆ.