janadhvani

Kannada Online News Paper

ಯುಎಇ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯಿದ್ ನಿಧನ

ನಿಧನ ಪ್ರಯುಕ್ತ ಯುಎಇಯಲ್ಲಿ 40 ದಿನಗಳ ಅಧಿಕೃತ ಶೋಕಾಚರಣೆ

ದುಬೈ | ಯುಎಇ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಅವರು 2004 ರಿಂದ ಯುಎಇ ಅಧ್ಯಕ್ಷರಾಗಿದ್ದಾರೆ. ಅಬುಧಾಬಿಯ ಆಡಳಿತಗಾರ ಮತ್ತು ಯುಎಇ ಸಶಸ್ತ್ರ ಪಡೆಗಳ ಮುಖ್ಯಸ್ಥರೂ ಆಗಿದ್ದರು.

ಅವರ ನಿಧನ ವಾರ್ತೆಯನ್ನು ಯುಎಇ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದೆ. ನಿಧನ ಪ್ರಯುಕ್ತ ಯುಎಇಯಲ್ಲಿ 40 ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಲಾಗಿದೆ.

ಶೈಖ್ ಖಲೀಫಾ ಬಿನ್ ಝಾಯಿದ್ ನಿಧನಕ್ಕೆ ಯುಎಇ ಪ್ರಧಾನಮಂತ್ರಿ, ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮತ್ತೂಮ್, ಅಬುಧಾಬಿ ಯುವರಾಜ ಶೈಖ್ ಮುಹಮ್ಮದ್ ಬಿನ್ ಝಾಯಿದ್, ಸೌದಿ ಅರೇಬಿಯಾದ ದೊರೆ ಸಲ್ಮಾನ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಸಂತಾಪ ಸೂಚಿಸಿದ್ದಾರೆ.

1971 ರಲ್ಲಿ ಯುಎಇ ಸ್ಥಾಪನೆಯಾದಾಗಿನಿಂದ ನವೆಂಬರ್ 2, 2004 ರಂದು ನಿಧನರಾಗುವ ವರೆಗೂ ಯುಎಇಯ ಮೊದಲ ಅಧ್ಯಕ್ಷರಾಗಿ ಕಾರ್ಯಾಚರಿಸಿದ್ದ, ಶೈಖ್ ಝಾಯಿದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಉತ್ತರಾಧಿಕಾರಿಯಾಗಿ ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಯುಎಇ ಅಧ್ಯಕ್ಷರಾದರು.

ಶೇಖ್ ಖಲೀಫಾ ಅವರು ಸೆಪ್ಟೆಂಬರ್ 7, 1948 ರಂದು ಅಲ್ ಐನ್‌ನ ಅಲ್ ಮುವೈಜಿ ಫೋರ್ಟ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸ್ಥಾಪಕ ಶೈಖ್ ಝಾಯಿದ್ ಬಿನ್ ಸುಲ್ತಾನ್ ಆಲ್ ನಹ್ಯಾನ್ ಅವರ ಹಿರಿಯ ಪುತ್ರನಾಗಿ ಜನಿಸಿದರು. ಶೈಖಾ ಹಸ್ಸಾ ಬಿಂತ್ ಮುಹಮ್ಮದ್ ಬಿನ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು ತಾಯಿ.

ಅವರು ಶೇಖಾ ಶಮ್ಸಾ ಬಿಂತ್ ಸುಹೈಲ್ ಆಲ್ ಮಸ್ರೂಯಿ ಅವರನ್ನು ವಿವಾಹವಾದರು. ಅವರಿಗೆ ಆರು ಹೆಣ್ಣುಮಕ್ಕಳು ಸೇರಿದಂತೆ ಎಂಟು ಮಕ್ಕಳಿದ್ದಾರೆ.

ಯುಎಇಯ ಎರಡನೇ ಅಧ್ಯಕ್ಷ ಮತ್ತು ಅಬುಧಾಬಿ ಎಮಿರೇಟ್‌ನ 16 ನೇ ಆಡಳಿತಗಾರ ಶೈಖ್ ಖಲೀಫಾ ಅವರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶೈಖ್ ಖಲೀಫಾ ಅವರ ಆಳ್ವಿಕೆಯಲ್ಲಿ ಯುಎಇ ತ್ವರಿತ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ತನ್ನ ತಂದೆ ಶೈಖ್ ಝಾಯಿದ್ ಸ್ಥಾಪಿಸಿದ ಮಾರ್ಗವನ್ನು ಮುಂದುವರಿಸುವುದು ಅವರ ಗುರಿಯಾಗಿತ್ತು.

ಅವರ ಜೀವನ ಚರಿತ್ರೆ