janadhvani

Kannada Online News Paper

ಆಸಿಫಾಳ ರಕ್ತದಿಂದ ಭಾರತ ಕುದಿಯುತ್ತಿದೆ : ಎಸ್ಸೆಸ್ಸೆಫ್ ಕೊಳಕೇರಿ ಶಾಖೆ ಪ್ರತಿಭಟನೆ

ಭೇಟಿ ಬಚಾವೋ
ಆಸಿಫಾಳ ರಕ್ತದೊಂದಿಗೆ ಕುದಿಯುತ್ತಿದೆ ಭಾರತ ಪೈಶಾಚಿಕ ಕೃತ್ಯದ ವಿರುದ್ಧ ಕೊಳಕೇರಿ ಶಾಖೆಯ ವತಿಯಿಂದ ನಡೆದ ಪ್ರತಿಭಟನಾ ಸಭೆ.

ಕೊಳಕೇರಿ: ಕಾಶ್ಮೀರದ ಕಥುವಾ ಎಂಬಲ್ಲಿ ಆಸಿಫಾ ಅನ್ನುವ ಎಂಟರ ಹರೆಯದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಗೈದು ಪೈಶಾಚಿಕವಾಗಿ ಕೊಲೆ ನಡೆಸಿದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ, ಎಸ್ಸೆಸ್ಸೆಫ್ ರಾಜ್ಯ ಘಟಕ ದ ನಿರ್ದೇಶನದಂತೆ, ಎಸ್ಸೆಸ್ಸೆಫ್ ಕೊಳಕೇರಿ ಶಾಖೆ ಯ ವತಿಯಿಂದ  ದಿನಾಂಕ 15-4-2018ಬೆಳಿಗ್ಗೆ 10:00 ಗಂಟೆಗೆ ಪ್ರತಿಭಟನೆ ನಡೆಯಿತು.

SSF ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಮಾತನಾಡಿ ಇದು ಅತ್ಯಂತ ಹ್ಯೇಯ ಕೃತ್ಯವಾಗಿದ್ದು,  ಈ ಬಾಲಕಿಯ ಕುಟುಂಬಕ್ಕೆ ಸರಕಾರವು ನ್ಯಾಯ ದೊರಕಿಸಿ ಕೊಡಬೇಕೆಂದೂ, ಇದು ಮೃಗಗಳೂ ಕೂಡಾ ನಾಚುವಂತಹ ಪಾತಕವಾಗಿದ್ದು, ಇದಕ್ಕೆ ಕುಮ್ಮಕ್ಕನ್ನು ನೀಡಿದವರನ್ನು ಯಾವತ್ತೂ ಅದಿಕ್ಕಾರಕ್ಕೇರಿಸಬಾರದೆಂದರು.
ಈ ವಿಷಯದಲ್ಲಿ ಪ್ರಧಾನಿಯವರು ಮೌನ ಮುರಿಯಬೇಕು, ಆರೋಪಿಗಳಿಗೆ ಅರ್ಹ ಶಿಕ್ಷೆ ನೀಡಬೇಕೆಂದರು. ಈ ವಿಷಯವನ್ನು
ಟಿ ವಿ, ಮಾಧ್ಯಮಗಳು ಹೊರ ಜಗತ್ತಿಗೆ ತಿಳಿಸದಿರುವುದು ದುರದೃಷ್ಟಕರವಾಗಿದ್ದು, ರಾಷ್ಟ್ರಾಧ್ಯಂತ SSFಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಎಲ್ಲರೂ ಇದರಲ್ಲಿ ಕೈ ಜೋಡಿಸಬೇಕೆಂದರು.
ಈ ಪ್ರತಿಭಟನೆಯಲ್ಲಿ ಜಮಾಅತ್ ಅಧ್ಯಕ್ಷರಾದ ಮುಹ್ಯದ್ದೀನ್ ಕುಟ್ಟಿ ಹಾಜಿ, ಕಾರ್ಯದರ್ಶಿ ಶಂಷುದ್ದೀನ್. ಶಾಖಾದ್ಯಕ ಹಮೀದ್, OSF ಪದಾಧಿಕಾರಿಗಳಾದ ಹಮೀದ್ ತಂಙ್ಙಳ್, ಲತೀಫ್ ಕೆ.ವೈ .ಸುಲೈಮಾನ್ ಕೆ.ವೈ. SYS ಸಮಿತಿ ಸದಸ್ಯರಾದ ಇಬ್ರಾಹಿಂ ಅನ್ವರಿ,ಇಬ್ರಾಹಿಂ ಎಂ ಎಂ, ಜಿಲ್ಲಾ ಸಮಿತಿಯ ಅಬ್ದುಲ್ಲ ಸೀ ಎಂ. ಉವೈಸ್ ಬೀ ಎ, ಸೆಕ್ಟರ್ ಸಮಿತಿಯ ಲತೀಫ್ ಎಂವೈ.ಹಾಗೂ ಶಾಖೆಯ ಕಾರ್ಯಕರ್ತರೂ ವಿದ್ಯಾರ್ಥಿಗಳೂ, ಭಾಗವಹಿಸಿದ್ದರು.

error: Content is protected !! Not allowed copy content from janadhvani.com