ಮೊಂಟೆಪದವು:(ಜನಧ್ವನಿ ವಾರ್ತೆ) ಕಥುವಾದ 8 ವರ್ಷದ ಬಾಲಕಿ ಆಸಿಫಾಳನ್ನು ನಿರಂತರ ಅತ್ಯಾಚಾರಗೈದು ಕೊಲೆ ಮಾಡಲಾಗಿದ್ದು, ಇದು ಅತ್ಯಂತ ಅಮಾನವೀಯ ಹಾಗೂ ಪೈಶಾಚಿಕ ಕೃತ್ಯ .ಇಂತಹ ನೀಚ ಕೃತ್ಯವನ್ನು ಮಾಡಿದ ದುಷ್ಕರ್ಮಿಗಳನ್ನು ರಕ್ಷಿಸಲು ಪ್ರೊತ್ಸಾಹಿಸದೇ,ಎಲ್ಲರೂ ಜಾತಿ ಬೇದವಿಲ್ಲದೆ ಪಕ್ಷಾತೀತವಾಗಿ ಹೋರಾಡಿ,ಮುಗ್ದ ಮಗುವಿಗೆ ನ್ಯಾಯವನ್ನು ದೊರಕಿಸಕೊಡಬೇಕಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಕೆ.ಎಂ ಮುಸ್ತಫಾ ನಯೀಮಿ ಮೋಂಟುಗೋಳಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
ಮರಿಕ್ಕಳ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ,ಎಸ್.ವೈ.ಎಸ್ ಮರಿಕ್ಕಳ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ ಅಗಲ್ತಬೆಟ್ಟು,ಸಿ.ಎಚ್ ಅಬ್ದುಲ್ ರಹಿಮಾನ್ ಲತೀಫಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಮರಿಕ್ಕಳ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ, ಮುಅಲ್ಲಿಂ ರಮಳಾನ್ ಮದನಿ,ಅಬೂಬಕ್ಕರ್ ಸಖಾಫಿ ಮರಿಕ್ಕಳ,ಅಬ್ದುಲ್ಲ ಮದನಿ ಕೆಂಪುಗುಡ್ಡೆ,ಫಾರೂಕ್ ಬಾಹಸನಿ ಮೊಂಟೆಪದವು, ಹಾರಿಸ್ ಮಜಲು,ಇಕ್ಬಾಲ್ ನಿಡ್ಮಾಡ್,ಸಿರಾಜ್ ನಿಡ್ಮಾಡ್,ಸುಹೈಲ್ ಕೆಂಪುಗುಡ್ಡೆ,ಹನೀಪ್ ಮೋಂಟುಗೋಳಿ,ನಾಸಿರ್ ಮೋಂಟುಗೋಳಿ ,ಸಿದ್ದೀಕ್ ಮಜಲು,ಶಾಕಿರ್ ಚಂದಹಿತ್ತಿಲು,ಹಮೀದ್ ಕೋಡಿ,ಮುದಸ್ಸಿರ್ ಮೊಂಟೆಪದವು, ಮೊದಲಾದವರು ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಪ್ರಧಾನ ಕಾರ್ಯದರ್ಶಿ ಅಝರ್ ಅಗಲ್ತಬೆಟ್ಟು ಸ್ವಾಗತಿಸಿ,ಕೊನೆಗೆ ವಂದಿಸಿದರು.