ಮಂಗಳೂರು,ಫೆ.25: ಇಲ್ಲಿನ ಹೊರವಲಯದ ವೈದ್ಯಕೀಯ ಕಾಲೇಜುಗಳ ನಗರ ದೇರಳಕಟ್ಟೆ,ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ನಾಟೆಕಲ್ ನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ಫೆ. 28-2022 ರಿಂದ ಮಾರ್ಚ್ 31-2022 ರವರೆಗೆ ನಡೆಯುವ ಈ ಶಿಬಿರದಲ್ಲಿ, ವೈದ್ಯಕೀಯ ಶಾಸ್ತ್ರ ವಿಭಾಗ, ಮಕ್ಕಳ ವಿಭಾಗ, ಕ್ಷಯ ಮತ್ತು ಶ್ವಾಸಕೋಶ ವಿಭಾಗ, ಚರ್ಮರೋಗ ವಿಭಾಗಗಳಲ್ಲಿ ಒಳರೋಗಿಯಾಗಿ ದಾಖಲಾಗಿರುವವರಿಗೆ ಈ ಕೆಳಗಿನ ಸೇವಾ ಸೌಲಭ್ಯಗಳು ಔಷಧಿಯೊಂದಿಗೆ ಉಚಿತವಾಗಿರುತ್ತದೆ.
- ಒಳರೋಗಿಗಳಿಗೆ ಲ್ಯಾಬೋರೇಟರಿ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿರುತ್ತದೆ.
- ಒಳರೋಗಿಯಾಗಿ ದಾಖಲಾಗಿರುವವರಿಗೆ MRI ಸ್ಕ್ಯಾನಿಂಗ್, ಸಿ. ಟಿ ಸ್ಕ್ಯಾನಿಂಗ್, ಮ್ಯಾಮೊಗ್ರಾಮ್, ಎಕ್ಸ್ ರೇ, ಇ.ಸಿ.ಜಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಉಚಿತವಾಗಿ ಮಾಡಲಾಗುವುದು.
- ಸಾಮಾನ್ಯ ವಾರ್ಡಿನಲ್ಲಿ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದ, ಮೂಳೆ ವಿಭಾಗದ, ಕಿವಿ-ಮೂಗು- ಗಂಟಲು ವಿಭಾಗದ ಎಲ್ಲಾ ಶಸ್ತ್ರ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿರುವವರಿಗೆ ಶಸ್ತ್ರ ಚಿಕಿತ್ಸೆಗಳು ಮತ್ತು ಔಷಧಿ ಉಚಿತವಾಗಿರುತ್ತದೆ.
- ಶಸ್ತ್ರ ಚಿಕಿತ್ಸೆಗಳಲ್ಲದ ಇತರೇ ಒಳರೋಗಿಗಳಿಗೂ ಔಷಧಿ ಉಚಿತವಾಗಿರುತ್ತದೆ.
- ಒಳರೋಗಿಗಳಿಗೆ ಫಿಸಿಯೋಥೆರಪಿ ಉಚಿತವಾಗಿರುತ್ತದೆ.
- ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾಗಿರುವವರಿಗೆ
- ಸಾಮಾನ್ಯ ಹೆರಿಗೆ, ಸಿಸೇರಿಯನ್ ಹೆರಿಗೆ ಔಷಧಿ ಸಹಿತ ಸಂಪೂರ್ಣ ಉಚಿತವಾಗಿರುತ್ತದೆ.
- ಗರ್ಭಕೋಶದ ಶಸ್ತ್ರ ಚಿಕಿತ್ಸೆಗಳು ಸಂಪೂರ್ಣ ಉಚಿತವಾಗಿ ಮಾಡಲಾಗುವುದು.
- ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯು ಉಚಿತವಾಗಿರುತ್ತದೆ(SICS)
- ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು (ಕಿಮೋಥೆರಪಿ,ರೇಡಿಯೋಥೆರಪಿ, ಮತ್ತು ಶಸ್ತ್ರ ಚಿಕಿತ್ಸೆ) ಲಭ್ಯವಿರುತ್ತದೆ.
ತೀವ್ರ ನಿಗಾ ಘಟಕ (ICU) (ROOM)ಕೊಠಡಿ ವೆಚ್ಚ 50% ರಿಯಾಯಿತಿ ನೀಡಲಾಗುವುದು.(ಔಷಧಿ ವೆಚ್ಚ,ವೆಂಟಿಲೇಟರ್, ಆಮ್ಲಜನಕ ವೆಚ್ಚ, ಜೀವ ಉಳಿಸುವ ಕಾರ್ಯವಿಧಾನಗಳು ಮತ್ತು ಉಪಕರಣಗಳ ವೆಚ್ಚ ರೋಗಿಗಳೇ ಭರಿಸತಕ್ಕದ್ದು)
ಪ್ರತ್ಯೇಕ ಗಮನಕ್ಕೆ:
- ಈ ಉಚಿತ ಸೇವಾ ಸೌಲಭ್ಯಗಳು ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾಗಿರುವವರಿಗೆ ಮಾತ್ರ ಅನ್ವಯವಾಗಿರುತ್ತದೆ.
- ಈ ಉಚಿತ ಸೇವಾ ಸೌಲಭ್ಯಗಳು ಸ್ಪೆಷಲ್ ರೂಮ್/ಖಾಸಗಿ ರೂಮ್ ಗೆ ಅನ್ವಯವಾಗುದಿಲ್ಲ.
- ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ರಿಯಾಯಿತಿ ದರದಲ್ಲಿ ಹಾಗೂ ಸರಕಾರಿ ವಿಮೆ /ಇ.ಎಸ್.ಐ ಯೊಂದಿಗೆ ಮಾಡಲಾಗುವುದು.
- ಕಾರ್ಮಿಕ ರಾಜ್ಯ ಆರೋಗ್ಯ ವಿಮಾ ಯೋಜನೆಯ (ESI/ESIS) ಮೂಲಕ ಸಂಪೂರ್ಣ ನಗದು ರಹಿತ ಆರೋಗ್ಯ ಸೌಲಭ್ಯಗಳು ಸೇವೆಗೆ ಲಭ್ಯವಿರುತ್ತದೆ.
- ಶ್ರೀ ಕ್ಷೇತ್ರ ಧರ್ಮಸ್ಥಳ
- ಸಂಪೂರ್ಣ ಸುರಕ್ಷಾ ವಿಮಾ ಯೋಜನೆಯು ಸೇವೆಗೆ ಲಭ್ಯವಿರುತ್ತದೆ.
- ಆದಿತ್ಯ ಬಿರ್ಲಾ, ಎಂ.ಡಿ ಇಂಡಿಯಾ ಆರೋಗ್ಯ ವಿಮಾ ಯೋಜನೆ ನಮ್ಮಲ್ಲಿ ಲಭ್ಯವಿರುತ್ತದೆ.
- ಆಸ್ಪತ್ರೆಯ ಹೊರಗಡೆ ಲ್ಯಾಬ್ ಗಳಲ್ಲಿ ನಡೆಸುವ ಟೆಸ್ಟುಗಳ ವೆಚ್ಚಗಳಿಗೆ ಶುಲ್ಕ ವಿಧಿಸಲಾಗುವುದು.
- ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಮೆಶ್, ಇಂಪ್ಲ್ಯಾಂಟ್ ವೆಚ್ಚವನ್ನು ರೋಗಿಗಳು ನೀಡಬೇಕಾಗುತ್ತದೆ.
- ಷರತ್ತುಗಳು ಅನ್ವಹಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ
7353774782, 7353775782, 7349479888
ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ
ನಾಟೆಕಲ್, ಮಂಗಳೂರು📞 0824 2888000


