ದುಬೈ :ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ನಾಲ್ಕನೇ ಆವೃತ್ತಿಯ ಪ್ರತಿಭೋತ್ಸವವು ಫೆಬ್ರುವರಿ 20ರಂದು ದುಬೈ ಇಂಡಿಯನ್ ಅಕಾಡೆಮಿ ಸ್ಕೂಲ್ ಕಿಸೈಸ್ ನಲ್ಲಿ ನಡೆಯಲಿದೆ.
ಯುಎಇ ಯಾದ್ಯಂತ ಏಳು ಎಮಿರೇಟ್ಸ್ ಗಳ (ಅಬೂಧಾಬಿ, ದುಬೈ ನಾರ್ತ್, ದುಬೈ ಸೌತ್, ಶಾರ್ಜಾ, ಅಜ್ಮಾನ್, ಅಲ್ ಐನ್, ರಾಸಲ್ ಕೈಮಾ ಝೋನ್ ಮಟ್ಟಗಳಲ್ಲಿ ನಡೆದ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಹ ಪ್ರತಿಭೆಗಳು ನ್ಯಾಷನಲ್ ಮಟ್ಟದ ಪ್ರತಿಭೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಕುಟುಂಬಗಳು ಮತ್ತು ಅನಿವಾಸಿ ಕನ್ನಡಿಗರು ಭಾಗವಹಿಸುವ ಈ ಕಾರ್ಯಕ್ರಮವು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಲಿದೆ.
ಪ್ರತಿಭೋತ್ಸವ ಯಶಸ್ವಿಯಾಗಿ ಸ್ವಾಗತ ಸಮಿತಿ ನಿರ್ದೇಶಕ ಮಂಡಳಿ ಅಧ್ಯಕ್ಷರಾಗಿ ಅಬೂಸ್ವಾಲಿಹ್ ಹಾಜಿ (ನಫೀಸಾ ಗ್ರೂಪ್), ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್ ಶಾರ್ಜಾ, ಸದಸ್ಯರುಗಳಾಗಿ ಅಬ್ದುಲ್ ಹಮೀದ್ ಸಅದಿ, ಜಲೀಲ್ ನಿಝಾಮಿ, ಉಸ್ಮಾನ್ ಹಾಜಿ ನಾಪೋಕ್ಲು, ಅಬ್ದುಲ್ಲಾ ಹಾಜಿ ನಲ್ಕ, ಪಿಎಂಎಚ್ ಈಶ್ವರಮಂಗಿಲ, ಇಬ್ರಾಹಿಂ ಹಾಜಿ ಬ್ರೈಟ್ ಆಯ್ಕೆ ಮಾಡಲಾಗಿದೆ.
ಸಯ್ಯದ್ ಮಕ್ದೂಂ (ಛೇರ್ಮನ್), ಲತೀಫ್ ತಿಂಗಳಾಡಿ (ಕನ್ವೀನರ್), ಖಾದರ್ ಸಾಲೆತ್ತೂರು (ಕೋಶಾಧಿಕಾರಿ) ನೇತೃತ್ವದಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಯುವ ಕಾರ್ಯಕರ್ತರನ್ನೊಳಗೊಂಡ ವಿವಿಧ ಉಪಸಮಿತಿಯನ್ನು ರಚಿಸಲಾಯಿತು.
ಕಿಡ್ಸ್, ಜೂನಿಯರ್, ಸಬ್ ಜೂನಿಯರ್, ಸೀನಿಯರ್, ಗರ್ಲ್ಸ್, ಲೇಡೀಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಕಿರಾ-ಅತ್, ಕನ್ನಡ, ಅರೇಬಿಕ್, ಮಲಯಾಳಂ ಹಾಡುಗಳು, ಕನ್ನಡ, ಅರೇಬಿಕ್, ಮಲಯಾಳಂ, ಇಂಗ್ಲಿಷ್, ಭಾಷಣ, ಪ್ರಬಂಧ, ಮೆಮೊರಿ ಟೆಸ್ಟ್, ರಸಪ್ರಶ್ನೆ, ಕೈಬರಹ,ದಫ್ಫ್ ಸ್ಪರ್ಧೆ, ಬುರ್ದಾ, ಕವಾಲಿ, ಚಿತ್ರಕಲೆ, ಅಡುಗೆ ಪಾಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಅತ್ಯಾಕರ್ಷಕ ಶೈಲಿಯಲ್ಲಿ ನಡೆಯಲಿದೆ. ಈಗಾಗಲೇ ವಿವಿಧ ಎಮಿರೇಟ್ಸ್ ಗಳಿಂದ ಹಲವಾರು ಕನ್ನಡಿಗ ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದು ಕಾರ್ಯಕ್ರಮದ ಸಿದ್ದತೆಗಳು ಅಂತಿಮ ಹಂತದಲ್ಲಿದೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ