ರಿಯಾದ್ : ಸೌದಿ ಅರೇಬಿಯಾದಲ್ಲಿ ವಿದೇಶಿ ಕಾರ್ಮಿಕರ ಮೇಲೆ ವಿಧಿಸಿದ ಲೆವಿಯ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಶೂರ ಕೌನ್ಸಿಲ್ ಕರೆ ನೀಡಿದೆ.ಸಂಸ್ಥೆಗಳ ಉಳಿವಿನ ಮೇಲೆ ಪರಿಣಾಮ ಬೀರುವ ಲೆವಿ ವ್ಯವಸ್ಥೆಯಲ್ಲಿನ ಬದಲಾವಣೆಗೆ ಶೂರಾ ಸದಸ್ಯರು ಒತ್ತಾಯಿಸಿದರು.
ಲೆವಿ, ಸೌದಿ ಅರೇಬಿಯಾದಲ್ಲಿ ವಿದೇಶಿ ಕಾರ್ಮಿಕರನ್ನು ನಿಯಂತ್ರಿಸುವ ಒಂದು ವ್ಯವಸ್ಥೆಯಾಗಿದೆ. ಪ್ರತಿ ಬಾರಿ ಸೌದಿ ಅರೇಬಿಯಾದಲ್ಲಿ ತಮ್ಮ ರೆಸಿಡೆನ್ಸಿಯನ್ನು ನವೀಕರಿಸಿದಾಗ ನಿಗದಿತ ಮೊತ್ತವನ್ನು ಪಾವತಿಸಬೇಕು. ವಿಮೆ ಮತ್ತು ಸಂಬಂಧಿತ ಶುಲ್ಕಗಳನ್ನು ಒಳಗೊಂಡಂತೆ, ವಿದೇಶೀ ಕೆಲಸಗಾರನಿಗೆ ಸುಮಾರು 12,000 ರಿಯಾಲ್ ವೆಚ್ಚವಾಗುತ್ತದೆ.ಸುಮಾರು ಎರಡು ಲಕ್ಷ ಭಾರತೀಯ ರೂಪಾಯಿಗಳಿಗಿಂತ ಹೆಚ್ಚು.
ಸಣ್ಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ತೆರಿಗೆಯನ್ನು ತಾವೇ ಭರಿಸಬೇಕು. ಆದರೆ, ಹೆಚ್ಚಿನ ಕಾರ್ಮಿಕರ ತೆರಿಗೆಯನ್ನು ಅವರ ಕಂಪನಿಗಳೇ ಪಾವತಿಸುತ್ತಿದೆ. ಇದರ ಪರಿಣಾಮವಾಗಿ, ಹೆಚ್ಚು ವಿದೇಶಿಯರನ್ನು ಹೊಂದಿರುವ ಕಂಪನಿಗಳು ಭಾರೀ ಪ್ರಮಾಣದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಶೂರ ಕೌನ್ಸಿಲ್ ಸಂಬಂಧಪಟ್ಟ ಇಲಾಖೆಗಳನ್ನು ಕೇಳಿದೆ. ಸಂಸ್ಥೆಗಳ ಉಳಿವು ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಲೆವಿ ವ್ಯವಸ್ಥೆಯಲ್ಲಿ ಬದಲಾವಣೆಗೆ ಸದಸ್ಯರು ಒತ್ತಾಯಿಸಿದರು. ಸಂಸ್ಥೆಗಳ ಮೇಲೆ ಕೈಗೊಂಡಿರುವ ಇಂತಹ ಕ್ರಮಗಳನ್ನು ಮರುಪರಿಶೀಲಿಸಬೇಕು ಎಂಬುದು ಸದಸ್ಯರ ಮುಖ್ಯ ಸಲಹೆಯಾಗಿದೆ.