ಅಗಲಿದ ಮರ್ಹೂಮ್ ಮಮ್ಮಿಚ್ಚಾ(ಮೈರಿಕ್ಕಳ) ಅವರ ದಫನ್ ಮತ್ತು ತಲ್ಕ್ಕೀನ್ ಪಾರಾಯಣವು KCF, ICF ಕುವೈಟ್ ಉಲಮಾ ನಾಯಕರ ನೇತ್ರತ್ವದಲ್ಲಿ ನಡೆಸಲಾಯಿತು.ಮಯ್ಯತ್ ನಮಾಝ್ ನ ನೇತ್ರತ್ವವನ್ನು ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ವಹಿಸಿದರು. ಕೆಸಿಎಫ್ ಕುವೈಟ್ ಸಂಘಟನಾ ಅಧ್ಯಕ್ಷರಾದ ಬಹುಮಾನ್ಯ ಉಮರ್ ಝುಹ್ರಿ ತಲ್ಕೀನ್ ಪಠಿಸಿ ದುವಾ ನಡೆಸಿಕೊಟ್ಟರು.ಮೃತರ ಎಲ್ಲಾ ವಿಷಯದಲ್ಲೂ,(ಆಸ್ಪತ್ರೆಯ ದಾಖಲೆಗಳ ಬಗ್ಗೆ) ಕೈ ಜೋಡಿಸಿದ ಕುವೈಟ್ ICF ಸಮೀರ್ ಉಸ್ತಾದ್, ಹಾಗೂ KKMA ಜನಾಬ್ ಇಕ್ಬಾಲ್ ಹಲವು ಸಂಘಟನೆಯ ನಾಯಕರು ಭಾಗವಹಿಸಿದರು.ಮರ್ಹ್ಹೂಮ್ ಅವರ ಹೆಸರಿನಲ್ಲಿ ತಹ್ಲೀಲ್,ಖುರ್-ಆನ್ ಪಾರಾಯಾಣ ಮಾಡಬೇಕಾಗಿ ಮತ್ತು ಮಯ್ಯತ್ ನಮಾಜ್ ನಿರ್ವಹಿಸಬೇಕಾಗಿ ಕೆಸಿಎಫ್ ಕುವೈತ್ ಸಾಂತ್ವನ ವಿಭಾಗದ ಅಧ್ಯಕ್ಷ ಜನಾಬ್ ಯಾಕುಬ್ ಕಾರ್ಕಳ ಈ ಮೂಲಕ ವಿನಂತಿಸಿ ಕೊಂಡಿದ್ದಾರೆ.