janadhvani

Kannada Online News Paper

ಬಹ್ರೇನ್ ಪ್ರವೇಶಾನುಮತಿ: ಪರಿಷ್ಕೃತ ಪ್ರಯಾಣ ನಿಯಮಗಳು

ಮನಾಮ: ವಿವಿಧ ದೇಶಗಳಿಂದ ಬಹ್ರೇನ್‌ಗೆ ಪ್ರವೇಶಿಸುವ ಷರತ್ತುಗಳನ್ನು ಪರಿಷ್ಕರಿಸಲಾಗಿದೆ.ಬಹ್ರೇನ್‌ನ ಪರಿಷ್ಕೃತ ಪ್ರಯಾಣ ನಿಯಮಗಳು ಜೂನ್ 25 ರಿಂದ ಜಾರಿಗೆ ಬರಲಿವೆ.

ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ವಿಯೆಟ್ನಾಂನಂತಹ ಕೆಂಪು-ಪಟ್ಟಿ ದೇಶಗಳ ಪ್ರಯಾಣದ ನಿಯಮಗಳಲ್ಲಿ ಬದಲಾವಣೆಯಿಲ್ಲ. ಈ ದೇಶಗಳಿಂದ ಬಹ್ರೇನ್‌ನಲ್ಲಿ ನಿವಾಸ ವೀಸಾ ಹೊಂದಿರುವವರು ಮತ್ತು ಬಹ್ರೇನಿ ಪ್ರಜೆಗಳಿಗೆ ಮಾತ್ರ ಪ್ರವೇಶ ಸೀಮಿತ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಈ ದೇಶಗಳಿಂದ ಪ್ರಯಾಣಿಸುವವರು, 48 ಗಂಟೆಗಳ ಒಳಗೆ ನಡೆಸಿದ ಕೋವಿಡ್ ಪಿಸಿಆರ್ ಪರೀಕ್ಷೆಯ ನೆಗಟಿವ್ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ಇದು ಆರು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನ್ವಯಿಸುತ್ತದೆ. ಪ್ರಮಾಣಪತ್ರದಲ್ಲಿ ಕ್ಯೂಆರ್ ಕೋಡ್ ಕಡ್ಡಾಯವಾಗಿದೆ.

ಬಹ್ರೇನ್‌ನ ವಿಮಾನ ನಿಲ್ದಾಣದಲ್ಲೂ,ದೇಶಕ್ಕೆ ಆಗಮಿಸಿದ 10 ನೇ ದಿನದಂದು ಎಲ್ಲಾ ಪ್ರಯಾಣಿಕರು ಪಿಸಿಆರ್ ಟೆಸ್ಟ್ ನಡೆಸಬೇಕು. ಇದಕ್ಕಾಗಿ 24 ದಿನಾರ್ ಪಾವತಿಸಬೇಕು.ಬಿ ಅವೇರ್ ಆ್ಯಪ್ ಮೂಲಕ, ಬಹ್ರೇನ್ ಇ-ಗಾವರ್ಮೆಂಟ್ ಪೋರ್ಟಲ್ ಮೂಲಕ ಅಥವಾ ವಿಮಾನ ನಿಲ್ದಾಣದ ಕಿಯೋಸ್ಕ್ ಕರೆನ್ಸಿ ಇಲ್ಲವೇ ಕಾರ್ಡ್‌ ಮೂಲಕ ಪಾವತಿಸಬಹುದು.

14 ದಿನಗಳೆಡೆಯಲ್ಲಿ ರೆಡ್ ಲಿಸ್ಟ್ ದೇಶಗಳಿಗೆ ಪ್ರಯಾಣಿಸಿದವರಿಗೂ ಬಹ್ರೇನ್ ಪ್ರವೇಶಾನುಮತಿಯಿಲ್ಲ.

ಬಹ್ರೇನ್‌ನಲ್ಲಿ 10 ದಿನಗಳ ಕಡ್ಡಾಯ ಸಂಪರ್ಕತಡೆಯನ್ನು ಸಹ ಮುಂದುವರಿಸಲಾಗುವುದು. ಸಂಪರ್ಕತಡೆಯನ್ನು ಸ್ವಂತ ಹೆಸರಿನ ಅಥವಾ ಕುಟುಂಬ ಸದಸ್ಯರ ಹೆಸರಿನ ನಿವಾಸ ಸ್ಥಳದಲ್ಲಿ ಇಲ್ಲವೇ ಎನ್‌ಎಚ್‌ಆರ್‌ಎ ಅನುಮೋದಿತ ಕೇಂದ್ರದಲ್ಲಿ ಪೂರ್ತೀಕರಿಸಬೇಕು. ಆರು ವರ್ಷದೊಳಗಿನವರಿಗೆ ವಿನಾಯಿತಿಯಿದೆ .ಕೋವಿಡ್ ಲಸಿಕೆ ಪಡೆದವರಿಗೂ ಈ ನಿಯಮಗಳು ಅನ್ವಯಿಸುತ್ತವೆ.

ರೆಡ್ ಲಿಸ್ಟ್ ಅಲ್ಲದ ದೇಶಗಳಿಂದ ಬರುವವರು ನಿರ್ಗಮಿಸುವ 72 ಗಂಟೆಗಳ ಒಳಗೆ ನಡೆಸಿದ ಕೋವಿಡ್ ಪಿಸಿಆರ್ ಪರೀಕ್ಷೆಯ ನೆಗಟಿವ್ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಯುರೋಪ್, ಕೆನಡಾ ಮತ್ತು ಆಸ್ಟ್ರೇಲಿಯಾದಿಂದ ವ್ಯಾಕ್ಸಿನೇಷನ್ ಪೂರ್ಣಗೊಳಿಸಿದ ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪಡೆದವರಿಗೆ ಸಂಪರ್ಕತಡೆಯ ಅಗತ್ಯವಿಲ್ಲ.ಇವರು ಬಹ್ರೇನ್‌ ಹೊರಡುವ ಮುಂಚಿತವಾಗಿ ಮತ್ತು ಆಗಮನದ ನಂತರದ ಎರಡು ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.

error: Content is protected !! Not allowed copy content from janadhvani.com