janadhvani

Kannada Online News Paper

ಶುಭ ಸುದ್ದಿ: ಇಖಾಮಾ,ರೀ ಎಂಟ್ರಿ ಉಚಿತ ವಿಸ್ತರಣೆ- ದೊರೆ ಸಲ್ಮಾನ್ ಆದೇಶ

ರಿಯಾದ್: ಸೌದಿ ಅರೇಬಿಯಾಕ್ಕೆ ಪ್ರವೇಶ ನಿರ್ಬಂಧಿಸಲ್ಪಟ್ಟಿರುವ ದೇಶಗಳಿಂದ ಸೌದಿಗೆ ಮರಳಲು ಸಾಧ್ಯವಾಗದೆ ಸ್ವದೇಶದಲ್ಲಿ ಉಳಿದಿರುವ ಕಾರ್ಮಿಕರ ಇಕಾಮಾ,ರೀ ಎಂಟ್ರಿ ವಿಸಾವನ್ನು ಉಚಿತವಾಗಿ ವಿಸ್ತರಿಸಲಾಗುವುದು. ಸಂದರ್ಶಕ ವಿಸಾವನ್ನೂ ಉಚಿತವಾಗಿ ವಿಸ್ತರಿಸಲಾಗುವುದು.

ಸೌದಿ ಅರೇಬಿಯಾದ ದೊರೆ ರಾಜ ಸಲ್ಮಾನ್ ಅವರ ಆದೇಶದಂತೆ, ಇಖಾಮಾ, ಮರು ಪ್ರವೇಶ ಮತ್ತು ಭೇಟಿ ವೀಸಾವನ್ನು ಜೂನ್ 2, 2021 ರವರೆಗೆ ವಿಸ್ತರಿಸಲಾಗುವುದು.

ಹೊಸ ನಿರ್ಧಾರ ಭಾರತೀಯ ವಲಸಿಗರಲ್ಲಿ ನೆಮ್ಮದಿಯನ್ನು ತಂದಿದೆ. ಮುಂದಿನ ದಿನಗಳಲ್ಲಿ ಈ ಕುರಿತ ಕಾರ್ಯವಿಧಾನಗಳು ಪೂರ್ಣಗೊಳ್ಳಲಿವೆ.ಇದರ ಖರ್ಚು ವೆಚ್ಚವನ್ನು ಹಣಕಾಸು ಸಚಿವಾಲಯ ಭರಿಸಲಿದೆ. ನವೀಕರಣವು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ಹಂತ ಹಂತವಾಗಿ ಪೂರ್ಣಗೊಳ್ಳಲಿದೆ.

error: Content is protected !! Not allowed copy content from janadhvani.com