ರಿಯಾದ್: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ವಿದೇಶಿಯರು ಸ್ವದೇಶಕ್ಕೆ ತೆರಳಲು ಈಗ ಪ್ರಾಯೋಜಕರ ಮೂಲಕವಲ್ಲದೆ ರೀ ಎಂಟ್ರಿ ವೀಸಾ ಪಡೆಯಬಹುದು.ಸೌದಿ ಪಾಸ್‌ಪೋರ್ಟ್ ಪ್ರಾಧಿಕಾರದ (ಸೌದಿ ಜವಾಝಾತ್) ಆನ್‌ಲೈನ್ ಪೋರ್ಟಲ್ ಅಬ್ಶೀರ್‌ನಲ್ಲಿ ಈ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ.
ಪರಿಷ್ಕೃತ ಉದ್ಯೋಗ ವ್ಯವಸ್ಥೆಯ ಭಾಗವಾಗಿ ಕಾರ್ಮಿಕ ನಿರ್ಗಮನ ಮರು ಪ್ರವೇಶ ವಿಸಾವನ್ನು ಸ್ವಂತವಾಗಿ ಪಡೆಯುವ ವ್ಯವಸ್ಥೆಯನ್ನು ಅಬ್ಶೀರ್ ಪರಿಚಯಿಸಿದೆ. ಇದರೊಂದಿಗೆ, ವಿದೇಶಿ ಕಾರ್ಮಿಕರು ಈಗ ಸ್ವಂತವಾಗಿ ರೀ ‘ಎಂಟ್ರಿ ಪಡೆದು’ ಸೌದಿ ಅರೇಬಿಯಾವನ್ನು ತೊರೆಯಬಹುದು.
ಅಬ್ಶೀರ್‌ನಲ್ಲಿರುವ ನಿಮ್ಮ ಸ್ವಂತ ಖಾತೆಯಿಂದ ಇ-ಸರ್ವೀಸ್ ಪಾಸ್‌ಪೋರ್ಟ್-ವೀಸಾ ಸರ್ವೀಸ್ ಮೂಲಕ ಅದನ್ನು ಪಡೆಯ ಬಹುದು. ಕೆಲವು ಷರತ್ತುಗಳು ಅನ್ವಯ.
- ಉದ್ಯೋಗದಾತ ಮತ್ತು ಕೆಲಸಗಾರ ಇಬ್ಬರಿಗೂ ಅಬ್ಶೀರ್, ಇಸ್ತಿಖ್ದಾಂ ಖಾತೆಗಳು ಕಡ್ಡಾಯ.
- ಕೆಲಸಗಾರನ ಹೆಸರಿನಲ್ಲಿ ಯಾವುದೇ ಸಂಚಾರ ದಂಡ ಇರಬಾರದು.
- ಪ್ರಸ್ತುತ ಮಾನ್ಯತೆ ಇರುವ ಎಕ್ಸಿಟ್ ರೀ ಎಂಟ್ರಿ ವೀಸಾ ಹೊಂದಿರಬಾರದು.
- ಮರು ಪ್ರವೇಶ ವೀಸಾ ನೀಡುವ ಸಮಯದಲ್ಲಿ ಕೆಲಸಗಾರ ದೇಶದಲ್ಲಿರಬೇಕು.
- ವೀಸಾ ಶುಲ್ಕ ಪಾವತಿಸಬೇಕು.
- ಇತರ ನಿಯಮಗಳನ್ನು ಅನುಸರಿಸಬೇಕು.
ಆದಾಗ್ಯೂ, ಫೈನಲ್ ಎಕ್ಸಿಟ್ ವಿಸಾ ಪಡೆಯಲು, ಮೇಲೆ ತಿಳಿಸಿದ ಷರತ್ತುಗಳ ಜೊತೆಗೆ, ಸ್ವಂತ ಹೆಸರಿನಲ್ಲಿ ವಾಹನ ಹೊಂದಿರಬಾರದು ಎಂಬ ನಿಯಮವಿದೆ.
ಅಬ್ಶೀರ್ ನಲ್ಲಿ ಸಲ್ಲಿಸಿದ ಕೋರಿಕೆ ಮೇರೆಗೆ, ಅದನ್ನು ಅನುಮೋದಿಸಲು ಅಥವಾ ತಿರಸ್ಕರಿಸಲು ಉದ್ಯೋಗದಾತನಿಗೆ 10 ದಿನಗಳ ಕಾಲಾವಕಾಶವಿರುತ್ತದೆ. ಉದ್ಯೋಗದಾತನು ವೀಸಾವನ್ನು ಅನುಮೋದಿಸಿದರೆ, ಐದು ದಿನಗಳಲ್ಲಿ ನಿರ್ಗಮನ ಮರು-ಪ್ರವೇಶ ವೀಸಾವನ್ನು ಪಡೆಯಬಹುದು.
ಆದಾಗ್ಯೂ, ಉದ್ಯೋಗದಾತನು ವೀಸಾವನ್ನು ನಿರಾಕರಿಸಿದರೆ, ಕಾರ್ಮಿಕ ಸಚಿವಾಲಯವು ಆಕ್ಷೇಪಣೆಯನ್ನು ಪರಿಶೀಲಿಸುತ್ತದೆ ಮತ್ತು ಆರಂಭಿಕ ವಿನಂತಿಯ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ. ಉದ್ಯೋಗದಾತ 10 ದಿನಗಳಲ್ಲಿ ಪ್ರತಿಕ್ರಿಯಿಸದಿದ್ದರೆ, ಕೋರಿಕೆಯನ್ನು ಸ್ವೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಕಾರ್ಮಿಕನು ಮುಂದಿನ ಐದು ದಿನಗಳಲ್ಲಿ ರೀ ಎಂಟ್ರಿ ವೀಸಾವನ್ನು ಪಡೆಯಬಹುದು.