ಕಾವಳಕಟ್ಟೆ : ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ನೇತೃತ್ವದಲ್ಲಿ ನಡೆಯುವ ಜಲಾಲಿಯಾ ದ್ಸಿಕ್ರ್ ಮಜ್ಲಿಸಿನ ವಾರ್ಷಿಕ ಮಹಾ ಸಮ್ಮೇಳನ ಇಂದು ಸಂಜೆ ಕಾವಳಕಟ್ಟೆಯ ಅಲ್ ಖಾದಿಸಾ ಕ್ಯಾಂಪಸ್ ಮೈದಾನದಲ್ಲಿ ನಡೆಯಲಿದೆ.
ಅಸರ್ ನಮಾಝ್ ಬಳಿಕ ಖತ್ಮುಲ್ ಖುರ್‌ಆನ್ ಮಜ್ಲಿಸ್ ನಡೆಯಲಿದ್ದು ಬಳಿಕ ಸಯ್ಯಿದ್ ಜಅಫರ್ ಸ್ವಾದಿಖ್ ಕುಂಬೋಳ್ ರವರ ನೇತೃತ್ವದಲ್ಲಿ ಜಲಾಲಿಯಾ ದ್ಸಿಕ್ರ್ ಮಜ್ಲಿಸ್ ನಡೆಯಲಿದೆ. ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಅಧ್ಯಕ್ಷತೆ ವಹಿಸಲಿದ್ದು ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದು ಜಿಲ್ಲೆಯ ಪ್ರಮುಖ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.