janadhvani

Kannada Online News Paper

ಕೋವಿಡ್ ಹೆಚ್ಚಳ: ಖತ್ತರಿನಲ್ಲಿ ಮಾ.26 ರಿಂದ ಕಠಿಣ ನಿಯಂತ್ರಣ

ದೋಹಾ: ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದಂತೆ, ಕತಾರ್‌ನಲ್ಲಿ ನಿರ್ಬಂಧಗಳನ್ನು ಪುನಃ ಸ್ಥಾಪಿಸಲಾಗುತ್ತಿದೆ. ಮಾರ್ಚ್ 26 ರ ಶುಕ್ರವಾರದಿಂದ ಹೆಚ್ಚಿನ ನಿರ್ಬಂಧಗಳು ಜಾರಿಗೆ ಬರಲಿವೆ. ಅದಕ್ಕೆ ತಕ್ಕಂತೆ ಹೊಸ ಆದೇಶಗಳನ್ನು ಕೆಳಗೆ ನಮೂದಿಸಲಾಗಿದೆ.

  • ಕೇವಲ ಶೇಕಡಾ 80 ಉದ್ಯೋಗಿಗಳಿಗೆ ಮಾತ್ರ ಸರ್ಕಾರಿ ಮತ್ತು ಖಾಸಗಿ ವಲಯದ ಕಚೇರಿಗಳಲ್ಲಿ ಹಾಜರಾಗಬೇಕು.ಮತ್ತು ಉಳಿದ 20% ಜನರು ಮನೆಯಿಂದಲೇ ಕೆಲಸ ಮಾಡಬೇಕು.
  • ಐದಕ್ಕಿಂತ ಹೆಚ್ಚು ಜನರು ಕಚೇರಿಯ ಸಭೆಗಳಿಗೆ ಹಾಜರಾಗಬಾರದು.
  • ವಿವಾಹ ಸಮಾರಂಭಗಳನ್ನು ಅನುಮತಿಸಲಾಗುವುದಿಲ್ಲ.
  • ಸಾರ್ವಜನಿಕ ಉದ್ಯಾನವನಗಳು, ಕಡಲತೀರಗಳು ಮತ್ತು ಕಾರ್ನೀಶ್ ಗಳಲ್ಲಿನ ಆಟದ ಮೈದಾನಗಳನ್ನು ಮುಚ್ಚಲಾಗುವುದು.
  • ಚಾಲನಾ ಶಾಲೆಗಳನ್ನು ಮುಚ್ಚಲಾಗುವುದು.
  • ಚಿತ್ರಮಂದಿರಗಳಲ್ಲಿ ಶೇ.20 ಮಂದಿಗೆ ಮಾತ್ರ ಪ್ರವೇಶವಿದೆ, ಮತ್ತು 18 ವರ್ಷಕ್ಕಿಂತ ಕೆಳಗಿನವರಿಗೆ ಪ್ರವೇಶವಿಲ್ಲ.
  • ಖಾಸಗಿ ಶಿಕ್ಷಣ ಕೇಂದ್ರಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಆನ್‌ಲೈನ್ ಕಲಿಕೆ ಮಾತ್ರ.
  • ಸಾರ್ವಜನಿಕ ವಸ್ತು ಸಂಗ್ರಹಾಲಯಗಳು ಮತ್ತು ಗ್ರಂಥಾಲಯಗಳ ಸಾಮರ್ಥ್ಯವು ಶೇಕಡಾ 30 ಮೀರಬಾರದು.
  • ಸಚಿವಾಲಯದ ಅನುಮತಿಯಿಲ್ಲದೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಾರದು.
  • 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶಾಪಿಂಗ್ ಸಂಕೀರ್ಣಗಳಿಗೆ ಪ್ರವೇಶವಿಲ್ಲ.
  • ಶಾಪಿಂಗ್ ಸಂಕೀರ್ಣಗಳ ಕಾರ್ಯಾಚರಣೆಯು ಕೇವಲ ಮೂವತ್ತು ಶೇಕಡಾ ಸಾಮರ್ಥ್ಯವನ್ನು ಹೊಂದಿದೆ.
  • ಶಾಪಿಂಗ್ ಸಂಕೀರ್ಣಗಳಲ್ಲಿನ ಪ್ರಾರ್ಥನಾ ಕೊಠಡಿಗಳನ್ನು ಮುಚ್ಚಬೇಕು.
  • ಫುಡ್ ಕೋರ್ಟ್ ಗಳಲ್ಲಿ ಹೋಂ ಡೆಲಿವರಿ ಮಾತ್ರ.
  • ಒಳಾಂಗಣದ ರೆಸ್ಟೋರೆಂಟ್‌ಗಳು ಮತ್ತು ಕೆಫೆಟೇರಿಯಾಗಳ ಕಾರ್ಯಾಚರಣಾ ಸಾಮರ್ಥ್ಯವು 15% ಮೀರಬಾರದು.
  • ಕ್ಲೀನ್ ಕತಾರ್ ಯೋಜನೆಯಡಿಯ ಹೋಟೆಲ್‌ಗಳು ಮತ್ತು ಕೆಫೆಟೇರಿಯಾಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಮತ್ತು ಉಳಿದವು ಶೇಕಡಾ 30 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಲ್ಲವು.
  • ಕೇವಲ 30% ಜನರಿಗೆ ಮಾತ್ರ ಸಾರ್ವಜನಿಕ ಮಾರುಕಟ್ಟೆಗಳಿಗೆ ಪ್ರವೇಶವಿದೆ ಮತ್ತು 12 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ.
  • ಮನೋರಂಜನಾ ಉದ್ಯಾನವನಗಳನ್ನು ಮುಚ್ಚಲಾಗುವುದು.
  • ಜಿಮ್ನಾಷಿಯಂಗಳು ಮತ್ತು ಮಸಾಜ್ ಪಾರ್ಲರ್‌ಗಳನ್ನು ಮುಚ್ಚಬೇಕು.
  • ಈಜುಕೊಳಗಳು ಮತ್ತು ವಾಟರ್ ಪಾರ್ಕ್‌ಗಳನ್ನು ಸಹ ಅನುಮತಿಸಲಾಗುವುದಿಲ್ಲ.
  • ಖಾಸಗಿ ಆಸ್ಪತ್ರೆಗಳು ಕೇವಲ 70 ಪ್ರತಿಶತದಷ್ಟು ಮಾತ್ರ ಕಾರ್ಯನಿರ್ವಹಿಸಲಿದೆ.

error: Content is protected !! Not allowed copy content from janadhvani.com