janadhvani

Kannada Online News Paper

ಡಾ| ಎ ಕೆ ಖಾಸಿಮ್ ಉಪ್ಪಳ ಮಕ್ಕಾದಲ್ಲಿ ನಿಧನ: ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಸಂತಾಪ

ಪವಿತ್ರ ಮಕ್ಕತುಲ್ ಮುಕರ್ರಮದಲ್ಲಿರುವ ಏಷ್ಯನ್ ಆಸ್ಪತ್ರೆಯಲ್ಲಿ ಸೇವೆಗಯ್ಯುತ್ತಿದ್ದ ಉಪ್ಪಳದ ಡಾ| ಎ ಕೆ ಖಾಸಿಮ್ ರವರು ಇಂದು ಬೆಳಿಗ್ಗೆ ಮರಣ ಹೊಂದಿದ್ದಾರೆ. ಒಮ್ಮೆ ಜಿದ್ದಾದಿಂದ ಮುಂಬೈಗೆ ಹೋಗುತ್ತಿದ್ದ ವಿಮಾನದಲ್ಲಿ 55 ವರ್ಷದ ಮಹಿಳೆಯೊಬ್ಬರಿಗೆ ಹೃದಯಾಘಾತವಾದ ಸಂದರ್ಭದಲ್ಲಿ ಡಾ| ಖಾಸಿಮ್ ರವರು ನೆರವಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಅನಿವಾಸಿ ಕನ್ನಡಿಗರಿಗೆಂದೂ ಆಸರೆಯಾಗಿದ್ದ ಇವರ ಅಗಲುವಿಕೆ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.

ಕೆಸಿಎಫ್ ಸಂಘಟನೆಗೆ ಬೆನ್ನೆಲುಬಾಗಿದ್ದ ಇವರು ಹಜ್ಜ್ ಸಮಯದಲ್ಲಿ KCF – HVC ಸ್ವಯಂಸೇವಕರಿಗೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನ ಗಳನ್ನು ನೀಡುತ್ತಿದ್ದರು.

ಅಲ್ಲಾಹನು ಮೃತರಿಗೆ ಮಗ್’ಫಿರತ್ ಹಾಗೂ ಮರ್’ಹಮತ್ ನೀಡಿ ಅನುಗ್ರಹಿಸಲಿ. ಅವರ ಖಬರನ್ನು ಸ್ವರ್ಗದ ಉದ್ಯಾನವನ್ನಾಗಿ ಮಾರ್ಪಡಿಸಲಿ. ಮೃತರ ಕುಟುಂಬ, ಬಂದು-ಬಳಗದವರಿಗೆ ದುಃಖವನ್ನು ಸಹಿಸುವ ತಾಳ್ಮೆ ಹಾಗೂ ಸಹನೆ ಶಕ್ತಿಯನ್ನು ಅಲ್ಲಾಹನು ನೀಡಿಲಿ. ಇವರ ಅಕಾಲಿಕ ಮರಣಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು, ಪ್ರಧಾನ ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿ ಹಾಗೂ ಸೌದಿ ಅರೇಬಿಯಾ ರಾಷ್ಟ್ರೀಯ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ಸಂತಾಪ ಸೂಚಿಸಿದರು.

error: Content is protected !! Not allowed copy content from janadhvani.com