ಕುಂದಾಪುರ, ಮಾರ್ಚ್ 19; ಕುಂದಾಪುರ ಡಿವಿಷನ್ ವ್ಯಾಪ್ತಿಯ ಎಸ್ಸೆಸ್ಸೆಫ್ ಕೋಟ-ಪಡುಕೆರೆ ಶಾಖೆ ಇದರ ವತಿಯಿಂದ ಇಂದಿನಿಂದ (ಮಾರ್ಚ್ 19 to 21) ತ್ರಿದಿನಗಳಲ್ಲಿ ಮಹ್’ಳರತುಲ್ ಬದ್ರಿಯ್ಯಃ, ಬುರ್ದಾ ಮಜ್ಲಿಸ್, ದಫ್ ರಾತೀಬ್ ಕಾರ್ಯಕ್ರಮಗಳು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದ್ದು, ಉಲಮಾ-ಉಮಾರಾ ನಾಯಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಒಂದು ಕಾರ್ಯಕ್ರಮಕ್ಕೆ ಎಸ್ಸೆಸ್ಸೆಫ್ ಎಲ್ಲಾ ನಾಯಕರು, ಕಾರ್ಯಕರ್ತರನ್ನು ಆಹ್ವಾನಿಸಿರುತ್ತಾರೆ. ಆದ್ದರಿಂದ ಈ ಎಲ್ಲಾ ಮಜ್ಲಿಸ್’ನಲ್ಲಿ ಸರ್ವ ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಲ್ಲಿ ಸಹಕರಿಸಲು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ, ಪ್ರ.ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಮಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾ ಮೀಡಿಯಾ ಸೆಲ್ ವರದಿ ಮಾಡಿದೆ.