ದುಬೈ, ಡಿ. 25: ವಿಮಾನ ರದ್ದಾದ ಕಾರಣ ಯುಎಇಯಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ 300ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಎರಡನೇ ಹಂತದಲ್ಲಿ ಹರಡುತ್ತಿರುವ ಕೊರೊನಾ ಸೋಂಕನ್ನು ತಡೆಯಲು ಸೌದಿ ಅರೇಬಿಯಾ ಮತ್ತು ಕುವೈತ್ ಗಡಿಗಳನ್ನು ಮುಚ್ಚಲ್ಪಟ್ಟು, ಯುಎಇಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ದುಬೈ ಮರ್ಕಝ್ ICF ವ್ಯವಸ್ಥೆ ಕಲ್ಪಿಸಿದೆ.
ತಮ್ಮ ದೇಶದಿಂದ ನೇರ ವಿಮಾನ ಸೌಲಭ್ಯವಿಲ್ಲ. ಯುಎಇಗೆ ಆಗಮಿಸಿ ಇಲ್ಲಿಂದ ತಮ್ಮ ತಮ್ಮ ದೇಶಗಳಿಗೆ ಮತ್ತು ಉದ್ಯೋಗದಲ್ಲಿರುವ ದೇಶಗಳಿಗೆ ತೆರಳಲು ಮುಂದಾಗಿದ್ದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.14 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ ಮತ್ತು ಕುವೈತ್ ಗೆ ತೆರಳಲು ಸಜ್ಜಾಗಿದ್ದ ಸಂದರ್ಭದಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.
ನಿರ್ಮಾಣ ಕಂಪನಿ ಆಸಾ ಗ್ರೂಪ್ ಜೊತೆಗೂಡಿ ಇಂಡಿಯನ್ ಕಲ್ಚರಲ್ ಫೌಂಡೇಶನ್ ICF ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ. ಸಿಲುಕಿಕೊಂಡವರಲ್ಲಿ ಬಹುತೇಕರು ಕೇರಳ ಮೂಲದವರಾಗಿದ್ದಾರೆ ಎಂದು ಐಸಿಎಫ್ ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುಲ್ ಸಲಾಮ್ ಸಖಾಫಿ ಹೇಳಿರುವುದನ್ನು ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ.