janadhvani

Kannada Online News Paper

ಎಲ್ಲಾ ವೀಸಾ ಉಲ್ಲಂಘಕರು ಡಿ.31 ರ ಮುಂಚಿತವಾಗಿ ದೇಶ ತೊರೆಯಬೇಕು

ಅಬುಧಾಬಿ: ಎಲ್ಲಾ ವೀಸಾ ಉಲ್ಲಂಘಕರು ಈ ತಿಂಗಳ 31 ರ ಮುಂಚಿತವಾಗಿ ದೇಶವನ್ನು ತೊರೆಯುವಂತೆ ಯುಎಇಯ ಫೆಡರಲ್ ಪ್ರಾಧಿಕಾರ ಎಚ್ಚರಿಸಿದೆ.

ದಂಡವಿಲ್ಲದೆ ಸ್ವದೇಶಕ್ಕೆ ಮರಳಲು ಅವಕಾಶ ಮಾಡಿಕೊಟ್ಟ ಔಟ್ ಪಾಸ್ ಅವಧಿ ಈ ತಿಂಗಳು ಕೊನೆಗೊಳ್ಳುತ್ತದೆ.ದಂಡವಿಲ್ಲದೆ ಮರಳಲು ಅನುಮತಿಸುವ ಸಮಯವನ್ನು ಬಳಸಬೇಕೆಂದು ಐಡೆಂಟಿಟಿ ಮತ್ತು ಸಿಟಿಜನ್ಶಿಪ್ ಫೆಡರಲ್ ಪ್ರಾಧಿಕಾರವು ಶಿಫಾರಸು ಮಾಡಿದೆ. ಈ ವರ್ಷದ ಮಾರ್ಚ್ 1 ರ ಮೊದಲು ವೀಸಾಗಳ ಅವಧಿ ಮುಗಿದವರಿಗೆ ಔಟ್ ಪಾಸ್ ಗೆ ಅವಕಾಶವಿದೆ.

ನಿವಾಸ ವೀಸಾ ಅವಧಿ ಮುಗಿದ ನಂತರ ಯುಎಇಯಲ್ಲಿ ಉಳಿದುಕೊಂಡಿರುವವರು ಡಿಸೆಂಬರ್ 31 ರ ಮೊದಲು ಪ್ರಯಾಣಿಸುವ ಟಿಕೆಟ್‌ನೊಂದಿಗೆ ನಿರ್ಗಮನಕ್ಕೆ ನಾಲ್ಕು ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿ,ಔಟ್ ಪಾಸ್ ಕಾರ್ಯವಿಧಾನವನ್ನು ಪೂರ್ಣಗೊಳಿಸಬಹುದು.

ಭೇಟಿ ವೀಸಾ ಅವಧಿ ಮುಗಿದ ನಂತರ ಯುಎಇಯಲ್ಲಿ ಉಳಿದುಕೊಂಡಿರುವವರು ಔಟ್ ಪಾಸ್ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ಆರು ಗಂಟೆಗಳ ಮುಂಚಿತವಾಗಿ ಅಬುಧಾಬಿ, ಶಾರ್ಜಾ ಮತ್ತು ರಾಸ್ ಅಲ್ ಖೈಮಾ ವಿಮಾನ ನಿಲ್ದಾಣಗಳಿಗೆ ತೆರಳಬೇಕು.

ದುಬೈ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸಲು,ದುಬೈ ನಾಗರಿಕ ವಿಮಾನಯಾನ ಭದ್ರತಾ ಕೇಂದ್ರಕ್ಕೆ ನಲವತ್ತೆಂಟು ಗಂಟೆಗಳ ಮುಂಚಿತವಾಗಿ ವರದಿ ಮಾಡಬೇಕು. ವೀಸಾ ಉಲ್ಲಂಘಕರ ಅವಲಂಬಿತರಾಗಿ ಉಳಿದವರು ಕೂಡಾ ಅದೇ ಸಮಯದಲ್ಲಿ ಮನೆಗೆ ಮರಳಬೇಕು ಎಂದು ಐಸಿಎ ಹೇಳಿದೆ.

error: Content is protected !! Not allowed copy content from janadhvani.com