UAE ಯಲ್ಲಿ 10 ವರ್ಷಗಳ ಕಾಲ ವಾಸಿಸಲಿರುವ ಗೋಲ್ಡನ್ ವಿಸಾವನ್ನು UAE ಅನುಮೋದನೆ ಮಾಡಲಾಗಿದೆ ಎಂದು ದುಬೈ ದೊರೆ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ರವರು ಇಂದು ತಿಳಿಸಿದ್ದಾರೆ.
ಈ ಮೊದಲು UAE ಯಲ್ಲಿ ವಿದೇಶಿಯರಿಗೆ ಕೆಲವು ವರ್ಷಗಳ ಕಾಲ ವಾಸಿಸಬಹುದಾದ ವಿಸಾ ಜಾರಿಯಲ್ಲಿತ್ತು ಆದರೆ ಕಳೆದ ಎರಡು ವರ್ಷಗಳಲ್ಲಿ ವಿಸಾ ನಿಯಮದಲ್ಲಿ ಹಲವಾರು ಬದಲಾವಣೆ ತರಲಾಗಿದೆ. ಇದರಲ್ಲೊಂದಾಗಿದೆ ಗೋಲ್ಡನ್ ವಿಸಾ.
ವಿಶೇಷ ಪದವಿದಾರರಿಗೆ ಮಾತ್ರವಾಗಿದೆ ಈ ವಿಸಾ ಸವಲತ್ತು ಸಿಗುವುದು. ಅದರಲ್ಲಿ ವೈದ್ಯರು, ಇಂಜಿನಿಯರ್, ಎಲೆಕ್ಟ್ರಾನಿಕ್ಸ್ ಪ್ರೋಗ್ರಾಮಿಂಗ್, ಎಲೆಕ್ಟ್ರಿಕ್ ಹಾಗೂ ಜೈವಿಕ ತಂತ್ರಜ್ಞಾನ ಪಡೆದವರು ಒಳಗೊಂಡಿರುತ್ತಾರೆ. ಕೃತಕ ಬುದ್ದಿವಂತಿಕೆ ಹಾಗೂ ಸಾಂಕ್ರಾಮಿಕ ರೋಗದ ಬಗ್ಗೆ ವಿಶೇಷ ಪದವಿ ಪಡೆದವರಿಗೂ ಗೋಲ್ಡನ್ ವಿಸಾ ಪಡೆಯಬಹುದಾಗಿದೆ.
ದೇಶದ ಅಭಿವೃದ್ಧಿ ಹಾಗೂ ಸಾಧನೆಗಳಿಗಾಗಿ ಇಂತಹ ಪ್ರತಿಭೆಗಳು ನಮ್ಮೊಂದಿಗೆ ಹಲವಾರು ವರ್ಷಗಳು ಮುಂದುವರಿಯಬೇಕು ಎಂದು ನಾವು ಬಯಸುತ್ತೇವೆ ಎಂದೂ ದುಬೈ ದೊರೆ ಟ್ವಿಟರ್ ಮೂಲಕ ತಿಳಿಸಿದರು.