janadhvani

Kannada Online News Paper

ರೈತ ಮತ್ತು ಕಾರ್ಮಿಕ ವಿರೋಧಿ ಮಸೂದೆ ವಿರುದ್ಧ ಎಸ್‌ಡಿಪಿಐ ವ್ಯಾಪಕ ಪ್ರತಿಭಟನೆ

ಎಸ್‌ಡಿಪಿಐ ಸುಳ್ಯ ನಗರ ಸಮಿತಿ ವತಿಯಿಂದ ಪ್ರತಿಭಟನೆಸುಳ್ಯ: ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ಮಸೂದೆ ತಿದ್ದುಪಡಿಯನ್ನು ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ನಗರ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಾದ್ಯಕ್ಷ ಅಬ್ದುಲ್ ಕಲಾಂ ರವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಸಭೆ ನಡೆಸಲಾಯಿತು.

ಪಿಎಫ್ಐ ರಾಜ್ಯ ನಾಯಕರಾದ ಶಾಫಿ ಬೆಳ್ಳಾರೆ ಮುಖ್ಯ ಬಾಷಣಗಾರರಾಗಿ ಮಾತನಾಡಿ ಕೇಂದ್ರ ಸರ್ಕಾರವು ಬಂಡವಾಳ ಶಾಹಿಗಳನ್ನು ಬೆಳೆಸುವ ಉದ್ದೇಶದಿಂದ ನಮ್ಮ ದೇಶದ ಬೆನ್ನೆಲುಬಾಗುರುವ ರೈತರ ಕೃಷಿ ಮಸೂದೆಗಳನ್ನು ತಿದ್ದುಪಡಿ ಮಾಡುವ ಮೂಲಕ ದೇಶವನ್ನೇ ಅಧಃ ಪತನದತ್ತ ಕೊಂಡೊಯ್ಯುತ್ತಿದ್ದಾರೆ.ಬಂಡವಾಳ ಶಾಹಿ ಮತ್ತು ಸರ್ಕಾರದ ನಡುವೆ ಅಪವಿತ್ರ ಮೈತ್ರಿ ಮಾಡಿಕೊಂಡು ದೇಶದ ಜನತೆಯನ್ನು ಬಂಡವಾಳ ಶಾಹಿಯವರ ಗುಲಾಮರನ್ನಾಗಿ ಮಾಡಿಸುತ್ತದೆ.ರೈತರು ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರ್ಕಾರಗಳು ರೈತರ ಅಭಿವೃದ್ಧಿ ಕಡೆಗೆ ಯೋಚಿಸದೆ ಅವರನ್ನು ಇನ್ನಷ್ಟು ಅಧಿಕ ಸಂಕಷ್ಟಗಳ ತಳ್ಳಲು ಮುಂದಾಗುರುವುದು ದೇಶದ ದುರಂತವೇ ಸರಿ ಎಂದು ಹೇಳಿದರು.ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ಸುಳ್ಯ ನಗರ ಸಮಿತಿ ಅಧ್ಯಕ್ಷ ಇಕ್ಬಾಲ್ ಸುಳ್ಯ, ಜಾಲ್ಸೂರು ವಲಯಾದ್ಯಕ್ಷ ಆಬಿದ್ ಪೈಚಾರ್,ಎಸ್.ಡಿ.ಎ.ಯು ಅದ್ಯಕ್ಷ ಶಾಫಿ.ಎಂ.\nಆರ್.ಪಿಎಫ್ಐ ಸುಳ್ಯ ಡಿವಿಷನ್ ಅಧ್ಯಕ್ಷ ಫೈಝಲ್ ಬೆಳ್ಳಾರೆ, ಸಿ.ಫ್.ಐ ಸುಳ್ಯ ವಲಯಾದ್ಯಕ್ಷ ಅರ್ಫಿದ್ ಅಡ್ಕಾರ್ ಮತ್ತಿತ್ತರು ಉಪಸ್ಥಿತರಿದ್ದರು.ಎಸ್‌ಡಿಪಿಐ ಸುಳ್ಯ ವಿಧಾನಸಭಾ ಪ್ರ.ಕಾರ್ಯದರ್ಶಿ ಮುಸ್ತಫಾ ಎಂ.ಕೆ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.ಪ್ರತಿಭಟನಾ ಸಭೆಯ ನಂತರ ತಹಶಿಲ್ದಾರರ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.


ಬೆಳ್ಳಾರೆಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಯ ವಿರುದ್ಧ ಬೆಳ್ಳಾರೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ವಲಯ ಅಧ್ಯಕ್ಷರಾದ ಸಿದ್ದೀಕ್ ಬೆಳ್ಳಾರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ರವರು ಮಾತನಾಡಿ ಹೊಸ ಕಾಯ್ದೆ ಯಿಂದ ರೈತರಿಗೆ ಏನು ಪ್ರಯೋಜನ ವಿಲ್ಲ ಇದು ಬಂಡವಾಳ ಶಾಹಿಗಳಿಗಳಿಗೆ ಲಾಭ ಮಾಡಿ ಕೊಡುವ ಹುನ್ನಾರ ಮಾತ್ರವಾಗಿದೆ. ಎಪಿಎಂಸಿಯನ್ನು ಖಾಸಗೀಕರಣ ಮಾಡುವ ದುರುದ್ದೇಶವಾಗಿದೆ ಎಂದು ಹೇಳಿದರು .
ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕೋಶಾಧಿಕಾರಿ ಹಾಜಿ.ಕೆ ಮಮ್ಮಾಲಿ , ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಬಸೀರ್ ಬಿ.ಎ , ಪಾಪ್ಯುಲರ್ ಫ್ರಂಟ್ ಬೆಳ್ಳಾರೆ ವಲಯ ಅಧ್ಯಕ್ಷರಾದ ಶಹೀದ್ ಎಂ, ಎಸ್‌ಡಿಪಿಐ ಬೆಳ್ಳಾರೆ ವಲಯ ಉಪಾಧ್ಯಕ್ಷಾರದ ಆಸೀರ್ ಎ.ಬಿ, ಎಸ್‌ಡಿಪಿಐ ಬೆಳ್ಳಾರೆ ವಲಯ ಸಮಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ತಂಬಿನಮಕ್ಕಿ , ಜೈನುದ್ದೀನ್ ಯು.ಎಚ್, ಎಣ್ಮೂರು ಗ್ರಾಮ ಸಮಿತಿ ಅಧ್ಯಕ್ಷರಾದ ಹಮೀದ್ ಮರಕ್ಕಡ ಮತ್ತಿತರರು ಉಪಸ್ಥಿತರಿದ್ದರು.
ವಲಯ ಅಧ್ಯಕ್ಷರಾದ ಸಿದ್ದೀಕ್ ಬೆಳ್ಳಾರೆ ಸ್ವಾಗತಿಸಿ,ಫೈಝಲ್ ಜಿ ರವರು ವಂದಿಸಿದರು.ಉಪಾಧ್ಯಕ್ಷಾರದ ಆಸೀರ್ ಎ.ಬಿ, ಎಸ್‌ಡಿಪಿಐ ಬೆಳ್ಳಾರೆ ವಲಯ ಸಮಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ತಂಬಿನಮಕ್ಕಿ , ಜೈನುದ್ದೀನ್ ಯು.ಎಚ್, ಎಣ್ಮೂರು ಗ್ರಾಮ ಸಮಿತಿ ಅಧ್ಯಕ್ಷರಾದ ಹಮೀದ್ ಮರಕ್ಕಡ ಮತ್ತಿತರರು ಉಪಸ್ಥಿತರಿದ್ದರು.
ವಲಯ ಅಧ್ಯಕ್ಷರಾದ ಸಿದ್ದೀಕ್ ಬೆಳ್ಳಾರೆ ಸ್ವಾಗತಿಸಿ,ಫೈಝಲ್ ಜಿ ರವರು ವಂದಿಸಿದರು.


ಕಬಕ:ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ಮಸೂದೆ ತಿದ್ದುಪಡಿಯನ್ನು ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಬಕ ವಲಯ ಸಮಿತಿ ವತಿಯಿಂದ ಕಬಕ ಜಂಕ್ಷನ್ನಲ್ಲಿ ಕಬಕ ವಲಯ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಕೊಡಿಪ್ಪಾಡಿರವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಸಭೆ ನಡೆಸಲಾಯಿತು.

ಕಬಕ ವಲಯ ಸಮಿತಿ ಸದಸ್ಸ್ಯರಾದ ಉಸ್ಮಾನ್ ಪೇರಮೊಗೆರು ಮುಖ್ಯ ಬಾಷಣಗಾರರಾಗಿ ಮಾತನಾಡಿ ಕೇಂದ್ರ ಸರ್ಕಾರವು ಬಂಡವಾಳ ಶಾಹಿಗಳನ್ನು ಬೆಳೆಸುವ ಉದ್ದೇಶದಿಂದ ನಮ್ಮ ದೇಶದ ಬೆನ್ನೆಲುಬಾಗಿರುವ ರೈತರ ಕೃಷಿ ಮಸೂದೆಗಳನ್ನು ತಿದ್ದುಪಡಿ ಮಾಡುವ ಮೂಲಕ ದೇಶವನ್ನೇ ಅಧಃ ಪತನದತ್ತ ಕೊಂಡೊಯ್ಯುತ್ತಿದ್ದಾರೆ. ರೈತರು ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರ್ಕಾರಗಳು ರೈತರ ಅಭಿವೃದ್ಧಿ ಕಡೆಗೆ ಯೋಚಿಸದೆ ಅವರನ್ನು ಇನ್ನಷ್ಟು ಅಧಿಕ ಸಂಕಷ್ಟಗಳಿಗೆ ತಳ್ಳಲು ಮುಂದಾಗುತಿರೋದು ದೇಶದ ದುರಂತವೇ ಸರಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಎಸ್ಡಿಪಿಐ ವಿದ್ಯಾಪುರ ಬ್ರಾಂಚ್ ಸದಸ್ಯರಾದ ಫಾರೂಕ್ ತವಕ್ಕಲ್ ಸಂಧರ್ಬೋಚಿತವಾಗಿ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಪುತ್ತೂರು ವಿಧಾನ ಸಭಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಾವು ಪಡೀಲ್, ಕಬಕ ಪಿಎಫ್ಐ ಡಿವಿಷನ್ ಅಧ್ಯಕ್ಷರಾದ ಅಝೀಝ್ ಕಬಕ,ಎಸ್‌ಡಿಪಿಐ ಕಬಕ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಪೋಳ್ಯ, ಕೊಡಿಪ್ಪಾಡಿ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಕೊಡಿಪ್ಪಾಡಿ, ವಿದ್ಯಪುರ ಬ್ರಾಂಚ್ ಅಧ್ಯಕ್ಷರಾದ ನಝಿರ್ ಕಬಕ, ಕೊಡಿಪ್ಪಾಡಿ ಕಾರ್ಯದರ್ಶಿ ಅನ್ಸಾರ್ ಕೊಡಿಪ್ಪಾಡಿ, ಮಿತ್ತೂರ್ ಬ್ರಾಂಚ್ ಅಧ್ಯಕ್ಷರಾದ ಬಾವಕ ಮತ್ತಿತ್ತರು ಉಪಸ್ಥಿತರಿದ್ದರು.
ಇಕ್ಬಾಲ್ ನಗರ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.


ಆರ್ಯಾಪು, ಪುತ್ತೂರುಪುತ್ತೂರು, ಸೆ.25: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರ್ಯಾಪು ವಲಯ ಸಮಿತಿ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕೃಷಿ ಮಸೂದೆಯ ವಿರುದ್ಧ ಆರ್ಯಾಪು ಗ್ರಾಮ ಪಂಚಾಯತ್ ಸಮೀಪ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಪುತ್ತೂರು ವಿಧಾನಸಭಾ ಕ್ಷೇತ್ರಾದ್ಯಕ್ಷ ಸಿದ್ದೀಕ್ ಕೆ.ಎ ಮಾತನಾಡಿ ಮೋದಿ ಆಡಳಿತದ ಸರ್ಕಾರ ಈಗ ನಿರಂತರವಾಗಿ ಜನವಿರೋಧಿ ನೀತಿಗಳನ್ನೇ ಜಾರಿಗೊಳಿಸುತ್ತಿದೆ.ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪರವರು ಹಸಿರು ಶಾಲು ಹೆಗಲಿಗೆ ಹಾಕಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ತಮ್ಮ ಜೀವನ ಉತ್ತಮಗೊಳ್ಳಬಹುದು ಎಂದು ಕನಸು ಕಂಡ ರೈತರಿಗೆ , ರೈತ ವಿರೋಧಿ ಮಸೂದೆ ಜಾರಿಗೆ ತಂದ ಕಾರಣ ಆತ್ಮಹತ್ಯೆ ಮಾಡುವ ಪರಿಸ್ಥಿತಿ ಎದುರಾಗಿದೆ.ರೈತ ವಿರೋಧಿ ಮಸೂದೆಯ ವಿರುದ್ದ ನಡೆಯುವ ಪ್ರತಿಭಟನೆಗೆ ಎಸ್.ಡಿ.ಪಿ.ಐ ಯಾವಾಗಲೂ ಬೆಂಬಲ ನೀಡಲಿದೆ..ಹೀಗೆ ಮುಂದುವರಿದರೆ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ ಎಂದು ಹೇಳಿದರು .ನಂತರ ಮಾತನಾಡಿದ ಎಸ್.ಡಿ.ಟಿ.ಯು ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಬಳಕ್ಕ ರವರು ಇಲ್ಲಿನ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿ ಅಂಬಾನಿ ಅದಾನಿಯಂತಹ ಕಾರ್ಪೊರೇಟರ್‌ಗಳನ್ನು ಮೆಚ್ಚಿಸಲು ಬೇಕಾಗಿ ಜನವಿರೋಧಿ ಕಾಯ್ದೆಗಳನ್ನೇ ಜಾರಿಗೆ ತರುತ್ತಾ ಇದೆ.ಈ ದೇಶದ ಬೆನ್ನೆಲುಬಾಗಿದ್ದ ರೈತರ ಬೆನ್ನೆಗೆ ಚೂರಿ ಹಾಕಲಾಗುತ್ತಿದೆ.ರೈತರನ್ನು ಕೆಳಮಟ್ಟಕ್ಕೆ ತಳ್ಳಿ ನೀವು ಇಲ್ಲಿ ಆಡಳಿತ ನಡೆಸುಬಹುದು ಎಂದು ವ್ಯಾಮೋಹಿಸಿದರೆ ಅದು ದುರಂತ ಹಾಗೂ ನೀವು ಅಧಿಕಾರದಿಂದ ಕೆಳಗಿಳಿಯುವವರೆಗೂ , ರೈತ ವಿರೋಧಿ ಮಸೂದೆ ಹಿಂಪಡೆಯುವವರೆಗೂ, ರೈತರ ಪ್ರತಿಭಟನೆ ನಿಲ್ಲುವವರೆಗೂ ಎಸ್.ಡಿ.ಪಿ.ಐ ಪ್ರತಿಭಟನೆ ಮಾಡಲಿದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ SDPI ಆರ್ಯಾಪು ವಲಯ ಸಮಿತಿ ಅಧ್ಯಕ್ಷ ಬಶೀರ್ ವಾಗ್ಲೆ , SDPI ಪುತ್ತೂರು ವಿಧಾನಸಭಾ ಸಮಿತಿ ಕಾರ್ಯದರ್ಶಿ ಅಶ್ರಫ್ ಬಾವು , SDPI ಪುತ್ತೂರು ವಿಧಾನಸಭಾ ಸಮಿತಿ ಸದಸ್ಯರಾದ ನಾಗೇಶ್ ಕುರಿಯ , ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶಂಸುದ್ದೀನ್ ಕಲ್ಲರ್ಪೆ , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪ್ಯ ವಲಯ ಅಧ್ಯಕ್ಷ ಅಶ್ರಫ್ ಸಂಟ್ಯಾರ್ , ಹಾಗೂ SDPI ಆರ್ಯಾಪು ವಲಯ ಸಮಿತಿಯ ಎಲ್ಲಾ ಬ್ರಾಂಚ್ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.SDPI ಆರ್ಯಾಪು ವಲಯ ಸಮಿತಿ ಕಾರ್ಯದರ್ಶಿ ಝಕರಿಯಾ ಸಂಟ್ಯಾರ್ ಕಾರ್ಯಕ್ರಮವನ್ನು ನಿರೂಪಿಸಿ , ಸ್ವಾಗತಿಸಿ ವಂದಿಸಿದರು.ಪ್ರತಿಭಟನೆಯ ನಂತರ ರೈತ ವಿರೋಧಿ ಮಸೂದೆಯ ವಿರುದ್ಧ ಗ್ರಾಮ ಪಂಚಾಯತ್ ಪಿ.ಡಿ.ಒ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು


ಸವಣೂರುಸವಣೂರು, ಸೆ.25:ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ವಲಯ ಸಮಿತಿ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕೃಷಿ ಮಸೂದೆಯ ವಿರುದ್ಧ ಸವಣೂರು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಫೀಕ್ ಎಂ ಎ ರವರು ಮಾತನಾಡಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆಗೆ ಸಮ್ಮತಿ ಸೂಚಿಸಿ ರೈತಾಪಿ ವರ್ಗಗಳಿಗೆ ದ್ರೋಹ ಎಸಗಿದೆ ಎಂದು ಕಿಡಿಕಾರಿದರು
ಕಾರ್ಯಕ್ರಮದ ನೇತ್ರತ್ವವನ್ನು SDPI ಸವಣೂರು ವಲಯ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿಯವರು ವಹಿಸಿದ್ದರು.

ಪ್ರತಿಭಟನಾ ಸಭೆಯಲ್ಲಿ PFI ಏರಿಯಾ ಅಧ್ಯಕ್ಷರಾದ ಇರ್ಷಾದ್ ಸರ್ವೆ, ಕಾರ್ಯದರ್ಶಿ ರಫೀಕ್ ಪಿ, ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಝಾಕ್ ಕೆನರಾ, ಹಂಝ ಅಕ್ಕರೆ, ಮಹಮ್ಮದ್ ಎಂ ಕೆ, ಅಝೀಝ್ ಎಸ್ ಎಂ ಯುವ ಉದ್ಯಮಿ ಮಸ್ಕತ್ ಸಹಿತ 50ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.
SDPI ಸವಣೂರು ವಲಯ ಕಾರ್ಯದರ್ಶಿ ರಫೀಕ್ ಎಂ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು


ಕಲ್ಲಡ್ಕ

ಬಂಟ್ವಾಳ: ಸೆಪ್ಟಂಬರ್ 25, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗೋಳ್ತಮಜಲ್ ಗ್ರಾಮ ಸಮಿತಿ ವತಿಯಿಂದ ಬಿಜೆಪಿ ನೇತ್ರತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿದ ರೈತ ವಿರೋಧಿ ಸುಗ್ರಿವಾಜ್ಞೆಗಳ ವಿರುದ್ಧ ಗೋಳ್ತಮಜಲು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಎಸ್.ಡಿ.ಪಿ.ಐ ಗೋಳ್ತಮಜಲು ಗ್ರಾಮ ಸಮಿತಿ ಅಧ್ಯಕ್ಷರಾದ ಜವಾಜ್ ಜೆ ಕೆ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ಅತಿಥಿಗಳಾದ ಗ್ರಾಮ ಸಮಿತಿ ಕಾರ್ಯದರ್ಶಿ ಹಮೀದ್ ಅಲಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಹೈದರ್ ಮಾತಾನಾಡಿದರು.ಪಿ.ಎಫ್.ಐ ವಿಟ್ಲ ವಲಯ ಅಧ್ಯಕ್ಷರಾದ ಝಕಾರಿಯಾ ಗೋಳ್ತಮಜಲ್ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಸತ್ತಾರ್ ಕಲ್ಲಡ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ಧರು. ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸರಕಾರದ ರೈತ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

error: Content is protected !! Not allowed copy content from janadhvani.com