janadhvani

Kannada Online News Paper

ಬೇಕಲ್ ಇಬ್ರಾಹೀಮ್ ಮುಸ್ಲಿಯಾರ್ ವಿಯೋಗ ದೊಡ್ಡ ನಷ್ಟ: ಸುಲ್ತಾನುಲ್ ಉಲಮಾ

ಕಲ್ಲಿಕೋಟೆ (ಜನಧ್ವನಿ ವಾರ್ತೆ): ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಕಾಸರಗೋಡು ಜಾಮಿಅಃ ಸ‌ಅದಿಯ್ಯಾ ಶರೀಅತ್ ಕಾಲೇಜು ಪ್ರಾಂಶುಪಾಲರೂ ಆಗಿದ್ದ ಬೇಕಲ್ ಇಬ್ರಾಹೀಮ್ ಮುಸ್ಲಿಯಾರ್ ರವರ ವಿಯೋಗ ಅಕ್ಷರಶಃ ದೊಡ್ಡ ನಷ್ಟ ಎಂದು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್.

1971ರಲ್ಲಿ ಧಾರ್ಮಿಕ ವಿದ್ಯಾಭ್ಯಾಸದಲ್ಲಿ ಪದವಿ ಪೂರ್ತಿಗೊಳಿಸಿ ದರ್ಸ್ ಸೇವಾ ರಂಗದಲ್ಲಿ ಐವತ್ತು ವರ್ಷಗಳನ್ನು ಪೂರೈಸಿದ್ದರು. ತಾಜುಲ್ ಉಲಮಾ ಉಳ್ಳಾಲ ತಂಙಳ್‌ರ ಪ್ರೀತಿಯ ಶಿಷ್ಯಂದಿರಲ್ಲೊಬ್ಬರಾಗಿದ್ದರು.

ಪಿಖ್ಹ್ (ಕರ್ಮಶಾಸ್ತ್ರ) ಮತ್ತು ಖಗೋಳ ವಿಜ್ಞಾನದಲ್ಲಿ ಆಗಾಧ ಪಾಂಡಿತ್ಯ ಹೊಂದಿದ್ದರು. ಬಹುದೊಡ್ಡ ಧಾರ್ಮಿಕ ವಿದ್ವಾಂಸರೂ, ಮುದರ್ರಿಸರೂ, ಕರ್ನಾಟಕದ ಹಲವು ಜಿಲ್ಲೆಗಳ ಸಂಯುಕ್ತ ಖಾಝಿಯೂ ಆಗಿದ್ದರು.

ತಾಜುಲ್ ಉಲಮಾರ ಬಳಿಕ ಕರ್ನಾಟಕದ ಸುನ್ನೀ ಕಾರ್ಯಕರ್ತರಿಗೆ ಆವೇಶ ನಾಯಕರಾಗಿದ್ದ ಬೇಕಲ ಉಸ್ತಾದರು ಕನ್ನಡದಲ್ಲೂ, ಮಲಯಾಳದಲ್ಲೂ ನಿರರ್ಗಳ ಭಾಷಣ ಮಾಡಬಲ್ಲವರಾಗಿದ್ದರು ಎಂದು ಎಪಿ ಉಸ್ತಾದ್ ಪೇಸ್ಬುಕ್ ಪೋಸ್ಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ

error: Content is protected !! Not allowed copy content from janadhvani.com