ಹರೇಕಳ, ಆ.22: ಸಿರಾಜುಲ್ ಹುದಾ ದರ್ಸ್ ಮುರ್ಶಿದುಲ್ ಅನಾಮ್ ಸಾಹಿತ್ಯ ವೇದಿಕೆ ಆಲಡ್ಕ ಹರೇಕಳ. ಇದರ ವಾರ್ಷಿಕ ಸಭೆಯು ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎಂ.ಅಬ್ದುಲ್ ಸಲಾಂ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷರಾದ ಕೆ ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ ಉಸ್ತಾದ್ ದುಆದೊಂದಿಗೆ ಉದ್ಘಾಟನೆಗೈದರು.
ನೂತನ ಕಮಿಟಿಗೆ ಗೌರವಾಧ್ಯಕ್ಷರಾಗಿ ಕೆ ಎಮ್ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಅಧ್ಯಕ್ಷರಾಗಿ ಮುಹಮ್ಮದ್ ಶಾಕಿರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸುಹೈಲ್, ಕೋಶಾಧಿಕಾರಿ ಎಂ.ಅಬ್ದುಲ್ ಸಲಾಂ, ಉಪಾಧ್ಯಕ್ಷ ಮುಹಮ್ಮದ್ ಸಾಬಿತ್, ಕಾರ್ಯದರ್ಶಿ ಮುಹಮ್ಮದ್ ಅಫ್ನಾನ್.
ಸದಸ್ಯರುಗಳಾಗಿ ಮುಹಮ್ಮದ್ ಅನ್ಸಾರ್, ಮುಹಮ್ಮದ್ ಶಾಹಿದ್, ಮುಹಮ್ಮದ್ ಇರ್ಷಾದ್, ಮುಹಮ್ಮದ್ ಸಿಮಾಕ್, ಮುಹಮ್ಮದ್ ಸವಾದ್.ಯು, ಮುಹಮ್ಮದ್ ಸವಾದ್ ಆಯ್ಕೆಯಾದರು.
ನಿಕಟ ಪೂರ್ವ ಕಾರ್ಯದರ್ಶಿ ಶಾಕಿರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸುಹೈಲ್ ವಂದಿಸಿದರು.