janadhvani

Kannada Online News Paper

ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ವತಿಯಿಂದ “HOW TO FACE EXAM ” ಶಿಬಿರ

SSF BELLAEE SECTER ವತಿಯಿಂದ 23/02/2020 ಆದಿತ್ಯವಾರ ಬೆಳಿಗ್ಗೆ ಜ್ಞಾನ ದೀಪ ಸಂಸ್ಥೆಯಲ್ಲಿ HOW TO FACE EXAM ಶಿಬಿರವು ಸೆಕ್ಟರ್ ಅಧ್ಯಕ್ಷರಾದ ಮುನೀರ್ ಹನೀಫಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಜ್ಞಾನದೀಪ ವಿದ್ಯಾಸಂಸ್ಥೆಯ ನಿರ್ದೇಶಕರಾದ ಉಮೇಶ್ ಸರ್ ಮಣಿಕ್ಕಾರ ಉದ್ಗಾಟನೆ ಮಾಡಿದರು. ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯುವ ಹಲವಾರು ಟಿಪ್ಸ್ ಗಳನ್ನು ನೀಡುತ್ತಾ ಸ್ಪೂರ್ತಿದಾಯಕವಾದ ತರಬೇತಿಯನ್ನು ನಡೆಸಿದರು.ಬೆಳ್ಳಾರೆ ಪರಿಸರದ ಸುಮಾರು ಐವತ್ತರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡರು. ಜ್ಞಾನ ದೀಪ ವಿದ್ಯಾ ಸಂಸ್ಥೆಯ ಅಧ್ಯಾಪಕರಾದ ಗಣೇಶ್ ಸರ್ ಸಂಟ್ಯಾರ್ ಸಾಂದರ್ಭಿಕ ಮಾತುಗಳನ್ನಾಡಿ ಶುಭ ಹಾರೈಸಿದರು. , ಎಸ್,ಎಸ್ ಎಫ್ ಬೆಳ್ಳಾರೆ ಸೆಕ್ಟರ್ ಮಾಜಿ ಅಧ್ಯಕ್ಷರಾದ ಕಲಾಂ ಝುಹ್ರಿ ಬೆಳ್ಳಾರೆ, ಕಾರ್ಯದರ್ಶಿ ಇಕ್ಬಾಲ್ ಪಳ್ಳಿಮಜಲ್ ಮುಂತಾದ ನಾಯಕರು ಭಾಗವಹಿದರು.

ಪ್ರಸ್ಥುತ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ನೀಡಿ ಸಂಪೂರ್ಣವಾಗಿ ಸಹಕಾರ ಕೊಟ್ಟ ಜ್ಞಾನದೀಪ ಸಂಸ್ಥೆಯ ನಿರ್ದೇಶಕರಾದ ಉಮೇಶ್ ಸರ್ ಮಣಿಕ್ಕಾರ್ ಅವರಿಗೂ,ಅತ್ಯುತ್ತಮ ತರಭೇತಿ ನೀಡಿದ ಸ್ವಾದಿಕ್ ಮಾಸ್ಟರ್ ಅವರಿಗೆ ಸೆಕ್ಟರ್ ವತಿಯಿಂದ ಪ್ರತ್ಯೇಕ ಅಭಿನಂದನೆಗಳನ್ನು ಸಲ್ಲಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಪ್ರ. ಕಾರ್ಯದರ್ಶಿ ರಫೀಖ್ ಅಮ್ಜದಿ ಇಂದ್ರಾಜೆ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ನಡೆಸಿ ಕೊನೆಯಲ್ಲಿ ವಂಧಿಸಿದರು.

error: Content is protected !! Not allowed copy content from janadhvani.com