ರಿಯಾದ್: ಸೌದಿಯಲ್ಲಿ ಲೆವಿಯಲ್ಲಿನ ವಿನಾಯಿತಿಗಾಗಿ ಉದ್ಯಮ ಸಂಸ್ಥೆಳಿಗೆ ಪ್ರಾಯೋಜಕತ್ವವನ್ನು ಬದಲಾಯಿಸುವವರಿಗೆ ಎಚ್ಚರಿಕೆ ನೀಡಲಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಂದರ್ ಅಲ್ ಖುರೈಫ್ ಎಚ್ಚರಿಸಿದ್ದಾರೆ. ಉದ್ಯಮ ಸಂಸ್ಥೆಗಳಿಗೆ ನೀಡಲಾಗುವ ಪ್ರಯೋಜನವನ್ನು ದುರುಪಯೋಗಪಡಿಸಿಕೊಳ್ಳದಂತೆ ಪ್ರಾಯೋಜಕತ್ವದ ಬದಲಾವಣೆಯನ್ನು ಬಿಗಿಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಉದ್ಯಮ ಸಂಸ್ಥೆಗಳಲ್ಲಿ ವಿದೇಶಿ ಕಾರ್ಮಿಕರ ಮೇಲಿನ ಐದು ವರ್ಷಗಳ ತೆರಿಗೆಯನ್ನು ಸರ್ಕಾರ ವಹಿಸಿದ ನಂತರ ಈ ರೀತಿಯ ಪ್ರಾಯೋಜಕತ್ವದ ಬದಲಾವಣೆಯನ್ನು ಗಮನಿಸಲಾಗಿದೆ ಎಂದು ಸಚಿವರು ಎಚ್ಚರಿಸಿದ್ದಾರೆ.
ಉದ್ಯಮದ ಹೂಡಿಕೆದಾರರ ಪ್ರಶ್ನೆಗಳಿಗೆ ಸಚಿವರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸುತ್ತಿದ್ದ ವೇಳೆ ಈ ಪ್ರತಿಕ್ರಿಯೆ ನೀಡಿದ್ದಾರೆ. 2019 ರ ಸೆಪ್ಟೆಂಬರ್ 24 ರ ಮಂಗಳವಾರ ಸಭೆ ಸೇರಿದ ಸಂಪುಟವು, ವಿದೇಶಿ ಕಾರ್ಮಿಕರ ಲೆವಿಯನ್ನು ಐದು ವರ್ಷಗಳ ಕಾಲ ಸರಕಾರ ವಹಿಸುವುದಾಗಿ ಘೋಷಿಸಿದ್ದವು. ಇದು ಅಕ್ಟೋಬರ್ 1ರಿಂದ ಜಾರಿಗೆ ಬಂದಿತು. ಸೌದಿ ವಿಷನ್ 2030 ರ ಅಂಗವಾಗಿ, ಉದ್ಯಮದಲ್ಲಿ ಹೂಡಿಕೆದಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದು ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಸರಕಾರದ ಉದ್ದೇಶವಾಗಿದೆ.