ದುಬೈ: ಯುಎಇಯ ಆರ್ಥಿಕ ಅಭಿವೃದ್ಧಿ ಇಲಾಖೆ ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಮಾಣದ ನಕಲಿ ಉತ್ಪನ್ನಗಳನ್ನು ವಶಪಡಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಪ್ರಮುಖ ಬ್ರ್ಯಾಂಡ್‌ಗಳ ಲೇಬಲ್ ಅಂಟಿಸಿದ 965 ಮಹಿಳೆಯರ ಕೈ ಚೀಲಗಳು ಮತ್ತು ಅವುಗಳ ನಿರ್ಮಾನಕ್ಕಾಗಿ ಬಳಸುವ ಸಾಮಗ್ರಿಗಳಾಗಿವೆ. ಅಧಿಕಾರಿಗಳು ಅಲ್ ತೂಬ್ ಕೈಗಾರಿಕಾ ಪ್ರದೇಶದಲ್ಲಿನ ಗೋದಾಮಿನಿಂದ ಕಾರ್ಯಾಚರಣೆ ಮೂಲಕ ಈ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
ಅಂತರ್‌ರಾಷ್ಟ್ರೀಯ ಖ್ಯಾತಿಯ ಬ್ರಾಂಡ್‌ಗಳ ಸಾಮಾಗ್ರಿಗಳನ್ನು ಇಲ್ಲಿ ತಯಾರಿಸಿ ಮಾರಾಟಕ್ಕೆ ನೀಡಲಾಗುತ್ತದೆ ಎನ್ನಲಾಗಿದ್ದು, ನಕಲಿ ಸರಕುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ವಶಪಡಿಸಿಕೊಂಡ ವಸ್ತುಗಳ ಪೈಕಿ 600 ಮಹಿಳೆಯರ ಕೈಚೀಲಗಳು ಮತ್ತು 55 ವಿಭಿನ್ನ ಗಾತ್ರಗಳ ಚೀಲಗಳನ್ನು ಪ್ರಸಿದ್ಧ ಬ್ರಾಂಡ್‌ನಿಂದ ತಯಾರಿಸಲ್ಪಟ್ಟಿದ್ದವು ಎಂದು ತಿಳಿದು ಬಂದಿದೆ.
ವಾಹನಗಳ ಬಿಡಿಭಾಗಗಳು ಕೂಡ ಪತ್ತೆಯಾಗಿದ್ದು, ಇಲ್ಲಿ ವಿವಿಧ ಬ್ರಾಂಡ್‌ಗಳ 10 ಕಾರ್ಟೂನ್ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಟೊಯೋಟಾ ಮತ್ತು ಮರ್ಸಿಡಿಸ್ ಬೆಂಝ್ ನ ಲೋಗೊಗಳನ್ನು ಅಂಟಿಸಲಾಗಿದ್ದವು. ಗೌಪ್ಯ ಮಾಹಿತಿಯ ಆಧಾರದಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳನ್ನು ಅಧಿಕಾರಿಗಳು ನಾಶಪಡಿಸಿದ್ದು, ವಿವಿಧ ಸ್ಥಳಗಳಲ್ಲಿ ಇದೇ ರೀತಿಯ ತಪಾಸಣೆ ನಡೆಸುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ