janadhvani

Kannada Online News Paper

ಮರೆಯಲಾಗದ ಮುತ್ತು ಮರ್ಹೂಂ ನಾಸಿರ್ ಮುಂಡೂರ್

ಅದು ಅಲ್-ಮದೀನತ್ತುಲ್ ಮುನವ್ವರ ವಿದ್ಯಾ ಸಂಸ್ಥೆ ಮೂಡಡ್ಕದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಂದರ್ಭ ಅಂದರೆ 2013 ನೇ ವಿಸವಿ,
ಅಲ್ಲಿ ನನ್ನ ಅಚ್ಚುಮೆಚ್ಚಿನ ಸ್ನೇಹಿತನಾಗಿದ್ದು ನನ್ನೂಳವಿನ ಮಿತ್ರ,
ಒಬ್ಬ ಪ್ರತಿಬಾವಂತ ವಿದ್ಯಾರ್ಥಿ
ನಾಸಿರ್ ಮುಂಡೂರ್
ಅದೇಕೋ ನನಗೆ ಅವನೆಂದರೆ ಬಹಳ ಅಚ್ಚುಮೆಚ್ಚು, ಕಲಿಕೆಯಲ್ಲಿ ಬಹಳ ಚುರುಕು, ಹೆಚ್ಚು ಅನಾವಶ್ಯಕವಾಗಿ ಯಾರಲ್ಲೂ ಮಾತಡಲ್ಲ, ಜಗಳ ಎಂಬುವುದು ಅವನಿಂದ ನಾನು ನೋಡಿಯೇ ಇಲ್ಲ,

ಶಿಕ್ಷಕರಿಗೆಲ್ಲಾ ಅವನೆಂದರೆ ಬಹಳ ಇಷ್ಟ, ಏಕೆಂದರೆ ಯಾವುದೇ ತಂಟೆ ಮಾಡದೇ, ಬಹಳ ಸಂಯಮದಿಂದ ವರ್ತಿಸುತ್ತಿದ್ದ ಒಬ್ಬ ಆದರ್ಶ ವಿದ್ಯಾರ್ಥಿಯಾಗಿದ್ದ ಆತ, ಸಂಸ್ಥೆಯ ಆದರ್ಶ ವಿದ್ಯಾರ್ಥಿ ಪ್ರಶಸ್ತಿಗೂ ಬಾಜನರಾಗಿದ್ದ
ಇಂತಹ ವಿದ್ಯಾರ್ಥಿ ಯಾರಿಗೆ ತಾನೇ? ಇಷ್ಟವಾಗಲ್ಲ,
ನಾನು ಅಂದರೆ ಬಹಳಷ್ಟು ಹಚ್ಚಿ ಕೊಂಡಿದ್ದ ಆತ, ಕ್ಯಾಂಟೀನ್ ನಲ್ಲಿ ಊಟ ಮಾಡುವುದಾದರೂ, ಯಾವುದಾದರೂ ಪ್ರೋಗ್ರಾಮ್ ಗೆ ಹೋದರೆ ಕುಳಿತುಕೊಳ್ಳುವುದು ನನ್ನ ಜೊತೆಗೆ ಆಗಿತ್ತು,
ಆದರೆ ನಾಸಿರ್ ಎಂಬ ಆ ಹೆಸರು ಇನ್ನು ನೆನಪುಗಳಷ್ಟೇ.

SBS ಸಾಹಿತ್ಯ ಸಮಾಜದಲ್ಲಿ ಬಾಷಣಕ್ಕೆ ನಿಂತರೆ ಕೇಳುಗಾರರು ಒಮ್ಮೆ ಬೆರೆಗಾಗುವರು, ಅಂತಹ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಅರ್ಥ ಗರ್ಭಿತ ಬಾಷಣ,ಬಾಷಣದಲ್ಲಿ ಉತ್ತಮ ಯುವ ಬಾಷಣಗಾರನಾಗಬೇಕೆಂಬ ಅವನ ಕನಸು, ಚಿತ್ರ ಕಲೆ ಯಲ್ಲಿ ಅವನದೇ ಒಂದು ದಾಖಲೆ, ಅಷ್ಟು ಅಂದಾದ ಬರಹಗಳು,
ಮಾತ್ರವಲ್ಲ ವಯಸ್ಸು ಚಿಕ್ಕದಾದರೂ ಅವನು ಯಾವುದೇ ನಮಾಜನ್ನು ಉಪೇಕ್ಷಿಸಿದ್ದು ನಾನು ಕಂಡಿಲ್ಲ.

ಅಂತಹ ಉತ್ತಮ ಮನಸ್ಸಿನ ಸುನ್ನತ್ ಜಮಾಅತನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದ ನಮ್ಮ ಪ್ರೀತಿಯ ನಾಸಿರ್ ಮುಂಡೂರ್ ಕಳೆದ 6 ವರ್ಷಗಳಿಂದ ಚಿರ ನಿದ್ರೆಗೆ ಜಾರಿದ್ದಾನೆ,
ತನ್ನ ಕುಟುಂಬ ಸಹಿತ ಒಂದು ಸ್ವಲಾತ್ ಮಜ್ಲೀಸ್ ಗೆ ಹೋಗಿ ಹಿಂದಿರುಗಿ ಬರುವಾಗ ವೇಗದಿಂದ ಬಂದ ಮಿನಿ ಬಸ್ಸ್ ನಾಸಿರ್ ಇದ್ದ ರಿಕ್ಷಾಗೆ ರಭಸದಿಂದ ಡಿಕ್ಕಿ ಹೊಡೆಯಿತು, ನಾಸಿರ್ ಸಹಿತ ಅವನ ಕುಟುಂಬದ ನಾಲ್ವರು ಡಿಕ್ಕಿಯ ರಭಸಕ್ಕೆ ಮರಣ ಹೊಂದಿದರು, ಇನ್ನಾಲಿಲ್ಲಾಹ್.

ನಾಸಿರ್ ನ ತಾಯಿ ಮರಣ ಹೊಂದಿದ ಒಂದೇ ವರ್ಷದಲ್ಲಿ ಆ ತಾಯಿಯ ಜೊತೆ ಮಗನೂ ಯಾತ್ರೆಯಾಗಿಬಿಟ್ಟ,
ನಾಸಿರ್ ನ ಯಾತ್ರೆ ಅದು ಕೇವಲ ಒಂದು ಯಾತ್ರೆಯಾಗಿರಲಿಲ್ಲ, ಅದೆಷ್ಟೋ ಸಹಪಾಠಿಗಳ, ಗುರು ವೃಂದದ ಕಣ್ಣೀರಿನ ಕುರ್ ಆನ್ ಪಾರಾಯಣಗಳ ಮುಗಿಲು ಮುಟ್ಟಿದ ತಹ್ಲೀಲ್ ಗಳ ನೀನಾದಗಳೊಂದಿಗೆ ಅಂತಿಮ ಯಾತ್ರೆಯಾಗಿತ್ತು.

ನಾಸಿರ್ ಅದೊಮ್ಮೆಯೂ ಮರೆಯಲಾಗದ ಅಮೃತ ಮುತ್ತಾಗಿತ್ತು,
ಅಲ್ಲಾಹು ಮಗ್ಫೀರತ್ ನೀಡಲಿ(ಆಮೀನ್)
ಪ್ರೀತಿಯ ನಾಸಿರ್ ನಮ್ಮನ್ನಗಲಿ ಇಂದಿಗೆ 6 ವರ್ಷಗಳು ಕಳೆಯಿತು, ಆದರೆ ಆತನ ಆ ಆದರ್ಶ ಒಮ್ಮೆಯೂ ಮರೆಯುವಂತಹದು ಅಲ್ಲ,
ಆ ಪುಟ್ಟ ವಿದ್ಯಾರ್ಥಿಯ ಪರಲೋಕ ಮೋಕ್ಷಕ್ಕಾಗಿ ತಾವೆಲ್ಲರೂ ದುವಾ ಮಾಡಿ.

ಕಣ್ಣೀರಿನೊಂದಿಗೆ…
Kp ಬಾತಿಶ್ ತೆಕ್ಕಾರು

error: Content is protected !! Not allowed copy content from janadhvani.com