ಮನಾಮ:”ಹಬೀಬ್ ﷺ ನಮ್ಮ ಜತೆಗಿರಲಿ” ಮೀಲಾದ್ ಕಾನ್ಫರೆನ್ಸ್ 2019 ಇದರ ಸ್ವಾಗತ ಸಮಿತಿಯ ರಚಣಾ ಸಭೆಯು 20-09-2019 ಶುಕ್ರವಾರ ಮಧ್ಯಾಹ್ನ ಕೆ.ಸಿ.ಎಫ್ ಸೆಂಟರ್ ಮನಾಮಾ ದಲ್ಲಿ ನಡೆಯಿತು.
ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ವತಿಯಿಂದ ನಡೆದ ಸಭೆಯಲ್ಲಿ ಕೆ.ಸಿ.ಎಫ್ ಬಹರೈನ್ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್ ರವರು ಅಧ್ಯಕ್ಷತೆ ವಹಿಸಿದರು.ಮೊಹಮ್ಮದ್ ಅಲಿ ವೇಣೂರು ಉಸ್ತಾದರು ದುವಾ ನೆರವೇರಿಸಿ,ಎಜುಕೇಷನ್ ವಿಭಾಗದ ಕಾರ್ಯದರ್ಶಿ ಮನ್ಸೂರ್ ಬೆಳ್ಮ ಸ್ವಾಗತ ಭಾಷಣ ಮಾಡಿದರು.
ಎಜುಕೇಷನ್ ವಿಭಾಗದ ಅಧ್ಯಕ್ಷರಾದ ಕಲಂದರ್ ಉಸ್ತಾದ್ ಕಕ್ಕೆಪದವು ರವರು ಮಿಲಾದ್ ಕಾನ್ಫರೆನ್ಸ್ ಅಜೆಂಡಾಗಳ ಕುರಿತು ಸವಿಸ್ಥಾರವಾಗಿ ವಿವರಿಸಿದರು.
ಐಎನ್ಸಿ ನಿರ್ಣಯದಂತೆ ಮೀಲಾದ್ ಪ್ರಯುಕ್ತ ಹಬೀಬ್ ﷺ ನಮ್ಮ ಜತೆಗಿರಲಿ ಎಂಬ ಘೋಷ ವಾಕ್ಯದೊಂದಿಗೆ ಕೆಸಿಎಫ್ ಸಂಘಟನೆಯ ಕಾರ್ಯವೈಖರಿ ಗಳಿಗೆ ಜನರನ್ನು ಆಕರ್ಷಿಸಲು ಹಾಗೂ ಸುನ್ನಿ ಆಶಯ, ಆದರ್ಶಗಳನ್ನು ಪ್ರಚಾರ ಪಡಿಸಿ ಸದಸ್ಯರ ಬಲವನ್ನು ಇನ್ನಷ್ಟು ವೃದ್ಧಿಸುವ ಉದ್ದೇಶದಿಂದ ಕನ್ನಡಿಗರಾದ ಪ್ರವಾದಿ ಪ್ರೇಮಿಗಳ ಪ್ರತೀ ಮನೆ ,ಪ್ಲಾಟ್ ಗಳಿಗೆ ಭೇಟಿ ಮಾಡಿ “ಮೊಬೈಲ್ ಮೌಲೀದ್” ಪಾರಾಯಣ ಮಾಡುವುದಾಗಿಯೂ ತೀರ್ಮಾನಿಸಲಾಯಿತು.
ಅಂತಾರಾಷ್ಟ್ರೀಯ ಮೀಲಾದ್ ಕಾನ್ಫೆರೆನ್ಸ್ ನ್ನು ನವಂಬರ್ 1 ,2019ರಂದು ಮನಾಮಾ ಪಾಕಿಸ್ತಾನ ಕ್ಲಬ್ ನಲ್ಲಿ ನಡೆಸುವುದು ಮತ್ತು ಪ್ರಸಿದ್ಧ ವಾಗ್ಮಿ,ಬಹುಭಾಷಾ ಪ್ರತಿಭೆ, ಪ್ರಭಾಷಣ ಲೋಕದ ನಕ್ಷತ್ರ ಬಹು | ನೌಫಲ್ ಸಖಾಫಿ ಕಳಸ ಮುಖ್ಯಭಾಷಣಕಾರರಾಗಿ ಆಹ್ವಾನಿಸುವುದಾಗಿ ತೀರ್ಮಾನಿಸಲಾಯಿತು.
ಸ್ವಾಗತ ಸಮಿತಿ:
ಚೈರ್ಮೆನ್ : ಬಶೀರ್ ಕಾರ್ಲೆ
ಕನ್ವೀನರ್: ಸಯ್ಯದ್ ಇರ್ದೆ
#. *ಫೈನಾನ್ಸ್ ಕಂಟ್ರೋಲರ್*
ಉಸ್ತುವಾರಿ: ಕರೀಂ ಉಚ್ಚಿಲ,ಇಕ್ಬಾಲ್ ಮಂಜನಾಡಿ.
#. *ಸ್ಥಳ ಮತ್ತು ಮೈಕ್*
ಉಸ್ತುವಾರಿ : ಜಮಾಲುದ್ದೀನ್ ವಿಟ್ಲ
#. *ಊಟದ ವ್ಯವಸ್ಥೆ:-*
ಉಸ್ತುವಾರಿ : ಕರೀಂ ಉಚ್ಚಿಲ, ಅಶ್ರಫ್ ಕಿನ್ಯ
#. *ವೇದಿಕೆ ಮತ್ತು ಅಲಂಕಾರ*
ಉಸ್ತುವಾರಿ : ಮೂಸಾ ಪೈಂಬಚ್ಚಾಳ್
#. *ವಾಲಂಟರಿ*
ಉಸ್ತುವಾರಿ:ರಿಯಾಝ್ ಸುಳ್ಯ
#. *ಪಾನೀಯ ವ್ಯವಸ್ಥೆ*
ಉಸ್ತುವಾರಿ :ಕಲಂದರ್ ಉಸ್ತಾದ್
#. *ಪ್ರತಿಭೋತ್ಸವ*
ಉಸ್ತುವಾರಿ : ಚೇರ್ಮನ್ :ಹನೀಫ್ ಜಿ.ಕೆ
ಕನ್ವಿನರ್ : ಮದನಿ ಉಸ್ತಾದ್ , ಸಿದ್ದಿಕ್ ಉಸ್ತಾದ್,ಅಹ್ಮದ್ ಮುಸ್ಲಿಯಾರ್,ಹನೀಫ್ ಉಸ್ತಾದ್, ಮೊಹಮ್ಮದ್ ಅಲಿ ವೇಣೂರು ಉಸ್ತಾದ್.
#. *ಪ್ರಚಾರ*
ಉಸ್ತುವಾರಿ: ಪಬ್ಲಿಕೇಷನ್ ವಿಂಗ್ ಬಹರೈನ್.
ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಅಧ್ಯಕ್ಷ ಕಲಂದರ್ ಉಸ್ತಾದ್ ಧನ್ಯವಾದಗೈದು 3 ಸ್ವಲಾತ್ನೊಂದಿಗೆ ಸಭೆಯು ಕೊನೆಕೊಂಡಿತು.