ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ (SSF) ಅಮ್ಮುಂಜೆ ಸೆಕ್ಟರ್ ವತಿಯಿಂದ ULAZ ಕ್ಯಾಂಪ್ ದಿನಾಂಕ 24-9-19 ಮಂಗಳವಾರ ಮನ್ಸೂರ್ ಅಮ್ಮುಂಜೆಯವರ ಮನೆಯಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರಾದ ಸೈಫುಲ್ಲಾ ಸಖಾಫಿ ಬಡಕಬೈಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಖಲೀಲ್ ಅಬ್ಬೆಟ್ಟು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಜೀದ್ ಸಖಾಫಿ ಅಲ್ ಕಾಮಿಲ್ ಅಮ್ಮುಂಜೆಯವರು ವಿಶಿಷ್ಟ ರೀತಿಯಲ್ಲಿ “ನವ ಬದುಕಿಗೊಂದು ದಿಕ್ಸೂಚಿ” ಎಂಬ ವಿಷಯದಲ್ಲಿ ತರಗತಿಯನ್ನು ಮಂಡಿಸಿದರು.
ಸೆಕ್ಟರ್ ಸಮಿತಿಯ ಅಧೀನದಲ್ಲಿರುವ ವಿವಿಧ ಶಾಖೆಗಳ ಕಾರ್ಯಕರ್ತರು ಆಗಮಿಸಿದ್ದರು.