janadhvani

Kannada Online News Paper

ಅವಕಾಶವಾದಿಗಳೇ ಸಮಾಜದ ಶಾಂತಿಗೆ ಕಳಂಕತರದಿರಿ : ಅಶ್ರಫ್ ಕಿನಾರ ಮಂಗಳೂರು

ಮಂಗಳೂರು : ನಿನ್ನೆ ಮಂಗಳೂರು ಪಿಝಾ ಮಾಲ್ ನಲ್ಲಿ ನಡೆದ ಘಟನೆ, ತಂದ ನಂತರ ಶೋಷಿಯಲ್ ಮೀಡಿಯಾ ಸಮೇತ ನಡೆಯುವ ಎಲ್ಲಾ ಬೆಳವಣಿಗೆಗಳು ಖಂಡನೀಯ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಬಹಳಷ್ಟು ಶಾಂತಿ ಯತ್ತ ಮರಳಿದೆ.

ಅದರೆಡೆಯಲ್ಲಿ ಕೆಲವು ಅವಕಾಶವಾದಿಗಳು ಇಲ್ಲಿ ಯ ಶಾಂತಿ ಯ ಕದಡುವ ಯತ್ನ ನಡೆಯುತ್ತಿದೆ. ನಿನ್ನೆ ಮಾಲ್ ನಲ್ಲಿ ಏನು ನಡೆದಿದೆ ಅದೆಲ್ಲವೂ ಖಂಡನೀಯ ತಪ್ಪು ಯಾರಿಂದಾದರೂ ಇಲ್ಲಿ ಕಾನೂನು ಇದೆ ಅದರ ಮುಖಾಂತರ ಪ್ರತ್ಯಕ್ಷ ವೀಡಿಯೋ ಮಾಡಿ ಸಂಬಂಧಪಟ್ಟ ವರ ಸಂಪರ್ಕಿಸಿ ದೂರು ನೀಡಬಹುದು.

ಕಾನೂನು ಕೈ ಗೆತ್ತಿ ಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದರೊಂದಿಗೆ ಯಾವುದೇ ಅಮಾಕರಿಗೂ ತೊಂದರೆ ಯಾಗಬಾರದು. ಈ ಒಂದು ವಿಚಾರವನ್ನು ಶೋಷಿಯಲ್ ಮೀಡಿಯಾ ಮೂಲಕ ಬಿತ್ತರಿಸಿ ಧರ್ಮದ ಮದ್ಯೆ ವಿಷ ಬೀಜ ಬಿತ್ತಿ ಶಾಂತಿ ಕದಡುವ ಕೆಲವು ವಾಯ್ಸ್ ಗಳು ನಡೆಯುತ್ತಿವೆ. ಇದು ಆತಂಕಾರಿ. ಇದರೊಂದಿಗೆ ಇತ್ತೀಚೆಗೆ ಜೈ ಶ್ರೀರಾಮ್ ಹೆಸರಲ್ಲಿ ದೇಶದಲ್ಲಿ ನಡೆದ ಹಲವು ಘಟನೆಗಳ ಕೊಲೆಗಳಲ್ಲಿ ಮುಸ್ಲಿಂ ಸಮುದಾಯ ಸಂಯಮ ಪಾಲಿಸಿದೆ ಎಂಬುದನ್ನು ವಾಯ್ಸ್ ಬಿಡುವವರು ಮನಗಾನಬೇಕು.

ಯಾವುದೇ ವಿಷಯ ದಲ್ಲಿ ಧುಮುಕಿ ನಂತರ ಪಶ್ಚಾತಾಪ ಪಡುವ ಬಿಸಿ ರಕ್ತದ ಯುವಕರೇ ಅಮಾಯಕರ ಬಲಿಗೆ ಕಾರಣರಾಗದಿರಿ.
ಅಂತೂ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಅಮಾಯಕರ ಬಂದನವಾಗದಿರಲಿ
ಸಮಾಜದ ಶಾಂತಿ ಕದಡದಿರಲಿ.

error: Content is protected !! Not allowed copy content from janadhvani.com