ಮಾಣಿ : ಸುನ್ನೀ ಯುವಜನ ಸಂಘ ( ಎಸ್ ವೈ ಎಸ್ ) ಸೂರಿಕುಮೇರು ಬ್ರಾಂಚ್ ಕಮಿಟಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಯೂಸುಫ್ ಹಾಜಿ ಸೂರಿಕುಮೇರು, ಉಪಾಧ್ಯಕ್ಷರಾಗಿ ಸುಲೈಮಾನ್ ಸೂರಿಕುಮೇರು, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಮಾಣಿ,ಕೋಶಾಧಿಕಾರಿಯಾಗಿ ಹಸೈನ್ ಸಂಕ ಸೂರಿಕುಮೇರು, ಶಿಕ್ಷಣ ದ’ಅ್’ವಾ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು,ಇಸಾಬಾ ಅಮೀರ್ ಆಗಿ ಶೇರಾ ಇಬ್ರಾಹಿಂ ಮಾಣಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಸಂಕ, ಕರೀಂ ನೆಲ್ಲಿ, ಹಂಝ ಕಾಯರಡ್ಕ, ಹಮೀದ್ ಕಳಸಕೋಡಿ, ಅಹ್ಮದ್ ಗುಂಡ್ಯಡ್ಕ,ಇಬ್ರಾಹಿಂ ಸಅದಿ ಮಾಣಿ, ಬಶೀರ್ ಝುಹ್ರಿ ಸೂರಿಕುಮೇರು, ಅಬ್ದುಲ್ ಖಾದರ್ ಗುಂಡ್ಯಡ್ಕ ಇವರನ್ನು ಆರಿಸಲಾಯಿತು.
ಸಭೆಯಲ್ಲಿ ಚುನಾವಣಾ ವೀಕ್ಷಕರಾಗಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಯಾಕೂಬ್ ನಚ್ಚಬೊಟ್ಟು,ಇಬ್ರಾಹಿಂ ನಚ್ಚಬೊಟ್ಟು ಕಾರ್ಯ ನಿರ್ವಹಿಸಿದರು. ಸುಲೈಮಾನ್ ಸೂರಿಕುಮೇರು ಕಾರ್ಯಕ್ರಮವನ್ನು ಉದ್ಘಾಟಿಸಿ,ಬಶೀರ್ ಝುಹ್ರಿ ದುಆ ಗೈದರು,ರಝಾಕ್ ಮದನಿ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಸಲೀಂ ಮಾಣಿ ಧನ್ಯವಾದಗೈದರು.