ರಿಯಾದ್: ಸೌದಿಯಲ್ಲಿ ಪರವಾನಗಿ ಹೊಂದಿದ ಕೈಗಾರಿಕಾ ಸಂಸ್ಥೆಗಳ ವಿದೇಶಿ ಕಾರ್ಮಿಕರ ಲೆವಿಯನ್ನು ಐದು ವರ್ಷಗಳ ಕಾಲ ದೇಶವೇ ಭರಿಸಲಿದ್ದು, ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ಉದ್ಯಮದಲ್ಲಿ ಹೂಡಿಕೆಗೆ ಉತ್ತೇಜನ ನೀಡುವ, ಉತ್ಪಾದನೆ ಹೆಚ್ಚಿಸುವ ಸಲುವಾಗಿ ಪರವಾನಗಿ ಪಡೆದ ಕೈಗಾರಿಕಾ ಉದ್ಯಮದಲ್ಲಿನ ಕಾರ್ಮಿಕರ ಲೆವಿಯನ್ನು ದೇಶವು 5 ವರ್ಷಗಳವರೆಗೆ ಪಾವತಿಸಲಿದೆ. ಈ ಯೋಜನೆಯನ್ನು ಹಣಕಾಸು ಸಚಿವಾಲಯ ಮತ್ತು ಕಾರ್ಮಿಕ -ಸಾಮಾಜಿಕ ಅಭಿವೃದ್ಧಿ ಸಚಿವಾಲಯಗಳು ಸಹಯೋಗದೊಂದಿಗೆ ಜಾರಿಗೆ ತರಲಿದೆ. ಖಾಸಗಿ ವಲಯವನ್ನು ಪ್ರೋತ್ಸಾಹಿಸುವ ಯೋಜನೆಗೆ ನಿಗದಿಪಡಿಸಲಾದ ಬಜೆಟ್‌ನಿಂದ ಇದಕ್ಕಾಗಿ ಹಣ ಹೊಂದಿಸಲಾಗುವುದು ಎನ್ನಲಾಗಿದೆ.
ಇಂಧನ, ವಿದ್ಯುತ್ ಮತ್ತು ಹೈಡ್ರೋಕಾರ್ಬನ್ ವಸ್ತುಗಳ ಮೇಲಿನ ಶುಲ್ಕವನ್ನು ನಿರ್ಧರಿಸಲು ಕೈಗಾರಿಕಾ ಸಚಿವರು ಮತ್ತು ಇಂಧನ ಮತ್ತು ಹಣಕಾಸು ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಸಮಿತಿಯನ್ನು ರಚಿಸಲಾಗುವುದು. ಕೈಗಾರಿಕಾ ಸಚಿವಾಲಯದ ಸಹಕಾರದೊಂದಿಗೆ ವೆಚ್ಚವನ್ನು ಹೆಚ್ಚಿಸುವುದು, ದಂಡ ವಿಧಿಸುವುದು ಮತ್ತು ಸಂಸ್ಥೆಯನ್ನು ಸ್ಥಗಿತಗೊಳಿಸಲಾಗುವ ಕಾರ್ಯವನ್ನು ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.