janadhvani

Kannada Online News Paper

ಮುಚ್ಚಲ್ಪಟ್ಟಿದ್ದ ಸೌದಿ-ಇರಾಕ್‌ ಗಡಿ ಮತ್ತೆ ವಾಣಿಜ್ಯ ಬಳಕೆಗೆ ಮುಕ್ತ

ಅರಾರ್/ರಿಯಾದ್: ಮೂರು ದಶಕಗಳಿಂದ ಮುಚ್ಚಲ್ಪಟ್ಟಿದ್ದ  ಸೌದಿ ಅರೇಬಿಯಾ ಮತ್ತು ಇರಾಕ್‌ನ ಗಡಿಯಾಗಿರುವ ಅಲ್ ಜದೀದ ಅರಾರ್ ಕ್ರಾಸಿಂಗ್ ಅನ್ನು ಅಕ್ಟೋಬರ್ 15 ರಿಂದ ವಾಣಿಜ್ಯ ಬಳಕೆಗಾಗಿ ತೆರೆಯಲಾಗುವುದು ಎಂದು ಇರಾಕ್‌ನ ಸೌದಿ ರಾಯಭಾರಿ ಅಬ್ದುಲ್ ಅಝೀಝ್ ಅಲ್ ಶಮ್ರಿ ಹೇಳಿದ್ದಾರೆ.

1990 ರಲ್ಲಿ ಇರಾಕಿ ದೊರೆ ಸದ್ದಾಂ ಹುಸೈನ್ ಅವರ ಕುವೈತ್ ಆಕ್ರಮಣದೊಂದಿಗೆ ಸೌದಿ ಗಡಿಯನ್ನು ಮುಚ್ಚಲಾಗಿತ್ತು. ರಾಜತಾಂತ್ರಿಕ ಸಂಬಂಧಗಳ ಪುನರ್ ರಚನೆಯ ಭಾಗವಾಗಿ ಕುವೈತ್‌ನ ಆಕ್ರಮಣದ ಬಳಿಕ ಸೌದಿ ಅರೇಬಿಯಾ 2015 ರಲ್ಲಿ ಇರಾಕ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಿತು. ಪ್ರಸಕ್ತ ಹಜ್ ಸೀಝನ್‌ನಲ್ಲಿ ಹಜ್ಜಾಜ್‌ಗಳ ಆಗಮನಕ್ಕಾಗಿ ಮಾತ್ರ ಈ ಗಡಿಯನ್ನು ತೆರೆಯಲಾಗುತ್ತಿತ್ತು. 2017ರಲ್ಲಿ ಸೌದಿಯ ವಿದೇಶಾಂಗ ಸಚಿವರಾಗಿದ್ದ ಆದಿಲ್ ಅಲ್-ಝುಬೈರ್ ಅವರ ಇರಾಕ್ ಭೇಟಿಯೊಂದಿಗೆ ಗಡಿಯನ್ನು ಮತ್ತೆ ತೆರೆಯಲು ನಿರ್ಧರಿಸಲಾಯಿತು.

ಕಳೆದ ಹಲವು ವರ್ಷಗಳಿಂದ ಗಡಿ ವಿಚಾರದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಸೌದಿ ರಾಯಭಾರಿ ಅಬ್ದುಲ್ ಅಝೀಝ್ ಅಲ್-ಶಮ್ಮರಿ ಹೇಳಿದ್ದಾರೆ, ಉಭಯ ದೇಶಗಳ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತಿವೆ ಮತ್ತು ಅದು ಹೆಚ್ಚಿನ ವಾಣಿಜ್ಯ ವಹಿವಾಟಿಗೆ ದಾರಿ ಮಾಡಿಕೊಡಲಿವೆ ಎಂದು ಅವರು ಹೇಳಿದರು.

ಹೊಸ ನಿರ್ಧಾರದೊಂದಿಗೆ ಇರಾಕ್ ತನ್ನ ಅರಬ್ ಪರಂಪರೆಗೆ ಮರಳಲು ಮತ್ತು ಇರಾಕ್‌ನೊಂದಿಗಿನ ಇತರ ಅರಬ್ ರಾಷ್ಟ್ರಗಳ ಸಂಬಂಧವನ್ನು ಬಲಪಡಿಸಲು ಸಹಾಯವಾಗಲಿದೆ ಎಂದು ಇರಾಕ್‌ ಸಂಸತ್ ಸದಸ್ಯ ಜಾಬಿರ್ ಅಲ್-ಜಾಬಿರಿ ಹೇಳಿದ್ದಾರೆ.

error: Content is protected !! Not allowed copy content from janadhvani.com