janadhvani

Kannada Online News Paper

ದುಬೈ: ಉಚಿತ ಬ್ಯಾಗೇಜ್ ಮಿತಿಯನ್ನು ಹೆಚ್ಚಿಸಿದ ಏರ್ ಇಂಡಿಯಾ

ದುಬೈ: ದುಬೈಯಿಂದ ತಿರುವನಂತಪುರಂ ಹೊರತುಪಡಿಸಿ ಇತರ ಸೆಕ್ಟರ್ ‌ಗಳಿಗೆ ಏರ್ ಇಂಡಿಯಾ ತನ್ನ ಉಚಿತ ಬ್ಯಾಗೇಜ್ ಮಿತಿಯನ್ನು ಹೆಚ್ಚಿಸಿದೆ. ಎಕಾನಮಿಕ್ ಕ್ಲಾಸ್‌ನಲ್ಲಿರುವ ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 40 ಕೆಜಿ ಮತ್ತು ಬಿಸಿನೆಸ್ ಕ್ಲಾಸ್‌ನಲ್ಲಿ 50 ಕೆಜಿ ಹಾಗೂ ಕ್ಯಾಬಿನ್ ಬ್ಯಾಗೇಜ್ ಜೊತೆಗೆ ಸಾಗಿಸಬಹುದು. ಈ ತಿಂಗಳ 30 ರವರೆಗೆ ಪ್ರಯಾಣಿಕರಿಗೆ ಈ ವಿಶೇಷ ಸೌಲಭ್ಯಗಳು ದೊರೆಯುತ್ತವೆ.

ದುಬೈನಿಂದ ಕೊಚ್ಚಿ, ಕೋಝಿಕ್ಕೋಡ್, ಬೆಂಗಳೂರು, ಗೋವಾ, ಚೆನ್ನೈ, ಹೈದರಾಬಾದ್, ವಿಶಾಖಪಟ್ಟಣಂ, ದೆಹಲಿ, ಮುಂಬೈ, ಇಂದೋರ್ ಮತ್ತು ಕೋಲ್ಕತಾ ಮುಂತಾದ ಕಡೆಗೂ ಮತ್ತು ಶಾರ್ಜಾ-ಕೋಝಿಕ್ಕೋಡ್ ಸೇವೆಗಳಿಗೂ ಹೆಚ್ಚುವರಿ ಬ್ಯಾಗೇಜ್ ಸೌಲಭ್ಯ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ +971 65970444 ಮತ್ತು +971 42079400 ಸಂಪರ್ಕಿಸಬಹುದು.

error: Content is protected !! Not allowed copy content from janadhvani.com