janadhvani

Kannada Online News Paper

ಸಮಕಾಲೀನ ಸಮಸ್ಯೆಗಳಿಗೆ ಮುಸ್ಲಿಂ ಜಮಾಅತ್ ಧ್ವನಿಯಾಗಬೇಕಿದೆ- ಶಾಫಿ ಸಅದಿ

ಉಡುಪಿ: ಮುಸ್ಲಿಮರು ಒಗ್ಗಟ್ಟಾಗಿ ನಿಂತು ತಮ್ಮ ಆಶೋತ್ತರಗಳ ಬೇಡಿಕೆಯನ್ನು ಗಟ್ಟಿ ಧ್ವನಿಯಲ್ಲಿ ಕೇಳಿಕೊಳ್ಳಬೇಕಾದ ಕಾಲಘಟ್ಟ ಇದು. ಕ್ಷೀಣವಾದ ದ್ನಿನಿಯಲ್ಲಿ ಮೊಳಗುವ ಬೇಡಿಕೆಗಳಿಗೆ ಈ ಕಾಲದಲ್ಲಿ ಬೆಲೆಯಿಲ್ಲ,ಮುಸ್ಲಿಮ್ ಸಮುದಾಯ ಇಂದು ತನ್ನ ಶಕ್ತಿ ಆರ್ಜಿಸಿಕೊಳ್ಳಬೇಕಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಉಡುಪಿ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಮುಸ್ಲಿಮ್ ಜಮಾಅತ್ ಇದೇ ಆಶಯದಡಿಯಲ್ಲಿ
ಸಮುದಾಯದ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ಆಡಳಿತಾತ್ಮಕ, ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನೇಕ ಹೊಸ ಯೋಜನೆಗಳನ್ನು ನಡೆಸಲು ನಮ್ಮ “ವಿಷನ್ ನಲ್ಲಿದೆ ಎಂದರು.
ಮುಸ್ಲಿಂ ಜಮಾಅತ್ ರಾಜ್ಯ ಸಂಚಾಲಕರಾದ ಅಬ್ದುಲ್ ಹಮೀದ್ ಬಜ್ಪೆಯವರು ಮಾತನಾಡಿ, ಮುಸ್ಲಿಮರ ಸಾಮೂಹಿಕ ಜೀವನದಲ್ಲಿ ಮೊಹಲ್ಲಾಗಳು ನಿರ್ವಹಿಸುವ ಪಾತ್ರ ಪ್ರಧಾನವಾದುದು. ಎಲ್ಲಾ ಮೊಹಲ್ಲಾಗಳನ್ನು ಒಟ್ಟುಗೂಡಿಸುವ `ಸಮಗ್ರ ಮೊಹಲ್ಲಾ’ ಯೋಜನೆ ಮುಸ್ಲಿಮ್ ಜಮಾಅತ್‍ನ ಮುಂದಿದೆ. ಮೊಹಲ್ಲಾದ ಅಭಿವೃದ್ಧಿ, ಅದರ ಎಲ್ಲಾ ಸದಸ್ಯರ ಅಭಿವೃದ್ಧಿ ಈ `ಸಮಗ್ರ ಮೊಹಲ್ಲಾ’ ಯೋಜನೆಯ ಗುರಿಯಾಗಿದೆ ಎಂದು ಬಜ್ಪೆ ಹಮೀದ್ ಹೇಳಿದರು.ಡಾ ಮೌಲಾನಾ ನಝೀರ್ ಅಝ್ಹರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು , ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಜಿ ಎಮ್ ಎಸ್ ರಝಾಕ್, ಇಹ್ಸಾನ್ ಕರ್ನಾಟಕ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ಅಡ್ವಕೆಟ್ ಹಂಝತ್, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ, ಎಸ್ ಎಮ್ ಎ ಜಿಲ್ಲಾಧ್ಯಕ್ಷ ಮನ್ಸೂರು ಕೋಡಿ,ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷ ಹಾಜಿ ಕೆ ಮೊಯಿದಿನ್ ಗುಡ್ವಿಲ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಕೆ ಪಿ ಇಬ್ರಾಹಿಮ್ ಮಟಪಾಡಿ, ಎಸ್ ಡಿ ಐ ಜಿಲ್ಲಾ ಅಧ್ಯಕ್ಷ ಸಯ್ಯಿದ್ ಫರೀದ್ ಉಡುಪಿ, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಅಬ್ದುರ್ರವೂಫ್ ಖಾನ್ ಕುಂದಾಪುರ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಅಂಜದಿ, ಸುನ್ನಿ ಸೆಂಟರ್ ಕೋಶಾಧಿಕಾರಿ ಎಮ್ ಎಚ್ ಬಿ ಮುಹಮ್ಮದ್ ಮೂಳೂರು ಹಾಗೂ ಮತ್ತಿತರರು ಹಾಜರಿದ್ದರು ಮುಸ್ಲಿಂ ಜಮಾಅತ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಸ್ವಾಗತಿಸಿ ಅಡ್ವಕೆಟ್ ಇಲ್ಯಾಸ್ ನಿರೂಪಿಸಿ ಸುಬ್ಹಾನ್ ಅಹ್ಮದ್ ವಂದಿಸಿದರು.

error: Content is protected !! Not allowed copy content from janadhvani.com