ರಿಯಾದ್: ಕಾರ್ಮಿಕರ ರಜಾ ವೇತನವನ್ನು ವಾರ್ಷಿಕ ರಜೆಯ ಮುಂಚಿತವಾಗಿ ಸಂದಾಯ ಮಾಡುವಂತೆ ಸೌದಿ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ. ಕಾರ್ಮಿಕರಿಗೆ ವರ್ಷಕ್ಕೆ 21 ದಿನಗಳಿಗಿಂತ ಕಡಿಮೆಯಲ್ಲದ ರಜೆ ಪಡೆಯಲು ಅರ್ಹತೆ ಇದೆ ಎಂದು ಮಾನವ ಹಕ್ಕುಗಳ ಆಯೋಗ ತಿಳಿಸಿದೆ.
ಅಲ್ಲದೆ, ಸತತ ಐದು ವರ್ಷಗಳ ಸೇವೆಯನ್ನು ಪೂರೈಸಿದ ಕಾರ್ಮಿಕನಿಗೆ ವರ್ಷಕ್ಕೆ 30 ದಿನಗಳಿಗಿಂತ ಕಡಿಮೆಯಲ್ಲದ ವಾರ್ಷಿಕ ರಜೆ ಪಡೆಯಲು ಅರ್ಹತೆ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಕಾರ್ಮಿಕನಿಗೆ ಸಂಬಳದೊಂದಿ ವಾರ್ಷಿಕ ರಜೆ ನೀಡಬೇಕು ಎಂದಿದೆ.
ವಾರ್ಷಿಕ ರಜೆಗೆ ಮುಂಚಿತವಾಗಿ ರಜಾ ವೇತನವನ್ನು ತಲುಪಿಸಬೇಕು. ಕೆಲಸಗಾರನು ಕೆಲಸ ತ್ಯಜಿಸುವುದಾದರೆ ಸೇವೆಯ ಅವಧಿಗೆ ಅನುಗುಣವಾಗಿ ಅರ್ಹ ವಾರ್ಷಿಕ ರಜಾ ದಿನಗಳ ಸಂಭಾವನೆಯನ್ನು ಪಡೆಯಲು ಅರ್ಹನಾಗಿರುತ್ತಾನೆ.
ಹೆಂಡತಿ, ಗಂಡ, ಪೋಷಕರು ಅಥವಾ ಮಕ್ಕಳ ಸಾವಿನ ಸಂದರ್ಭದಲ್ಲಿ, ಕೆಲಸಗಾರನಿಗೆ ಐದು ದಿನಗಳ ರಜೆ ಪೂರ್ಣ ವೇತನದಲ್ಲಿ ಲಭಿಸುವ ಅವಕಾಶವಿದೆ. ಮದುವೆಗೂ ಇದೇ ರೀತಿಯ ರಜೆಯನ್ನು ನೀಡಲಾಗುವುದು.
ಹಜ್ ನಿರ್ವಹಿಸದ ಕಾರ್ಮಿಕನಿಗೆ ಸೇವಾ ಅವಧಿಯಲ್ಲಿ ಒಮ್ಮೆ ಹಜ್ ನಿರ್ವಹಿಸಲು ಅರ್ಹತೆ ಇದೆ, ಬಕ್ರೀದ್ ರಜೆ ಸಹಿತ ಹತ್ತು ದಿನಗಳಿಗಿಂತ ಕಡಿಮೆಯಾಗದೆ, ಹದಿನೈದು ದಿನಗಳಿಗಿಂತ ಮೀರದ ಸಂಬಳ ಸಹಿತ ರಜೆ ಪಡೆಯುವ ಅರ್ಹತೆ ಇದೆ.
ನೌಕರನು ವೇತನ ರಹಿತ ರಜೆಯನ್ನು ಉದ್ಯೋಗದಾತರ ಒಪ್ಪಿಗೆಯೊಂದಿಗೆ ಬಳಸಬಹುದು ಎಂದು ಮಾನವ ಹಕ್ಕುಗಳ ಆಯೋಗ ವ್ಯಕ್ತಪಡಿಸಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ