ದುಬೈ: ಬಾಹ್ಯಾಕಾಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸುಕೊಳ್ಳುವ 19 ನೇ ದೇಶವಾಗಿ ಯುಎಇ ಹೊರ ಹೊಮ್ಮಲಿದೆ. ಗಗನಯಾತ್ರಿಕ ಹಝ್ಝ ಅಲ್ ಮನ್ಸೂರಿ ಮುಂದಿನ ತಿಂಗಳು 25 ರಂದು ಸಂಜೆ 5.56 ಕ್ಕೆ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳಸಲಿದ್ದಾರೆ.
ಕಝಕಿಸ್ತಾನದ ಬೈಕನ್ನೂರ್ ಕೋಸ್ಮೋ ಡ್ರೋಮಿನಿಂದ ಸೋಯುಸ್ 15 ಎಂಬ ನೌಕೆಯಲ್ಲಿ ಅವರು ತೆರಳಲಿದ್ದಾರೆ. ರಷ್ಯಾದ ಕಮಾಂಡರ್ ಒಲೆಗ್ ಸ್ಕ್ರಿಪೊಷ್ಕಾ ಮತ್ತು ಯುಎಸ್ ಜೆಸ್ಸಿಕಾ ಮೀರ್ ಸಹಯಾತ್ರಿಕರಾಗಲಿದ್ದು, ಅಕ್ಟೋಬರ್ 4 ರಂದು ಐಎಸ್ಎಸ್ನಿಂದ ಹಿಂತಿರುಗಲಿದ್ದಾರೆ. ಸೋಯೂಸ್ ಬಾಹ್ಯಾಕಾಶ ನೌಕೆಯು 7.48 ಮೀಟರ್ ಉದ್ದ ಮತ್ತು 2.71 ಮೀಟರ್ ವ್ಯಾಸವನ್ನು ಹೊಂದಿದೆ. ಆರು ಗಂಟೆಗಳಲ್ಲಿ ಬಾಹ್ಯಾಕಾಶ ನೌಕೆ ತಲುಪುವ ನಿರೀಕ್ಷೆಯಿದೆ.
ಹಝ್ಝ ಅಲ್ ಮನ್ಸೂರಿ ಮತ್ತು ಅವರ ಬದಲಿ ಸುಲ್ತಾನ್ ಅಲ್-ನಯಾದಿ ಅಂತಿಮ ಹಂತದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದರು. ತುರ್ತು ಪರಿಸ್ಥಿತಿ ಎದುರಾದಲ್ಲಿ ಹಾಸಾ ಹೊರಡಲು ಸಾಧ್ಯವಾಗದಿದ್ದರೆ ಅಲ್-ನಯಾದಿ ಅವರನ್ನು ಪರಿಗಣಿಸಲಾಗುವುದು.

ಮುಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಕೇಂದ್ರದ ಸಹಾಯಕ ಮಹಾನಿರ್ದೇಶಕ ಸಲೀಮ್ ಅಲ್-ಮುರ್ರಿ ಮಾತನಾಡಿ, ಯುಎಇಯು ಬಾಹ್ಯಾಕಾಶ ಕೇಂದ್ರವನ್ನು ಹೊಂದಿರುವ 19 ನೇ ದೇಶವಾಗಲು ತಯಾರಿ ನಡೆಸುತ್ತಿದೆ. 18 ದೇಶಗಳಿಂದ 230 ಕ್ಕೂ ಹೆಚ್ಚು ಪ್ರಯಾಣಿಕರು ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿದ್ದಾರೆ ಎಂದರು.
ಪವಿತ್ರ ಗ್ರಂಥದೊಂದಿಗೆ ಹೆಮ್ಮೆಯ ಪ್ರಯಾಣ
ಪವಿತ್ರ ಕುರ್ಆನ್ನೊಂದಿಗೆ ಬಾಹ್ಯಾಕಾಶ ಕೇಂದ್ರಕ್ಕೆ ಹಝ್ಝ ಅಲ್ ಮನ್ಸೂರಿ ಪ್ರಯಾಣ ಬೆಳೆಸಲಿದ್ದಾರೆ. ರೇಷ್ಮೆಯಿಂದ ತಯಾರಿಸಿದ ಯುಎಇಯ ಧ್ವಜ, ಅಧ್ಯಕ್ಷ ಶೈಖ್ ಝಾಯಿದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅಪೊಲೊ 17 ತಂಡದೊಂದಿಗೆ ನಿಂತಿರುವ ಪೋಟೊ, ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಖ್ತೂಮಿಯ ಆತ್ಮಕಥೆ ‘ಕಿಸ್ಸತೀ’ ಸ್ವದೇಶೀ ಆಹಾರ, ಕುಟುಂಬದ ಫೋಟೊ, ಅಗತ್ಯ ಸಾಮಾಗ್ರಿಗಳು ಮತ್ತು ಗಾಫ್ ಮರದ 30 ಬೀಜಗಳನ್ನು ಕೂಡ ಕೊಂಡೊಯ್ಯಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ